ಕ್ರೀಡಾಂಗಣಕ್ಕೆ ಗಾಂಧಿ ಬದಲಿಗೆ ಪರಮೇಶ್ವರ್ ಹೆಸರು

Contributed byKeerthi Prasad|Vijaya Karnataka

ತುಮಕೂರಿನಲ್ಲಿ ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಡಾ. ಪರಮೇಶ್ವರ್ ಹೆಸರು ಇಟ್ಟಿರುವುದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಸರು ಬದಲಾವಣೆ ಮೂಲಕ ಕಾಂಗ್ರೆಸ್ ಮುಖವಾಡ ಕಳಚಿ ಬಿದ್ದಿದೆ ಎಂದಿದ್ದಾರೆ. ಪರಮೇಶ್ವರ್ ತಮ್ಮ ಕಾಲೇಜಿನ ಕ್ರೀಡಾಂಗಣಕ್ಕೆ ತಮ್ಮ ಹೆಸರಿಟ್ಟುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ. ನೆಹರು ಕುಟುಂಬದ ಭಜನೆ ಬಿಟ್ಟರೆ ಕಾಂಗ್ರೆಸ್ ನಾಯಕರಿಗೆ ಬೇರೆ ಏನೂ ಇಲ್ಲ ಎಂದು ಟೀಕಿಸಿದ್ದಾರೆ.

parameshwars name replaces gandhis at stadium bjps accusation
ಬೆಂಗಳೂರು: ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಡಾ. ಪರಮೇಶ್ವರ್ ಅವರ ಹೆಸರು ಇಟ್ಟಿರುವುದು ಅಧಿವೇಶನಕ್ಕೆ ಅಕ್ಷಮ್ಯ ಅಪರಾಧ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಹೆಸರು ಬದಲಾವಣೆ ಮೂಲಕ ಕಾಂಗ್ರೆಸ್ ಮುಖವಾಡ ಕಳಚಿ ಬಿದ್ದಿದೆ ಎಂದರು. ಪರಮೇಶ್ವರ್ ಅವರು ತಮ್ಮ ಕಾಲೇಜಿನ ಕ್ರೀಡಾಂಗಣಕ್ಕೆ ತಮ್ಮ ಹೆಸರಿಟ್ಟುಕೊಳ್ಳಬೇಕಿತ್ತು. ಹಿಂದೆ ನಮ್ಮ ಕಾಲದಲ್ಲೇ ತುಮಕೂರು ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಪಡಿಸಿ ನಾನೇ ಉದ್ಘಾಟಿಸಿದ್ದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಗೆ ಗಾಂಧಿ ವಿವಿ ಎಂದು ಹೆಸರಿಡಲಿ. ಸಂಜಯ ಗಾಂಧಿ ಆಸ್ಪತ್ರೆಗೂ ಗಾಂಧಿ ಹೆಸರಿಡಲಿ. ರಾಜ್ಯ ಕಾಂಗ್ರೆಸ್ ನಾಯಕರಿಗೆ ನೆಹರು ಕುಟುಂಬದ ಭಜನೆ ಬಿಟ್ಟರೆ ಬೇರೆ ಏನೂ ಇಲ್ಲ. ಗಾಂಧಿ ತತ್ತ್ವಗಳನ್ನು ಕೊಲೆ ಮಾಡಿದ್ದು ಕಾಂಗ್ರೆಸ್‌ನವರೇ ಎಂದು ಬೊಮ್ಮಾಯಿ ದೂರಿದರು. ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಡಾ. ಪರಮೇಶ್ವರ್ ಅವರ ಹೆಸರು ಇಟ್ಟಿರುವುದು ಅಧಿವೇಶನಕ್ಕೆ ಅಕ್ಷಮ್ಯ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಹೆಸರು ಬದಲಾವಣೆ ಮೂಲಕ ಕಾಂಗ್ರೆಸ್‌ನ ನಿಜವಾದ ಮುಖ ಬಯಲಾಗಿದೆ ಎಂದರು. ಪರಮೇಶ್ವರ್ ಅವರು ತಮ್ಮದೇ ಆದ ಕಾಲೇಜಿನ ಕ್ರೀಡಾಂಗಣಕ್ಕೆ ತಮ್ಮ ಹೆಸರನ್ನು ಇಟ್ಟುಕೊಳ್ಳಬೇಕಿತ್ತು. ಹಿಂದೆ ನಮ್ಮ ಸರ್ಕಾರವಿದ್ದಾಗಲೇ ತುಮಕೂರು ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಿ ನಾನೇ ಉದ್ಘಾಟಿಸಿದ್ದೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಗೆ ಗಾಂಧಿ ವಿವಿ ಎಂದು ಹೆಸರಿಡಲಿ. ಹಾಗೆಯೇ ಸಂಜಯ ಗಾಂಧಿ ಆಸ್ಪತ್ರೆ ಇದೆ. ಸಂಜಯ್‌ ಗಾಂಧಿ ಅವರು ರಾಷ್ಟ್ರೀಯ ನಾಯಕರಲ್ಲ. ಅದಕ್ಕೂ ಗಾಂಧಿ ಹೆಸರಿಡಲಿ. ರಾಜ್ಯ ಕಾಂಗ್ರೆಸ್ ನಾಯಕರಿಗೆ ನೆಹರು ಕುಟುಂಬದ ಭಜನೆ ಬಿಟ್ಟರೆ ಬೇರೆ ಏನೂ ಇಲ್ಲ. ಗಾಂಧಿ ತತ್ತ್ವಗಳನ್ನು ಕೊಲೆ ಮಾಡಿದ್ದು ಕಾಂಗ್ರೆಸ್‌ನವರೇ ಎಂದು ಬೊಮ್ಮಾಯಿ ಆರೋಪಿಸಿದರು.