ಬೆಳ್ಳಿ ಮತ್ತು ಚಿನ್ನದ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ ಬೆಳ್ಳಿ ಕೆಜಿಗೆ 2,75,000 ರೂ. ತಲುಪಿದೆ. ಹೊಸದಿಲ್ಲಿಯಲ್ಲಿ ಬೆಳ್ಳಿ 2,71,000 ರೂ. ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 1,42,530 ರೂ. ತಲುಪಿದೆ. ಹೂಡಿಕೆದಾರರಿಗೆ ಬೆಳ್ಳಿ ಮತ್ತು ಚಿನ್ನ ಸುರಕ್ಷಿತ ಹೂಡಿಕೆಯಾಗಿ ಕಾಣುತ್ತಿದೆ. ಇದರಿಂದಾಗಿ ಬೆಲೆ ಏರಿಕೆಯಾಗುತ್ತಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆ ಗಳು ಗಗನಕ್ಕೇರುತ್ತಿವೆ. ಮಂಗಳವಾರ, ಹೊಸದಿಲ್ಲಿಯಲ್ಲಿ ಕೆ.ಜಿ ಬೆಳ್ಳಿ ಬೆಲೆ 6,000 ರೂ. ಏರಿಕೆಯಾಗಿ 2,71,000 ರೂ. ತಲುಪಿದೆ. ಕೇವಲ ಎರಡು ದಿನಗಳಲ್ಲಿ ಬೆಳ್ಳಿ ಬೆಲೆ 21,000 ರೂ. (ಶೇ.8.4) ಹೆಚ್ಚಾಗಿದೆ. 2026ರ ಹೊಸ ವರ್ಷದಿಂದ ಇಲ್ಲಿಯವರೆಗೆ ಬೆಳ್ಳಿ ಬೆಲೆ 32,000 ರೂ. (ಶೇ.13.4) ಏರಿದೆ. ಬೆಂಗಳೂರಿನಲ್ಲಿ ಕೆ.ಜಿ ಬೆಳ್ಳಿ ದರ 5,000 ರೂ. ಹೆಚ್ಚಾಗಿ 2,75,000 ರೂ. ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 380 ರೂ. ಏರಿ 1,42,530 ರೂ. ತಲುಪಿದೆ. ಇನ್ನು 10 ಗ್ರಾಂ ಆಭರಣ ಚಿನ್ನದ ಬೆಲೆ 350 ರೂ. ಹೆಚ್ಚಾಗಿ 1,30,650 ರೂ. ಆಗಿದೆ.
ಇರಾನ್‌ನಲ್ಲಿನ ಆಂತರಿಕ ಗೊಂದಲಗಳು, ಷೇರುಪೇಟೆಗಳ ಅಸ್ಥಿರತೆ ಮತ್ತು ಅಮೆರಿಕದ ಸುಂಕ ಯುದ್ಧದಂತಹ ಕಾರಣಗಳಿಂದಾಗಿ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯನ್ನು ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆಯೆಂದು ಪರಿಗಣಿಸುತ್ತಿದ್ದಾರೆ. ಈ ಕಾರಣಗಳಿಂದಾಗಿ ಈ ಅಮೂಲ್ಯ ಲೋಹಗಳ ಬೆಲೆಗಳು ನಿರಂತರವಾಗಿ ಏರುತ್ತಿವೆ. ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತವಾಗಿಡಲು ಚಿನ್ನ ಮತ್ತು ಬೆಳ್ಳಿಯತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಈ ಲೋಹಗಳ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಗೆ ಕಾರಣವಾಗಿದೆ.