ವೀಲಿಂಗ್ : ಸವಾರರ ಬಂಧನ

Contributed byvkhnataraj@gmail.com|Vijaya Karnataka

ಹುಣಸೂರಿನಲ್ಲಿ ಇಬ್ಬರು ಯುವಕರು ಬೈಕ್‌ನಲ್ಲಿ ಅಪಾಯಕರ ವೀಲಿಂಗ್‌ ಮಾಡಿದ್ದಾರೆ. ಈ ಕೃತ್ಯದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಅವರ ಬಳಿ ಇದ್ದ ಬೈಕ್‌ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳಲಾಗಿದೆ.

arrest of bikers in wheeling incident

ವಿಕ ಸುದ್ದಿಲೋಕ ಹುಣಸೂರು ಅಪಾಯಕಾರಿಯಾಗಿ ಬೈಕ್ ವೀಲಿಂಗ್ ಮಾಡಿದ್ದಲ್ಲದೆ ಜಾಧಿಲಧಿತಾಧಿಣಧಿದಲ್ಲಿಅಪ್ ಲೋಡ್ ಮಾಡಿದ್ದ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ಬೈಕ್ ವಶಕ್ಕೆ ಪಡೆದಿರುವ ಘಟನೆ ಹುಣಸೂರು ನಗರಠಾಣೆ ವ್ಯಾಪ್ತಿಯಲ್ಲಿನಡೆದಿದೆ. ಹುಣಸೂರಿನ ಶಬ್ಬೀರ್ ನಗರದ ಲೇ.ಮುಬಾರಕ್ ಪಾಷಾ ಅಧಿವರ ಪುತ್ರ ಪುರ್ಸಾನ್ ಹಾಗೂ ಆತನ ಸ್ನೇಹಿತ ಬಂಧಿತರು. ಹುಣಸೂರು ಮಡಿಕೇರಿ ಹೆದ್ದಾರಿಯ ಹಾಳಗೆರೆ ಬಳಿ ಬೈಕ್ ವೀಲಿಂಗ್ ಮಾಡಿ ಜಾಧಿಲಧಿತಾಧಿಣಕ್ಕೆ ಅಪ್ಲೋಡ್ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಠಾಣೆ ಇನ್ಸ್ ಪೆಕ್ಟರ್ ಕಶ್ಯಪ್ ಮಾರ್ಗದರ್ಶನದಲ್ಲಿಎಸ್ .ಐ. ತಾಜುದ್ದೀನ್ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿ ಬೈಕ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.