ವಿಕ ಸುದ್ದಿಲೋಕ ಬೆಂಗಳೂರು ನಟ ಯಶ್ ಅಭಿನಯದ ಟಾಕ್ಸಿಕ್ ಚಲನ ಚಿತ್ರದ ಟೀಸರ್ ಗೆ ನಿರ್ಬಂಧ ಹೇರುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಧಿಕೇಂದ್ರೀಯ ಸೆಧಿನ್ಸಾರ್ ಮಂಡಳಿಗೆ ಪತ್ರ ಬರೆದು ಒತ್ತಾಯಿಸಿದೆ. ಸಾಮಾಜಿಕ ಜಾಲತಾಣ ಗಳಲ್ಲಿಬಿಡುಗಡೆ ಯಾಗಿರುವ ಟಾಕ್ಸಿಕ್ ಟೀಸರ್ ನಲ್ಲಿನ ದೃಶ್ಯಾವಳಿಗಳು ಮಕ್ಕಳ ಮೇಲೆ ದುಷ್ಪರಿ ಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ, ಆ ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಆಯೋಗ ಸೂಚಿಸಿದೆ. ‘‘ಟೀಸರ್ ನಲ್ಲಿಬಾಲನ್ಯಾಯ ಅಧಿನಿಯಮ 2015, ಅಧ್ಯಾಯ-2, ಮಕ್ಕಳ ಪಾಲನೆ ಮತ್ತು ಸಂರಕ್ಷಣೆಯಲ್ಲಿನ ಸಾಮಾನ್ಯ ತತ್ವಗಳ ಅಡಿಯಲ್ಲಿಕಲಂ 3 ಸೇರಿ ನಾನಾ ಕಾಯಿದೆಗಳನ್ನು ಉಲ್ಲಂಘಿಸಲಾಗಿದೆ. ಸದ್ಯ ಆನ್ ಲೈನ್ ಸುರಕ್ಷತೆ ಕುರಿತು ರಾಜ್ಯದ ಹಲವೆಡೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಭಿಯಾನ ನಡೆಸುತ್ತಿದೆ. ಆದರೆ ಈ ಟೀಸರ್ ಜಾಲತಾಣಗಳಲ್ಲಿಸುಲಭ ವಾಗಿ ಸಿಗುತ್ತಿರು ವುದ ರಿಂದ ಮಕ್ಕಳ ಮೇಲೆ ಪರಿಣಾಮ ಬೀರಲಿದೆ,’’ ಎಂದು ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಕಳವಳ ವ್ಯಕ್ತಪಡಿಸಿದ್ದಾರೆ. ‘‘ಸಾರ್ವಜನಿಕವಾಗಿ ಮಹಿಳೆಯರು ಮತ್ತು ಮಕ್ಕಳ ಮಾನಸಿಕ ಬೆಳವಣಿಗೆಗೆ ಧಕ್ಕೆಯಾಗುವ ದೃಶ್ಯಗಳನ್ನು ತೆಗೆದು ಹಾಕಿ, ಚಲನಚಿತ್ರದ ಇತರೆ ದೃಶ್ಯಗಳನ್ನು ಬಳಸಬೇಕು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿಬಿಡುಗಡೆಯಾಗಿರುವ ಟೀಸರ್ ಅನ್ನು ರದ್ದು ಮಾಡಬೇಕು,’’ ಎಂದು ಆಗ್ರಹಿಸಿದ್ದಾರೆ.

