-ಬ್ಯಾಂಕ್ ಆಫ್ ಬರೋಡ ಕೇಂದ್ರ ಕಚೇರಿ ಎದುರು ಪ್ರತಿಭಟನೆ
ವಿಕ ಸುದ್ದಿಲೋಕ ಮಂಡ್ಯ
ಆರ್ ಬಿಐ ನಿರ್ದೇಶನದಂತೆ ಬಡ್ಡಿ ರಹಿತ ಸಾಲ ನೀಡಲು ಒತ್ತಾಯಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಬ್ಯಾಂಕ್ ಆಫ್ ಬರೋಡ ಕೇಂದ್ರ ಕಚೇರಿ ಎದುರು ಜಮಾವಣೆಗೊಂಡ ಅವರು, ಬಡವರಿಗೆ, ಕೃಷಿ ಮತ್ತು ಗ್ರಾಮೀಣ ಕಾರ್ಮಿಕರಿಗೆ 2 ಲಕ್ಷ ರೂ. ವರೆಗೆ ಸಾಲ ನೀಡುವಂತೆ ಒತ್ತಾಯಿಸಿದರು.
‘‘ನಬಾರ್ಡ್ ಯೋಜನೆಯ ಆಶಯಗಳು ಪೂರ್ಣಗೊಳಿಸಲು ಬ್ಯಾಂಕ್ ಗಳು ವಿಫಲವಾಗಿವೆ. ನಾನಾ ರೀತಿಯ ಕಸುಬುಗಳ ತರಬೇತಿ, ಸರಕಾರದ ಅನುದಾನ ಖರ್ಚು ಮಾಡುವುದು, ಪ್ರಮಾಣ ಪತ್ರ ನೀಡುವುದಕ್ಕೆ ಯೋಜನೆ ಸೀಮಿತವಾಗಿದೆ. ಕೆಡಿಪಿ ಹಾಗೂ ದಿಶಾ ಸಭೆಗಳಲ್ಲಿಮೆಚ್ಚುಗೆ ಪಡೆಯಲು ತಮ್ಮ ಕರ್ತವ್ಯದ ಅಂಕಿ-ಅಂಶಗಳನ್ನು ನೀಡಲಾಗುತ್ತಿದೆ. ಬ್ಯಾಂಕ್ ಗಳು ಕೂಡಲೇ ಅರ್ಜಿ ಸಲ್ಲಿಸಿದ ಎಲ್ಲಬಡವರಿಗೆ, ಕೃಷಿ ಮತ್ತು ಗ್ರಾಮೀಣ ಕಾರ್ಮಿಕರಿಗೆ ಸಾಲ ನೀಡಲು ಕ್ರಮವಹಿಸಬೇಕು,’’ ಎಂದು ಆಗ್ರಹಿಸಿದರು.
ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ಜಿಲ್ಲಾಪ್ರಧಾನ ಕಾರ ್ಯದರ್ಶಿ ಬಿ.ಹನುಮೇಶ್ , ಮಂಡ್ಯ ತಾಲೂಕು ಅಧ್ಯಕ್ಷ ಅಮಾಸಯ್ಯ, ಉಪಾಧ್ಯಕ್ಷ ಅಬ್ದುಲ್ಲ, ಸಿಐಟಿಯು ಜಿಲ್ಲಾಪ್ರಧಾನ ಕಾರ ್ಯದರ್ಶಿ ಸಿ.ಕುಮಾರಿ, ಟಿ.ಪಿ.ಅರುಣ್ ಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಮಂಡ್ಯ: ಫೋಟೋ ಶೀರ್ಷಿಕೆಗಳು..
ಎಂಡಿವೈ-ಎಸ್ -16-1
ಬಡ್ಡಿ ರಹಿತ ಸಾಲ ನೀಡುವಂತೆ ಒತ್ತಾಯಿಸಿ ಮಂಡ್ಯದ ಬ್ಯಾಂಕ್ ಆಫ್ ಬರೋಡ ಕೇಂದ್ರ ಕಚೇರಿ ಎದುರು ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

