‘ರಕ್ತದಾನದಿಂದ ಹೃದಯದ ಆರೋಗ್ಯ ವೃದ್ಧಿ’

Contributed byjamkhandikar.sushant080@gmail.com|Vijaya Karnataka

ಮಜಲಟ್ಟಿ ಗ್ರಾಮದಲ್ಲಿ ದಿ. ಬಿ.ಆರ್‌. ಸಂಗಪ್ಪಗೋಳ ಅವರ 82 ನೇ ಜನ್ಮದಿನಾಚರಣೆ ನಿಮಿತ್ತ ರಕ್ತದಾನ ಶಿಬಿರ ನಡೆಯಿತು. ಪ್ರಗತಿ ಶಿಕ್ಷಣ ಸಂಸ್ಥೆ ಹಾಗೂ ಅಂಕುರ ಬ್ಲಡ್‌ ಬ್ಯಾಂಕ್‌ ಜಂಟಿಯಾಗಿ ಆಯೋಜಿಸಿದ್ದ ಈ ಶಿಬಿರದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯ ಸಂಗಪ್ಪಗೋಳ ಅವರು ರಕ್ತದಾನದ ಮಹತ್ವ ತಿಳಿಸಿದರು. ರಕ್ತದಾನದಿಂದ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. 40 ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.

enhancing heart health through blood donation the importance of protecting the heart

ವಿಕ ಸುದ್ದಿಲೋಕ ಚಿಕ್ಕೋಡಿ ರಕ್ತದಾನ ಮಾಡುವುದರಿಂದ ಇನ್ನೊಬ್ಬರಿಗೆ ಜೀವದಾನ ನೀಡುವುದರ ಜತೆಗೆ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಲೋಕೋಪ ಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯ ಸಂಗಪ್ಪಗೋಳ ಹೇಳಿದರು. ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿಸಹಕಾರಿ ಧುರೀಣ, ಸಾಮಾಜಿಕ ಹೋರಾಟಗಾರ ದಿ. ಬಿ.ಆರ್ . ಸಂಗಪ್ಪಗೋಳ ಅವರ 82 ನೇ ಜನ್ಮದಿನಾಚರಣೆ ನಿಮಿತ್ತ ಗ್ರಾಮೀಣ ಮಜಲಟ್ಟಿಯ ಪ್ರಗತಿ ಶಿಕ್ಷಣ ಸಂಸ್ಥೆ ಹಾಗೂ ಚಿಕ್ಕೋಡಿಯ ಅಂಕುರ ಬ್ಲಡ್ ಬ್ಯಾಂಕ್ ಜಂಟಿ ಆಶ್ರಯದಲ್ಲಿಬಿ.ಆರ್ .ಎಸ್ . ನಸಿಂರ್ ಗ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿಅವರು ಮಾತನಾಡಿದರು. ಅತಿಥಿಯಾಗಿ ಭಾಗವಹಿಸಿದ್ದ ಚಿಕ್ಕೋಡಿ ಸಂಸದರ ಅಪ್ತಸಹಾಯಕ ರಾಮಕೃಷ್ಣ ಪಾನಬುಡೆ ಮಾತನಾಡಿದರು. ರಕ್ತದಾನ ಮಾಡಿದ 40 ಕ್ಕೂ ಹೆಚ್ಚು ಯುವ ಜನರಿಗೆ ಹೆಲ್ಮೆಟ್ ನೀಡಿ ಗೌರವಿಸಲಾಯಿತು. ಸಾಹಿತಿ ಎಸ್ .ವೈ.ಹಂಜಿ, ಪ್ರಾಚಾರ್ಯ ದುಂಡಪ್ಪ ಮಾನೆಪ್ಪಗೋಳ, ಸಂಸ್ಥೆಯ ಅಧ್ಯಕ್ಷ ರುದ್ರಪ್ಪ ಸಂಗಪ್ಪಗೋಳ, ವೀರಭದ್ರ ಸಂಗಪ್ಪಗೋಳ, ಅಪ್ಪಣ್ಣ ನಾಯಿಕ, ಶ್ರೀಧರ ಪಾಟೀಲ, ಅಪ್ಪಾಸಾಹೇಬ ಸನದಿ, ಸ್ವಪ್ನಿಲ್ ಪಾಟೀಲ, ಕವಿತಾ ಪಾಟೀಲ ಮತ್ತಿತರರಿದ್ದರು.