ಹೌತಿ ಬಂಡುಕೋರರು ಇರಾನ್ ಬೆಂಬಲಿಸಿದರೆ ಮಂಡೇಬ್ ಮುಚ್ಚುವ ಸಾಧ್ಯತೆ

Contributed byBeeralinge gowda|Vijaya Karnataka

ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಬಂಡುಕೋರರು ಪ್ರತೀಕಾರಕ್ಕೆ ಮುಂದಾಗಿದ್ದಾರೆ. ಇರಾನ್ ವಿರುದ್ಧದ ಸಂಘರ್ಷದಲ್ಲಿ ಹೌತಿಗಳು ಸೇರಿದ್ದಲ್ಲಿ, ಕೆಂಪು ಸಮುದ್ರದ ಪ್ರಮುಖ ಜಲಮಾರ್ಗವಾದ ಬಾಬ್‌ ಎಲ್‌ ಮಂಡೇಬ್‌ ಮುಚ್ಚುವ ಅಪಾಯವಿದೆ. ಇದು ಜಾಗತಿಕ ಸರಕು ಸಾಗಣೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಏಷ್ಯಾ, ಯುರೋಪ್ ದೇಶಗಳ ನಡುವಿನ ವ್ಯಾಪಾರ ಮಾರ್ಗ ಇದಾಗಿದೆ.

critical status of bab el mandeb houthis ongoing actions may lead to significant investment losses
ಅಮೆರಿಕಾ-ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇರಾನ್ ಬೆಂಬಲಿತ ಯೆಮೆನ್‌ನ 'ಹೌತಿ' ಬಂಡುಕೋರರು ಪ್ರತೀಕಾರಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಹರ್ಮುಜ್ ಜಲಸಂಧಿಯ ಜೊತೆಗೆ ಕೆಂಪು ಸಮುದ್ರದ ಪ್ರಮುಖ ಜಲಮಾರ್ಗವಾದ 'ಬಾಬ್‌ ಎಲ್‌ ಮಂಡೇಬ್‌' ಕೂಡ ಮುಚ್ಚುವ ಭೀತಿ ಎದುರಾಗಿದೆ. ಇದು ಜಾಗತಿಕ ಸರಕು ಸಾಗಣೆಗೆ ದೊಡ್ಡ ಹೊಡೆತ ನೀಡಲಿದೆ.

ಕಳೆದ ಎರಡು ವಾರಗಳಿಂದ ಸಂಘರ್ಷದಿಂದ ದೂರವಿದ್ದ ಹೌತಿ ಬಂಡುಕೋರರು , ಇದೀಗ ಇರಾನ್ ವಿರುದ್ಧ ಹೋರಾಡುತ್ತಿರುವ ದೇಶಗಳ ವಿರುದ್ಧ ಮೂರು ಹಂತಗಳಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಹೌತಿಗಳ ಜೊತೆಗೆ ಇತರ ಬಂಡುಕೋರ ಪಡೆಗಳೂ ಈ ಹೋರಾಟಕ್ಕೆ ಸೇರುವ ಸಾಧ್ಯತೆ ಇದೆ. ಇದರಿಂದಾಗಿ ಅರಬ್ಬಿ ಸಮುದ್ರದ ದಕ್ಷಿಣ ತುದಿಯಲ್ಲಿರುವ 'ಬಾಬ್‌ ಎಲ್‌-ಮಂಡೇಬ್‌' ಜಲಸಂಧಿ ಬಂದ್ ಆಗಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಈಗಾಗಲೇ ಹರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿ ಸರಕು ಸಾಗಣೆಗೆ ಅಡ್ಡಿಪಡಿಸಿದೆ. ಈಗ 'ಬಾಬ್‌ ಎಲ್‌ ಮಂಡೇಬ್‌' ಜಲಸಂಧಿಯೂ ಬಂದ್ ಆದರೆ, ಜಾಗತಿಕ ಸರಕು ಸಾಗಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

'ಬಾಬ್‌ ಎಲ್‌ ಮಂಡೇಬ್‌' ಜಲಸಂಧಿ 50 ಕಿ.ಮೀ. ಉದ್ದ ಮತ್ತು 20 ಕಿ.ಮೀ. ಅಗಲವಿದೆ. ಇದು ಕೆಂಪು ಸಮುದ್ರ, ಮೆಡಿಟರೇನಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಏಷ್ಯಾ ಮತ್ತು ಯುರೋಪ್ ದೇಶಗಳ ನಡುವಿನ ವ್ಯಾಪಾರಕ್ಕೆ ಇದು ಅತ್ಯಂತ ನಿರ್ಣಾಯಕವಾಗಿದೆ. ಸುಯೇಜ್‌ ಕಾಲುವೆಗೆ ಸಂಪರ್ಕ ಕಲ್ಪಿಸುವ ಈ ಜಲಸಂಧಿಯ ಮೂಲಕ ಪ್ರತಿದಿನ ಸುಮಾರು 8.8 ದಶಲಕ್ಷ ಬ್ಯಾರಲ್ ತೈಲ (ಶೇ.10 ರಷ್ಟು) ಮತ್ತು ಎಲ್‌ಎನ್‌ಜಿ ಸಾಗಣೆಯಾಗುತ್ತದೆ. ಇದು ಒಟ್ಟಾರೆ ತೈಲ ವ್ಯಾಪಾರದ ಶೇ.30 ರಷ್ಟನ್ನು ಒಳಗೊಂಡಿದೆ.