ಕುಂದೂರು ಸರ್ಪಭೂಷಣ ಮಠಾಧ್ಯಕ್ಷ ಶ್ರೀ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ

Contributed bymamaramediacentre@gmail.com|Vijaya Karnataka

ಮಳವಳ್ಳಿ ತಾಲೂಕಿನ ಕುಂದೂರು ಸರ್ಪಭೂಷಣ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಭಾನುವಾರ ಲಿಂಗೈಕ್ಯರಾಗಿದ್ದಾರೆ. 55 ವರ್ಷ ವಯಸ್ಸಿನ ಸ್ವಾಮೀಜಿಗಳು 25ನೇ ವಯಸ್ಸಿನಲ್ಲಿಯೇ ಪಟ್ಟಾಧಿಕಾರ ಸ್ವೀಕರಿಸಿದ್ದರು. 30 ವರ್ಷಗಳ ಕಾಲ ಮಠದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದ್ದರು. ಪೂಜೆಗೆ ತೆರಳುವ ಮಾರ್ಗಮಧ್ಯೆ ಅಸ್ವಸ್ಥರಾಗಿ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಭಕ್ತರು, ಶ್ರೀಗಳು ಅಂತಿಮ ದರ್ಶನ ಪಡೆದರು. ಸೋಮವಾರ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಯಲಿದೆ.

kunduru peethadhikari shri channabasava swamiji passes away a significant loss to the religious community

ವಿಕ ಸುದ್ದಿಲೋಕ ಮಳವಳ್ಳಿ ತಾಲೂಕಿನ ಕುಂದೂರು ಸರ್ಪಭೂಷಣ ಮಠದ ಶ್ರೀ ಚನ್ನಬಸವ ಸ್ವಾಮೀಜಿ (55) ಭಾನುವಾರ ಲಿಂಗೈಕ್ಯರಾದರು. ಹೊಸಹಳ್ಳಿ ಗ್ರಾಮದ ಪಾರ್ವತಮ್ಮ- ಮಾದಪ್ಪ ದಂಪತಿ ಐವರು ಮಕ್ಕಳಲ್ಲಿ4ನೇ ಪುತ್ರರಾಗಿ ಜನಿಸಿದ ಇವರು ತಮ್ಮ 25ನೇ ವಯಧಿಸ್ಸಿಧಿನಲ್ಲೇ ಮೇದಿನಿ ಶ್ರೀಗಳ ನಂತರ ಕುಂದೂರು ಗ್ರಾಮದ ಸರ್ಪಭೂಷಣ ಮಠದ ಶ್ರೀಗಳಾಗಿ ಪಟ್ಟಾಧಿಕಾರ ಸ್ವೀಕರಿಸಿದ್ದರು. ತಮ್ಮ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದ ಅಪಾರ ಭಕ್ತರ ಪ್ರೀತಿ ಪಾತ್ರರಾಗಿದ್ದರು. ಸರ್ಪಭೂಷಣ ಮಠಾಧ್ಯಕ್ಷರಾಗಿ ಸುದೀರ್ಘ 30 ವರ್ಷ ಶ್ರೀಮಠದ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದರು. ಬೆಳಗ್ಗೆ ಮಠದಲ್ಲಿತಮ್ಮ ನಿತ್ಯದ ಪೂಜೆ ಮುಗಿಸಿಕೊಂಡು ಕಾಗೇಪುರದಲ್ಲಿಭಕ್ತರೊಬ್ಬರ ಮಧಿನೆಗೆ ಪೂಜೆಗೆ ತೆಧಿರಧಿಳುಧಿವಾಗ ಮಾರ್ಗಮಧ್ಯೆ ಅಧಿಸ್ವಧಿಸ್ಥಧಿಗೊಂಡರು. ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಧಿರೆಧಿದೊಯ್ದು ಪ್ರಾಧಿಥಧಿಮಿಕ ಚಿಧಿಕಿತ್ಸೆ ಬಧಿಳಿಕ ಹೆಧಿಚ್ಚಿನ ಚಿಧಿಕಿಧಿತ್ಸೆಧಿಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಸೇಧಿರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿ ಯಾಗದೆ ಶ್ರೀಗಳು ನಿಧಿಧಧಿನಧಿರಾಧಿದರು. ಸುತ್ತಮುತ್ತಲಗಳ ಗ್ರಾಮಗಳ ಭಕ್ತರು, ಬಿ.ಜಿ.ಪುರ ಸೇರಿದಂತೆ ಸುತ್ತಮುತ್ತಲ ಮಠಗಳ ಶ್ರೀಗಳು ಆಗಮಿಸಿ ಧಿಅಂತಿಮ ದರ್ಶನ ಪಡೆದರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮೂರ್ತಿ ಮತ್ತು ಪದಾಧಿಕಾರಿಗಳು ಸ್ಥಳದಲ್ಲೇ ಇದ್ದು, ಅಂತ್ಯಸಂಸ್ಕಾರದ ವಿಧಿ ವಿಧಾನಗಳ ವ್ಯವಸ್ಥೆಗಳಿಗೆ ಅಧಿಣಧಿಗೊಧಿಳಿಧಿಸಿಧಿದಧಿರು. ಕುಂದೂರು ಮಠದಲ್ಲಿಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಲಿಸಿದ್ದು, ಸೋಮವಾರ ಮಧ್ಯಾಹ್ನ 1 ಗಂಟೆಗೆ ಸುತ್ತೂರು, ಸಿದ್ದಗಂಗಾ, ಕನಕಪುರ ದೇಗುಲ ಮಠದ ಶ್ರೀಗಳು ಸೇರಿದಂತೆ ತಾಲೂಕಿನ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿಪೂಜಾ ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಂದೂರು ಬೆಟ್ಟದ ಸುಕ್ಷೇತ್ರ ಶ್ರೀ ರಸಸಿದ್ದೇಶ್ವರ ಮಠದ ಶ್ರೀ ನಂಜುಂಡ ಸ್ವಾಮೀಜಿ ತಿಳಿಸಿದ್ದಾರೆ.