ಸಣ್ಣಪುಟ್ಟ ಸುದ್ದಿಗಳು

Contributed bylakshmikanthakumar.boraiah@timesgroup.com|Vijaya Karnataka

ಶಿವಮೊಗ್ಗದ ಪಿ.ಬಿ.ರುದ್ರಮುನಿ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿದೆ. ಚಿತ್ರದುರ್ಗ ಜಿಲ್ಲೆಯ ಬೆಳೆ ವಿಮೆ ಯೋಜನೆಗಳ ಕುರಿತು ಅವರ ಪ್ರೌಢಪ್ರಬಂಧಕ್ಕೆ ಈ ಗೌರವ ಲಭಿಸಿದೆ. ಇನ್ನು, ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಶಿವಮೊಗ್ಗದ ಆಶ್ರಿಕಾ ದೀಪಕ್‌ ಹೆಗಡೆ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಈ ಮೂಲಕ ಅವರು ಅಂತರರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

award received for phd in shivamogga

ರುದ್ರಮುನಿಗೆ ಪಿಎಚ್ ಡಿ

ಶಿವಮೊಗ್ಗ : ಚಿತ್ರದುರ್ಗ ತಾಲೂಕು ಬಸವನ ಶಿವನಕೆರೆಯ ಪಿ.ಬಿ.ರುದ್ರಮುನಿ ಮಂಡಿಸಿದ ‘ಪರ್ಫಾರ್ಮೆನ್ಸ್ ಇವ್ಯಾಲುಯೇಷನ್ ಆಫ್ ಕ್ರಾಪ್ ಇನ್ಸೂರೆನ್ಸ್ ಸ್ಕೀಮ್ಸ್ - ಎ ಕೇಸ್ ಸ್ಟಡಿ ಆಫ್ ಚಿತ್ರದುರ್ಗ ಡಿಸ್ಟ್ರಿಕ್ಟ್’ ಪ್ರೌಢಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ವು ಪಿಎಚ್ ಡಿ ಘೋಷಿಸಿದೆ. ಇವರಿಗೆ ಕುವೆಂಪು ವಿಶ್ವವಿದ್ಯಾಲಯ ವಾಣಿಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಎಸ್ .ವೆಂಕಟೇಶ್ ಮಾರ್ಗದರ್ಶನ ಮಾಡಿದ್ದರು.

ಭಾವಚಿತ್ರವಿದೆ: 14ಎಸ್ ಎಂಜಿ39

ಆಶ್ರಿಕಾಗೆ 2 ಚಿನ್ನದ ಪದಕ

ಶಿವಮೊಗ್ಗ: ಹೈದರಾಬಾದ್ ನ ಗಚ್ಚಿ ಬೌಲಿ ಒಳಕ್ರೀಡಾಂಗಣದಲ್ಲಿನಡೆದ ಅಖಿಲ ಭಾರತ ಮಾಸ್ಟರ್ ಸ್ವಿಮ್ಮಿಂಗ್ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿಶಿವಮೊಗ್ಗ ಸಿಟಿ ಕ್ಲಬ್ ಎಲೈಟ್ ನ ಈಜು ತರಬೇತುದಾರರಾದ ಆಶ್ರಿಕಾ ದೀಪಕ್ ಹೆಗಡೆ ಎರಡು ವಿಭಾಗಗಳಲ್ಲಿಪ್ರಥಮ ಸ್ಥಾನದೊಂದಿಗೆ ಡಬಲ್ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಸಾಧನೆಯೊಂದಿಗೆ ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಭಾವಚಿತ್ರವಿದೆ: 14ಎಸ್ ಎಂಜಿ40