‘ಕಲಿಕಾ ಹಬ್ಬದಿಂದ ಅರಿವಿನ ಆಸಕ್ತಿ ಹೆಚ್ಚಳ’

Contributed byjamkhandikar.sushant080@gmail.com|Vijaya Karnataka

ಚಿಕ್ಕೋಡಿ ತಾಲೂಕಿನ ಕಬ್ಬೂರು ಪಟ್ಟಣದಲ್ಲಿ 'ಎಫ್‌ಎಲ್‌ಎನ್‌ ಕಲಿಕಾ ಹಬ್ಬ- 2026' ಕಾರ್ಯಕ್ರಮ ನಡೆಯಿತು. ಈ ಹಬ್ಬಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಂದು ಕಲಿಕೆಯನ್ನು ಸಂತಸದಾಯಕವಾಗಿಸುತ್ತವೆ. 1ರಿಂದ 5ನೇ ತರಗತಿಯ ಮಕ್ಕಳಿಗಾಗಿ ಆಯೋಜಿಸುವ ಈ ಚಟುವಟಿಕೆಗಳು ಸಮುದಾಯದಲ್ಲಿ ಶಾಲೆಗಳ ಮೇಲಿನ ನಂಬಿಕೆ ಹೆಚ್ಚಿಸುತ್ತವೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಕಾಡಪ್ಪಾ ಮಾಳ್ಯಾಗೋಳ ಹೇಳಿದರು.

importance of fln learning festival for child development

ವಿಕ ಸುದ್ದಿಲೋಕ ಚಿಕ್ಕೋಡಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಕಲಿಕೆಯ ಮೇಲಿನ ಆಸಕ್ತಿ ಹೆಚ್ಚಿಸಲು ಎಫ್ ಎಲ್ ಎನ್ ಕಲಿಕಾ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಕಾಡಪ್ಪಾ ಮಾಳ್ಯಾಗೋಳ ಹೇಳಿದರು. ತಾಲೂಕಿನ ಕಬ್ಬೂರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಸೋಮವಾರ ನಡೆದ ಕಬ್ಬೂರು ಕ್ಲಸ್ಟರ್ ಮಟ್ಟದ ‘ಎಫ್ ಎಲ್ ಎನ್ ಕಲಿಕಾ ಹಬ್ಬ- 2026’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘‘ಕಲಿಕಾ ಹಬ್ಬಗಳು ಮಕ್ಕಳಲ್ಲಿಅಡಗಿರುವ ಪ್ರತಿಭೆ ಹೊರತಂದು, ಕಲಿಕೆಯನ್ನು ಸಂತಸದಾಯಕವಾಗಿಸುತ್ತವೆ. 1ರಿಂದ 5ನೇ ತರಗತಿಯ ಮಕ್ಕಳಿಗಾಗಿ ಆಯೋಜಿಸುವ ಈ ಚಟುವಟಿಕೆಗಳು ಸಮುದಾಯದಲ್ಲಿಶಾಲೆಗಳ ಮೇಲಿನ ನಂಬಿಕೆ ಹೆಚ್ಚಿಸುತ್ತವೆ,’’ ಎಂದರು. ಕಾರ್ಯಕ್ರಮದಲ್ಲಿಬಿ.ಎಂ. ಶಿವಾಯಗೋಳ, ಎಸ್ .ಬಿ. ಕಾಂಬಳೆ, ಕಲ್ಲೇಶ್ವರ ಕಡಕಬಾವಿ, ದೀಪಕ ಬಾಗೇವಾಡಿ, ಸದಾಶಿವ ಕೆರ್ಯಾಗೋಳ, ಚಂದ್ರಪ್ಪಾ ಗಾಣಿಗೇರ, ಅರವಿಂದ ಕಳಸಪ್ಪಗೋಳ, ಪಾಂಡುರಂಗ ಡಿ.ಜೆ., ಸಚಿನ್ ಕುಂಭೋಜಿ, ಜಯಶ್ರೀ ಕಡೆಮನಿ, ಶೈಲಾ ನಾಗಮೋತಿ, ವೈಶಾಲಿ ಚೋಂಚನ್ನವರ, ಚಂದ್ರಕಲಾ ಮೂಡಲಗಿ, ಮಾಲಾ ಹಿರೇಕುರಬರ, ಅಶ್ವಿನಿ ದಾನಪ್ಪಗೋಳ, ಅಶ್ವಿನಿ ಪಿ.ಎಸ್ ., ಜೆ.ಪಿ. ಹಂದಿಗುಂದ, ಪೂನಂ ಶೇಡಬಾಳೆ, ಪೂಜಾ ಶಿಂಧೆ ಮತ್ತಿತರರಿದ್ದರು.