ವಿಕ ಸುದ್ದಿಲೋಕ ಬೆಂಗಳೂರು ಸಿಇಟಿ ಪರೀಕ್ಷೆಯ ಸೀಟು ಹಂಚಿಕೆ ವೇಳೆ ನಾನಾ ಕೋಟಾಗಳಿಗೆ ಮೀಸಲಾದ ಸೀಟು ಗಳಿಗೆ ಅಭ್ಯರ್ಥಿಗಳು ಇಲ್ಲದಿದ್ದರೆ ಮೊದಲ ಸುತ್ತಿ ನಲ್ಲಿಯೇ ಸಾಮಾನ್ಯ ಕೋಟಾ ಅಡಿಯಲ್ಲಿಹಂಚಿಕೆ ಮಾಡಲು ಕೆಇಎ ಚಿಂತನೆ ನಡೆಸಿದೆ. ಎಂಜಿನಿಯರಿಂಗ್ ಸೇರಿದಂತೆ ನಾನಾ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಅರ್ಹತೆ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗು ತ್ತದೆ. ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಎನ್ ಸಿಸಿ, ಸ್ಕೌಟ್ಸ್ -ಗೈಡ್ಸ್ ಸೇರಿದಂತೆ ಹಲವು ಕೋಟಾಗಳಿಗೆ ಸೀಟು ಮೀಸಲಿಡಲಾಗುತ್ತದೆ. ಇದುವರೆಗೆ ಮೊದಲ ಸುತ್ತಿನ ಸೀಟು ಹಂಚಿಕೆಯ ಬಳಿಕ ನಾನಾ ಕೋಟಾಗಳ ಸೀಟು ಭರ್ತಿಯಾಗದೆ ಉಳಿದರೆ 2 ಹಾಗೂ 3ನೇ ಸುತ್ತಿಗೆ ಪರಿಗಣಿಸಲಾಗುತ್ತಿತ್ತು. 2026-27ನೇ ಸಾಲಿನಿಂದ ಮೊದಲ ಸುತ್ತಿನಲ್ಲಿಯೇ ಎಲ್ಲಾಸೀಟುಗಳನ್ನು ಹಂಚಿಕೆ ಮಾಡುವುದಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ .ಪ್ರಸನ್ನ ತಿಳಿಸಿದ್ದಾರೆ. ಸದ್ಯ ನಾನಾ ಕೋಟಾಗಳಿಗೆ ಅಭ್ಯರ್ಥಿಗಳು ಇಲ್ಲದೆ ಖಾಲಿ ಉಳಿಯುತ್ತಿತ್ತು. ಇದರಿಂದ ಇತರೆ ವಿದ್ಯಾರ್ಥಿಗಳಿಗೆ ಸೀಟುಗಳು ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಪ್ರತಿ ವರ್ಷವೂ ವಿವಿಧ ಕೋಟಾಗಳ ಸೀಟುಗಳು ಖಾಲಿ ಉಳಿಯುತ್ತಿದ್ದು, 2025-26ನೇ ಸಾಲಿನಲ್ಲಿಕ್ರೀಡಾ ಕೋಟಾದ 304 ಸೀಟುಗಳು ಲಭ್ಯವಿದ್ದು, ಈ ಪೈಕಿ 212 ಸೀಟುಗಳು, ವಿಶೇಷಚೇತನರ ಕೋಟಾದ 4,681 ಸೀಟುಗಳ ಪೈಕಿ 4,217 ಸೀಟುಗಳು ಹಾಗೂ 121 ಮಾಜಿ ಸೈನಿಕರ ಕೋಟಾದ 86 ಸೀಟುಗಳು ಭರ್ತಿಯಾಗದೆ ಉಳಿದಿವೆ ಎಂದು ಕೆಇಎ ಮಾಹಿತಿ ನೀಡಿದೆ.

