ಮುಂಬಯಿ: ಅಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳಕ್ಕೆ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಿಂದ ಬೃಹತ್ ಸಂಖ್ಯೆಯ ಅಕ್ರಮ ವಲಸಿಗರು ನುಸುಳುತ್ತಿರುವುದನ್ನು ರಾಷ್ಟ್ರೀಯ ಸುದ್ದಿವಾಹಿನಿ ನಡೆಸಿದ ಕುಟುಕು ಕಾರ್ಯಾ ಚರಣೆ ಬಹಿರಂಗ ಪಡಿಸಿದೆ. ನಗರದಾದ್ಯಂತ 61 ಪ್ರದೇಶಗಳಲ್ಲಿ3,014 ಬಾಂಗ್ಲಾದೇಶಿಗರು ಮತ್ತು ಮ್ಯಾನ್ಮಾರ್ ನ ಮುಸ್ಲಿಮರು ನೆಲೆಸಿರುವುದು ಕಾರ್ಯಾಚರಣೆಯಲ್ಲಿಬಯ ಲಾಗಿದೆ. ಮತದಾರರ ಗುರುತಿನ ಚೀಟಿಗಳು ಸೇರಿದಂತೆ ಇತರ ಗುರುತಿನ ದಾಖಲೆ ಗಳನ್ನು ಹೊಂದಿದ್ದಾರೆ ಎಂಬ ಸ್ಫೋಟಕ ಮಾಹಿತಿ ಕಾರ್ಯಾಚರಣೆಯಲ್ಲಿಹೊರಬಿದ್ದಿದೆ. ನಗರದ ವಿವಿಧ ಸ್ಥಳಗಳಲ್ಲಿಏಜೆಂಟರು 7,000 ರೂ. ಗಳಿಂದ 30,000 ರೂ. ಗಳವರೆಗಿನ ಶುಲ್ಕಕ್ಕೆ ಸಂಪೂರ್ಣ ಗುರುತಿನ ಚೀಟಿ ಒದಗಿಸುತ್ತಿದ್ದಾರೆ.

