ವಿಕ ಸುದ್ದಿಲೋಕ ಬಾವನಸೌಂದತ್ತಿ ಕ್ಷೇತ್ರದ ಪ್ರತಿ ಗ್ರಾಮದಲ್ಲಿಯೂ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಎಲ್ಲಸಮುದಾಯದವರ ಸ್ಮಶಾನ ಭೂಮಿ ಅಭಿವೃದ್ಧಿಪಡಿಸುವುದು ನಮ್ಮ ಗುರಿ ಎಂದು ರಾಯಬಾಗ ಶಾಸಕ ಡಿ.ಎಂ.ಐಹೊಳೆ ಹೇಳಿದರು. ಸಮೀಪದ ನಸಲಾಪುರ ಗ್ರಾಮದಲ್ಲಿಜಿಪಂ, ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ 5 ಲಕ್ಷ ವೆಚ್ಚದಲ್ಲಿಜೈನ ಸಮುದಾಯದ ಸ್ಮಶಾನಭೂಮಿ ಅಭಿವೃದ್ಧಿಗೆ ಕಾಮ ಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘‘ಸಿಬಿಎಸ್ ಎಸ್ ಕಾರ್ಖಾನೆ ನಿರ್ದೇಶಕ ಭರತೇಶ ಬನವಣೆ ಮಾತನಾಡಿ, ಶಾಸಕರು ನೀಡಿದ ಅನೇಕ ಯೋಜನೆಗಳಿಂದ ಗ್ರಾಮಕ್ಕೆ ಸ್ವಚ್ಛ, ಸುಂದರ ಗ್ರಾಮ ಪುರಸ್ಕಾರ ದೊರೆತಿದೆ,’’ ಎಂದರು. ಗ್ರಾಪಂ ಅಧ್ಯಕ್ಷ ಅರುಣ ನಾಯಕ, ಚೌಗೊಂಡ ಪಾಟೀಲ, ಬಾಳಾಸಾಹೇಬ ಪಾಟೀಲ, ಜೈಪಾಲ ಬನವಣೆ, ಅನಿಲ ಪಾಟೀಲ, ಮಹಾದೇವ ಕಾಂಬಳೆ, ವರ್ಧಮಾನ ಬನವಣೆ, ಸುಕುಮಾರ ಪರಮಾಜೆ, ಶರತ್ ಪಾಟೀಲ, ಮಹಾವೀರ ಪರಮಾಜೆ, ನಿಂಗಪ್ಪ ಕುಂಬಾರ, ರಾಜು ಪರಮಾಜೆ, ಯಾಕೂಬ್ ತಾಂಬಟ ಇತರರು ಉಪಸ್ಥಿತರಿದ್ದರು.

