ವಿಕ ಸುದ್ದಿಲೋಕ ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದಲ್ಲಿಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ತಾಲೂಕಿನ ಜ್ಞಾನ ವಿಕಾಸ ಕೇಂದ್ರಗಳ ಮತ್ತು ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಜರುಗಿತು. ಯೋಜನೆ ಜಿಲ್ಲಾನಿರ್ದೇಶಕಿ ನಾಗರತ್ನಾ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿ, ‘‘ಜ್ಞಾನ ವಿಕಾಸ ಯೋಜನೆ ಯಡಿ ವಾತ್ಸಲ್ಯ ಮನೆ, ನಿರ್ಗತಿಕರಿಗೆ ಮಾಸಾಶನ ಸೇರಿದಂತೆ ಮಹಿಳೆಯರ ಸರ್ವಾಂಗೀಣ ಪ್ರಗತಿಗೆ ನೆರವಾಗಿದೆ,’’ಎಂದರು. ನ್ಯಾಯವಾದಿ ಎಂ.ಬಿ.ಪಾಟೀಲ, ಮಹಿಳೆ ಯರ ಮತ್ತು ಮಕ್ಕಳ ದೌರ್ಜನ್ಯ ತಡೆಗಟ್ಟುವಿಕೆಗೆ ಕಾನೂನು ಕುರಿತು ಮಾಹಿತಿ ನೀಡಿದರು. ಡಾ.ಸುಜಾತಾ ಪವಾರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಯೋಜನಾಧಿಕಾರಿ ಮಹೇಶ್ವರಪ್ಪ ಜಿ., ವೆಂಕಟೇಶ ಗೌಡ, ವಿದ್ಯಾ ಪೂಜೇರಿ, ಆಶಾ ಬೋಗೂರ, ಮಂಜುಳಾ ಚಂದ್ರಶೇಖರ, ಸುರೇಖಾ ಹೆಬ್ಬಳ್ಳಿ, ಡಾ.ಯಲ್ಲಪ್ಪ ಬಂತೆ, ಜ್ಞಾನ ವಿಕಾಸ ಕೇಂದ್ರಗಳ ಸದಸ್ಯರು, ಸಂಯೋಜಕಿ ಯರು ಹಾಗೂ ಸ್ಥಳೀಯ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

