21ಕ್ಕೆ ವಿಗ್ರಹ ಪ್ರತಿಷ್ಠಾಪನೆ
ಹಿರಿಯೂರು: ನಗರದ ಚಿಕ್ಕಪೇಟೆ ಐತಿಹಾಸಿಕ ಪ್ರಸಿದ್ಧಿ ಕಲ್ಲಿನ ಗುಡಿಯಲ್ಲಿನೆಲೆಸಿರುವ ಶ್ರೀಭದ್ರಕಾಳಿ ಸಮೇತ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿಜ.21ರಂದು ಪಂಚಲೋಹದ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳೆಗ್ಗೆ 6ಕ್ಕೆ ನೂತನ ಚರಮೂರ್ತಿ ವಿಗ್ರಹಗಳಿಗೆ ಕೂನಿಕೆರೆ ಗ್ರಾಮದ ಕುನಕಲಗುಂಡಿ ನದಿತೀರದಲ್ಲಿಗಂಗಾವರಣ ಗಂಗಾ ಪೂಜೆ ನಡೆಯಲಿದೆ. ನಂತರ ಕಳಸ ಆರಾಧನೆ, ರುದ್ರ ಹೋಮ ಸೇರಿದಂತೆ ನಾನಾ ಧಾರ್ಮಿಕ ಕಾರ್ಯ ನಡೆಯಲಿದ್ದು, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ ಯಶಸ್ವಿಗೊಳಿಸುವಂತೆ ಸಂಯೋಜಕರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

