ಆಧಿಶ್ರಮಕ್ಕೆ ಕೋರ್ಟ್ ತಾಧಿತ್ಕಾಲಿಕ ರಿಲೀಫ್

Contributed bysrikanth.g@timesgroup.com|Vijaya Karnataka

ಬೆಂಗಳೂರಿನ ಕಗ್ಗಲೀಪುರದಲ್ಲಿನ ಸರ್ಕಾರಿ ಜಮೀನು ಮತ್ತು ಕೆರೆ ಒತ್ತುವರಿ ಆರೋಪ ಪ್ರಕರಣದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಗುರುವಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಬಿಎಂಟಿಎಫ್ ದಾಖಲಿಸಿರುವ ಎಫ್‌ಐಆರ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಜ.21ರವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಬಿಎಂಟಿಎಫ್‌ಗೆ ಸೂಚಿಸಿದೆ. ಅರ್ಜಿದಾರರ ಪರ ವಕೀಲರು ಒತ್ತುವರಿ ಆರೋಪ ಸುಳ್ಳು ಎಂದಿದ್ದಾರೆ.

high court grants temporary relief to art of living founder

ವಿಕ ಸುದ್ದಿಲೋಕ ಬೆಂಗಳೂರು ನಗರದ ಕಗ್ಗಲೀಪುರದ ಬಳಿ ಸರಕಾರಿ ಜಮೀನು ಮತ್ತು ಕೆರೆ ಒತ್ತುವರಿ ಆರೋಪ ಪ್ರಕರಣ ಸಂಬಂಧ ಆರ್ಟ್ ಆಫ್ ಲಿವಿಂಗ್ ನ ಗುಧಿರುಧಿದೇವ ರವಿಶಂಕರ್ ಅಧಿವಧಿರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಬಿಎಂಟಿಎಫ್ ದಾಖಲಿ ಸಿರುವ ಪ್ರಕರಣದ ಎಫ್ ಐಆರ್ ಪ್ರಶ್ನಿಸಿ ಶ್ರೀ ಶ್ರೀ ರವಿ ಶಂಕರ್ ಸಲ್ಲಿಸಿದ್ದ ಅರ್ಜಿ ಕುಧಿರಿತು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಬಳಿಕ ಜ.21ರವರೆಗೆ ಕ್ರಮ ಕೈಗೊಳ್ಳದಂತೆ ಬಿಎಂಟಿಎಫ್ ಗೆ ಸೂಚನೆ ನೀಡಿತಲ್ಲದೆ, ಅರ್ಜಿದಾರರ ವಿರುದ್ಧ ದಾಖಲೆ ಗಳಿದ್ದರೆ ಹಾಜರುಪಡಿಸಲು ಎಸ್ ಪಿಪಿಗೆ ಸೂಚನೆ ನೀಡಿ ವಿಚಾರಣೆ ಯನ್ನು ಜ.21ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪಿ.ಪ್ರಸನ್ನ ಕುಮಾರ್ , ‘‘ಅರ್ಜಿದಾರರ ವಿರುದ್ಧ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದ ಸರ್ವೇ ನಂಬರ್ 46, 135, 137, 150, 160, 164/1 ಮತ್ತು 164/2ರಲ್ಲಿನ ಹಲವೆಡೆ ಸರಕಾರಿ ಜಮೀನು, ಕೆರೆ ಮತ್ತು ರಾಜಕಾಲುವೆ ಒತ್ತುವರಿ ಮಾಡಿರುವ ಸುಳ್ಳು ಆರೋಪ ಹೊರಿಸಲಾಗಿದೆ. ವಾಸ್ತವದಲ್ಲಿಒತ್ತುವರಿ ಮಾಡಲಾಗಿದೆ ಎಂಬ ಜಮೀನು ಗಳ ಮಾಲೀಕತ್ವಕ್ಕೂ ಮತ್ತು ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ಒತ್ತುವರಿ ಕಾಲಂನಲ್ಲೂಅವರ ಹೆಸರಿಲ್ಲ. ಪೊಲೀಸರು ಅರ್ಜಿದಾರರ ಜತೆಗೆ ಇತರ ನಾಲ್ವರು ಭೂಮಾಲೀಕರಿಗೆ ನೋಟಿಸ್ ನೀಡಿದ್ದಾರೆ. ಆದರೆ, ಶ್ರೀಗಧಿಳಿಗೆ ಯಾವುದೇ ನೋಟಿಸ್ ನೀಡಿಲ್ಲ,’’ ಎಂದರು. ಇದೇ ಆರೋಪಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿತ್ತು. ಅದರಲ್ಲಿಶ್ರೀಗಧಿಳನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಅಂತಿಮವಾಗಿ ತಹಸೀಲ್ದಾರ್ ನೀಡಿದ್ದ ವರದಿಯಲ್ಲಿಅರ್ಜಿದಾರರ ವಿರುದ್ಧ ಯಾವುದೇ ಸರಕಾರಿ ಜಮೀನು ಒತ್ತುವರಿ ಆರೋಪ ಇರಲಿಲ್ಲ. ಆದರೆ, ಪಿಐಎಲ್ ವಿಲೇವಾರಿ ನಂತರವೂ ಶ್ರೀ ಶ್ರೀ ವಿರುದ್ಧ ಎಫ್ ಐಆರ್ ದಾಖಲಿಸಿ ಮಾನಸಿಕ ತೊಂದರೆ ನೀಡಲಾಗುತ್ತಿದೆ. ಹಾಗಾಗಿ, ಕರ್ನಾಟಕ ಭೂ ಕಂದಾಯ ಕಾಯಿದೆ- 1964ರ ಕಲಂ 192 ‘ಎಧಿ’ ಅಡಿ ದಾಖಲಿಸಿ ರುವ ಎಫ್ ಐಆರ್ ರದ್ದುಪಡಿಸಬೇಕು,’ಧಿ’ ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಸ್ ಪಿಪಿ ಬಿ.ಎ. ಬೆಳ್ಳಿಯಪ್ಪ, ಗುರೂಜಿ ಆರ್ಟ್ ಆಫ್ ಲಿವಿಂಗ್ ನ ಸ್ಥಾಪಕರು. ಹಾಗಾಗಿ ಅವರ ಹೆಸರನ್ನು ಎಫ್ ಐಆರ್ ನಲ್ಲಿಉಲ್ಲೇಖಿಸ ಲಾಗಿದೆ. ನ್ಯಾಯಾಲಯ ಸ್ವಲ್ಪ ಸಮಯ ನೀಡಿದರೆ ದಾಖಲೆಗಳನ್ನು ಒದಗಿಸಲಾಗು ವುದು ಎಂದು ಹೇಳಿದರು.