ಎಚ್ .ಎನ್ . ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣಕ್ಕೆ ಆಗ್ರಹ

Contributed bychandregowda.n@timesofindia.com|Vijaya Karnataka

ಚಿಕ್ಕಬಳ್ಳಾಪುರದಲ್ಲಿ ಎಚ್‌.ಎನ್‌. ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಿ ಕರೆ ನೀಡಿದ್ದ ಬಂದ್‌ ಯಶಸ್ವಿಯಾಯಿತು. ನಗರ ಹಾಗೂ ಸುತ್ತಲಿನ ಗ್ರಾಮಸ್ಥರು ಬೃಹತ್‌ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ವಿವಿಧ ಸಂಘಟನೆಗಳು, ಯುವಕರು, ರೈತರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಬೆಂಬಲ ನೀಡಿದರು. ಶಾಸಕರು, ಹೋರಾಟಗಾರರು ಮೆರವಣಿಗೆಯಲ್ಲಿ ಪಾಲ್ಗೊಂಡು ತಮ್ಮ ಆಗ್ರಹವನ್ನು ಬಲವಾಗಿ ವ್ಯಕ್ತಪಡಿಸಿದರು.

mass protest for hydraulic purification in hn valley

ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ ಎಚ್ .ಎನ್ . ವ್ಯಾಲಿ ನೀರಿನ 3 ಹಂತಗಳ ಶುದ್ಧೀಕರಣಕ್ಕೆ ಒತ್ತಾಯಿಸಿ ಭಾನುವಾರ

ಕರೆ ನೀಡಿದ್ದ ಚಿಕ್ಕಬಳ್ಳಾಪುರ ಬಂದ್ ಗೆ ನಗರದಲ್ಲಿಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೃಹತ್ ಪ್ರತಿಭಟನಾ ಮೆರಣಿಗೆಯಲ್ಲಿನಗರ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಬೆಳ್ಳಂಬೆಳಗ್ಗೆ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ ಬಿ. ರೆಡ್ಡಿ ನೇತೃತ್ವದಲ್ಲಿನಗರದ ಪ್ರಮುಖ ಬೀದಿಗಳಲ್ಲಿಬೈಕ್ ರಾರ ಯಲಿ ನಡೆಸಿದರು. ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣದ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಿ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು. ಹಲವು ಯುವ ಸಂಘಟನೆಗಳು, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ನಾನಾ ಸಂಘಟನೆಗಳು ಬೆಂಬಲಿಸಿದ್ದರಿಂದ ಚಿಕ್ಕಬಳ್ಳಾಪುರ ಬಂದ್ ಯಶಸ್ವಿಯಾಗಿದೆ. ಸ್ವಪ್ರೇರಣೆಯಿಂದ ಸಾಕಷ್ಟು ಮಂದಿ ಅಂಗಡಿ ಗಳನ್ನು ತೆರೆಯದೆ ತಮ್ಮ ಬೆಂಬಲ ಸೂಚಿಸಿದರು. ಬೆಳಗ್ಗೆ 9.30ರ ವೇಳೆಗೆ ನಗರದ ಶಿಡ್ಲಘಟ್ಟ ವೃತ್ತದಲ್ಲಿಜಮಾಯಿಸಿದ ಸಾವಿರಾರು ಜನರು 3ನೇ ಹಂತದ ಶುದ್ಧೀ ಕರಣಕ್ಕೆ ಒತ್ತಾಯಿಸಿ ಘೋಷಣೆ ಕೂಗಿದರು. ಶಿಡ್ಲಘಟ್ಟ ವೃತ್ತದಿಂದ ಶುರುವಾದ ಬೃಹತ್ ಮೆರವಣಿಗೆ ಸರ್ ಎಂವಿ ವೃತ್ತದ ಮೂಲಕ ಟೌನ್ ಹಾಲ್ ವರೆಗೂ ನಡೆಯಿತು. ಪ್ರತಿಭಟನೆಯಲ್ಲಿಯಲಹಂಕ ಶಾಸಕ ಎಸ್ .ಆರ್ .ವಿಶ್ವನಾಥ್ , ನೀರಾವರಿ ಹೋರಾಟ ಗಾರರು, ಕನ್ನಡಪರ ಸಂಘ ಟನೆಗಳ ಮುಖಂಡರು, ರೈತ ಸಂಘದ ಮುಖಂಡರು, ಯುವ ಸಂಘಟನೆಗಳ ಮುಖಂಡರು ಭಾಗವಹಿಸಿ ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಿದರು.