ಸಂಕ್ರಾಂತಿ ಸ್ಪೆಷಲ್ ಪೊಂಗಲ್ ಫ್ಯೂಷನ್
ಇಂಟ್ರೊ
ಸಾಂಪ್ರದಾಯಿಕ ಪೊಂಗಲ್ ಈಗ ಫ್ಯೂಷನ್ ಆಯ್ಕೆಯಾಗಿ ಗಮನ ಸೆಳೆದಿದೆ.
ಶುಭಾ ವಿಕಾಸ್
ಹೊಸ ಅಕ್ಕಿ, ಬೆಲ್ಲಮತ್ತು ತುಪ್ಪದ ಘಮಲಿನೊಂದಿಗೆ ಸಿಹಿಯಾದ ಪೊಂಗಲ್ ಪ್ರತಿ ವರ್ಷದ ಸಂಕ್ರಾಂತಿ ಹಬ್ಬದೂಟದ ರುಚಿ ಹೆಚ್ಚಿಸುತ್ತದೆ. ಈ ವರ್ಷದ ಮಕರ ಸಂಕ್ರಾಂತಿಗೆ ಈ ಸಾಂಪ್ರದಾಯಿಕ ಸಿಹಿ ಆಧುನಿಕ ಸ್ಪರ್ಶದೊಂದಿಗೆ ಇನ್ನಷ್ಟು ಸವಿ ಹೆಚ್ಚಿಸಿಕೊಂಡಿದೆ. ವಿಭಿನ್ನ ಸ್ವಾದ ನೀಡುವ ಪೊಂಗಲ್ ಈಗ ಫ್ಯೂಷನ್ ಆಯ್ಕೆಯಾಗಿ ಗಮನ ಸೆಳೆದಿದೆ. ಹಲವು ವರ್ಷಗಳಿಂದ ಸಾಂಪ್ರದಾಯಿಕ ಪೊಂಗಲ್ ಹೊಸ ಪ್ರಯೋಗಗಳಿಗೆ ಒಳಗಾಗುತ್ತಿದ್ದು, ಈ ಬಗ್ಗೆ ಪರ ವಿರೋಧವೂ ಇದೆ. ಸಾಂಪ್ರದಾಯಿಕ ತಿನಿಸಿನ ಆಧುನಿಕ ಸ್ವರೂಪವನ್ನು ಕೆಲವರು ಒಪ್ಪಿಕೊಂಡಿಲ್ಲ. ಇನ್ನು ಕೆಲವರು ಹೊಸ ರುಚಿ ಸವಿಯಲು ಉತ್ಸಾಹ ತೋರಿದ್ದು, ಇದೀಗ ಪ್ರಯೋಗಾತ್ಮಕ ರೆಸಿಪಿಯಾಗಿ ಸದ್ದು ಮಾಡುತ್ತಿದೆ.
ಹೊಸ ಪ್ರಯೋಗ
ಸಾಂಪ್ರದಾಯಿಕವಾಗಿ ಅಕ್ಕಿ, ಬೆಲ್ಲದ ಸಂಯೋಜನೆಯೊಂದಿಗೆ ತಯಾರಾಗುವ ಪೊಂಗಲ್ ಈಗ ಇತರೇ ಪದಾರ್ಥಗಳೊಂದಿಗೆ ಹೊಸ ರುಚಿ ನೀಡುತ್ತಿದೆ. ಕೆಲವು ವಿಧಾನಗಳಲ್ಲಿಅಕ್ಕಿಯ ಬದಲು ಇತರ ಪದಾರ್ಥ ಬಳಸಿದರೆ ಇನ್ನು ಕೆಲವಲ್ಲಿಸಾಂಪ್ರದಾಯಿಕ ಪೊಂಗಲ್ ಗೆ ಇತರೇ ಪದಾರ್ಥಗಳ ಸ್ವಾದವನ್ನಷ್ಟೇ ಸೇರಿಸಲಾಗುತ್ತದೆ. ಈ ನಿಟ್ಟಿನಲ್ಲಿವಿಭಿನ್ನ ಪ್ರಯೋಗಗಳು ನಡೆಯುತ್ತಿದ್ದು, ಹೊಸ ರುಚಿ ಉಣಬಡಿಸುವ ಹಾಗೂ ಸಾಂಪ್ರದಾಯಿಕ ಮತ್ತು ಮನೆಯ ತಿನಿಸನ್ನು ಸಾರ್ವತ್ರಿಕಗೊಳಿಸುವ ವಾಣಿಜ್ಯ ಉದ್ದೇಶವೂ ಇದರ ಹಿಂದಿದೆ ಎನ್ನುತ್ತಾರೆ ಆಹಾರ ತಜ್ಞರು.
ಚಾಕೊಲೆಟ್ ಪೊಂಗಲ್
ಹೊಸ ರುಚಿಯ ಚಾಕೊಲೆಟ್ ಪೊಂಗಲ್ ಮಕ್ಕಳಿಗೆ ಫೇವರೆಟ್ . ಸಾಂಪ್ರದಾಯಿಕ ಪೊಂಗಲ್ ಗೆ ಕೋಕೊ ಪೌಡರ್ ಮತ್ತು ಕಂಡೆನ್ Ó್ಡ… ಮಿಲ್ಕ… ಸೇರಿಸಿದರೆ ಇದು ಚಾಕೊಲೆಟ್ ಪುಡ್ಡಿಂಗ್ ನಂತೆ ರುಚಿಸುತ್ತದೆ. ಬಿಸಿ ಬಿಸಿ ಸಿಹಿ ಪೊಂಗಲ್ ಅಥವಾ ಖೀರ್ ಮೇಲೆ ಒಂದು ಸ್ಕೂಪ್ ವೆನಿಲ್ಲಾಐಸ್ ಕ್ರೀಮ್ ಇಟ್ಟು ಡೆಸರ್ಟ್ ರೀತಿ ಸೇವಿಸಬಹುದು. ಸಾಂಪ್ರದಾಯಿಕ ಪೊಂಗಲ್ ಗೆ ಹಲಸಿನ ಹಣ್ಣಿನ ತೊಳೆಗಳನ್ನು ಸೇರಿಸಿದರೆ ಅಪರೂಪದ ಫ್ಲೇವರ್ ಸಿಗುತ್ತದೆ. ಮಾವು, ಅನಾನಸ್ ಹೀಗೆ ವಿಭಿನ್ನ ಸ್ವಾದ ಸಹ ನೀಡಲಾಗುತ್ತದೆ. ಡ್ರೈಫ್ರೂಟ್ ಗಳಿರುವ ಪೊಂಗಲ್ ಆರೋಗ್ಯ ಹಾಗೂ ರುಚಿಕರವಾಗಿರುತ್ತದೆ.
ರಿಸೊಟ್ಟೊ ರುಚಿಯ ಖಾರ ಪೊಂಗಲ್
ಆರೋಗ್ಯದ ಬಗ್ಗೆ ಕಾಳಜಿ ಇರುವವರು ಮತ್ತು ವಿಭಿನ್ನ ರುಚಿ ಬಯಸುವವರು ಪೊಂಗಲ್ ಗೆ ಅಕ್ಕಿಯ ಬದಲಿಗೆ ನವಣೆ ಅಥವಾ ಆರ್ಕದಂತಹ ಸಿರಿಧಾನ್ಯಗಳನ್ನು ಬಳಸುತ್ತಾರೆ. ಇದು ಗ್ಲುಟೆನ್ ಮುಕ್ತವಾಗಿದ್ದು, ಮಧುಮೇಹಿ ಮತ್ತು ಡಯಟ್ ಮಾಡುವವರಿಗೆ ಅತ್ಯುತ್ತಮ ಆಯ್ಕೆ. ಖಾರ ಪೊಂಗಲ್ ಗೆ ಮಶ್ರೂಮ್ ಮತ್ತು ಸ್ವಲ್ಪ ಆಲಿವ್ ಆಯಿಲ್ ಅಥವಾ ಟ್ರಫಲ್ ಆಯಿಲ್ ಸೇರಿಸುವ ಮೂಲಕ ಇಟಾಲಿಯನ್ ರಿಸೊಟ್ಟೊ ಶೈಲಿಯ ರುಚಿ ನೀಡಬಹುದು. ಕೇವಲ ಸಾಸಿವೆ, ಜೀರಿಗೆಯಲ್ಲದೆ ಹುರಿದ ಶೇಂಗಾ, ಗೋಡಂಬಿ, ಪಿಸ್ತಾ, ಬಾದಾಮಿ ಚೂರುಗಳನ್ನು ಹೇರಳವಾಗಿ ಬಳಸಬಹುದು. ಓಟ್ಸ್ , ಕುಂಬಳ ಬೀಜ, ಕಪ್ಪು ಅಕ್ಕಿ, ಚೀಯಾ ಸೀಡ್ ಬಳಸುವ ಮೂಲಕ ಇದರ ಆರೋಗ್ಯಕರ ಗುಣ ಹೆಚ್ಚಿಸಬಹುದು ಎನ್ನುತ್ತಾರೆ ತಜ್ಞರು.
ಬಾಕ್ಸ್
ಪೊಂಗಲ್ ಐಸ್ ಕ್ರೀಮ್
ಸಾಂಪ್ರದಾಯಿಕ ಸಿಹಿ ಪೊಂಗಲ್ ನ ರುಚಿಯನ್ನು ಪಾಶ್ಚಾತ್ಯ ಶೈಲಿಯ ಐಸ್ ಕ್ರೀಮ್ ನೊಂದಿಗೆ ಬೆರೆಸಿ ಫ್ಯೂಷನ್ ಸಿಹಿ ತಿಂಡಿ ಮಾಡುವ ಟ್ರೆಂಡ್ ಕೂಡ ಇದೆ. ಇದು ಹಬ್ಬದ ಸಂಭ್ರಮಕ್ಕೆ ಹೊಸ ಆಯಾಮ ನೀಡುತ್ತದೆ. ಸಕ್ಕರೆ ಪೊಂಗಲ್ ಐಸ್ ಕ್ರೀಮ್ ಸಿಹಿ ಪೊಂಗಲ್ ನಂತೆಯೇ ರುಚಿಸುತ್ತದೆ. ಟಾರ್ಟ್ ಕಪ್ ಗಳ ಒಳಗೆ ಬಿಸಿ ಬಿಸಿ ಸಕ್ಕರೆ ಪೊಂಗಲ್ ತುಂಬಿಸಿ, ಅದರ ಮೇಲೆ ಕೇಸರಿ ಕ್ರೀಮ್ ಅಥವಾ ಒಣ ಹಣ್ಣುಗಳನ್ನು ಅಲಂಕರಿಸಲಾಗುತ್ತದೆ. ಯುವಜನತೆಗೆ ಹಳೆಯ ರುಚಿಯನ್ನು ಹೊಸ ಶೈಲಿಯಲ್ಲಿಉಣಬಡಿಸಲು ಇಂತಹ ಫ್ಯೂಷನ್ ಪ್ರಯತ್ನಗಳು ನೆರವಾಗುತ್ತವೆ.
ಕೋಟ್
ಸಾಂಪ್ರದಾಯಿಕ ಪಾಕ ಪದ್ಧತಿಯನ್ನು ವಾಣಿಜ್ಯೀಕರಿಸುವ ಫ್ಯೂಷನ್ ವಿಧಾನದ ಪೊಂಗಲ್ ನಲ್ಲಿಸಾಕಷ್ಟು ವಿಧಗಳಿವೆ. ಇವುಗಳಲ್ಲಿಬಹುತೇಕ ಪ್ರಯೋಗಗಳಿಗೆ ಸೀಮಿತ. ಆದರೆ ಪಾರಂಪರಿಕ ಖಾದ್ಯಗಳು ಯಾವತ್ತೂ ಬೆಲೆ ಕಳೆದುಕೊಳ್ಳುವುದಿಲ್ಲ. ಸಂಕ್ರಾಂತಿಯಲ್ಲಿಬೆಲ್ಲದಿಂದ ತಯಾರಿಸಿದ ಸಾಂಪ್ರದಾಯಿಕ ಪೊಂಗಲ್ ಮನೆಯಲ್ಲೂ, ಹೋಟೆಲ್ ನಲ್ಲೂಬೇಡಿಕೆ ಸೃಷ್ಟಿಸಿಕೊಳ್ಳುತ್ತದೆ.
ಮದನ್ ರಾಮ್ ವೆಂಕಟೇಶ್ | ಆಹಾರ ತಜ್ಞ

