ಬಸ್ -ಕಾರು ಡಿಕ್ಕಿ ಇಬ್ಬರ ಸಾವು
ತೀರ್ಥಹಳ್ಳಿ: ಭಾರತಿಪುರ ಕ್ರಾಸ್ ಬಳಿ ಕೆಎಸ್ ಆರ್ ಟಿಸಿ ಮತ್ತು ಕಾರಿನ ನಡುವೆ ಮಂಗಳವಾರ ರಾತ್ರಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಶೃಂಗೇರಿ ತಾಲೂಕು ಕಿಗ್ಗಾ ಗ್ರಾಮದ ನಿವಾಸಿ ಫಾತಿಮಾ (60) ಸ್ಥಳದಲ್ಲೇ ಮೃತಪಟ್ಟಿದ್ದು, ರಿಯಾಜ್ (30) ಅವರನ್ನು ಚಿಕಿತ್ಸೆಗೆಂದು ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮೃತಪಟ್ಟಿದ್ದಾರೆ.
ಚನ್ನಗಿರಿಯಲ್ಲಿಮದುವೆ ಕಾರ್ಯಕ್ರಮ ಮುಗಿಸಿಕೊಂಡು ಸ್ವಂತ ಊರು ಕಿಗ್ಗಾಕ್ಕೆ ಹೋಗುವಾಗ ಘಟನೆ ಸಂಭವಿಸಿದೆ. ಬಸ್ ಮಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತಿತ್ತು. ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

