ಲಲಿತ ಮಹಲ್ ಮೈದಾನಕ್ಕೆ ಬೇಲಿ

Contributed byharisha.lakshmipathy@timesgroup.com|Vijaya Karnataka

ಲಲಿತ ಮಹಲ್‌ ಹೋಟೆಲ್‌ ಎದುರಿನ ವಿಶಾಲ ಮೈದಾನಕ್ಕೆ ಬೇಲಿ ನಿರ್ಮಾಣ ಕಾರ್ಯ ಆರಂಭವಾಗಿದೆ. ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರು ಈ ಮೈದಾನ ತಮ್ಮ ಸ್ವತ್ತು ಎಂದು ಪ್ರತಿಪಾದಿಸಿದ್ದಾರೆ. 2020ರಲ್ಲಿ ನ್ಯಾಯಾಲಯವು ಈ ಮೈದಾನ ರಾಜವಂಶಸ್ಥರಿಗೆ ಸೇರಿದ್ದು ಎಂದು ತೀರ್ಪು ನೀಡಿತ್ತು. ಅಕ್ರಮ ಚಟುವಟಿಕೆ ತಡೆಯಲು ಬೇಲಿ ಹಾಕಲಾಗುತ್ತಿದೆ. ಹಿಂದಿನಿಂದಲೂ ಅನುಮತಿ ಮೇರೆಗೆ ಮೈದಾನವನ್ನು ಬಳಸಲಾಗುತ್ತಿತ್ತು.

new fence at lalit mahal ground raises controversy over royal properties in mysore

ವಿಕ ಸುದ್ದಿಲೋಕ ಮೈಸೂರು ಲಲಿತ ಮಹಲ್ ಮೈದಾನ ಎಂದೇ ಹೆಸರಾಗಿರುವ ಲಲಿತ ಮಹಲ್ ಹೋಟೆಲ್ ಎದುರಿನ ಮೈದಾನಕ್ಕೆ ಬೇಲಿ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ನಗರದ ಟಿ.ನರಸೀಪುರ ರಸ್ತೆ (ಲಲಿತ ಮಹಲ್ ರಸ್ತೆ) ಹಾಗೂ ನಾಡಪ್ರಭು ಕೆಂಪೇಗೌಡ ವೃತ್ತಕ್ಕೆ ಹೊಂದಿಕೊಂಡಿರುವ ವಿಶಾಲ ಮೈದಾನಕ್ಕೆ ಸಿಮೆಂಟ್ ಕಂಬಗಳನ್ನು ಅಳವಡಿಸಿ, ಬೇಲಿ ನಿರ್ಮಿಸಲಾಗುತ್ತಿದೆ. ಅಲ್ಲಿ‘ಇದು ಖಾಸಗಿ ಸ್ವತ್ತು’ ಧಿಎಂಬ ಫಲಕ ಅಳವಡಿಸಿದ್ದು, ಕೆಂಪೇಗೌಡ ವೃತ್ತದ ದಿಕ್ಕು ಹಾಗೂ ಮೈದಾನಕ್ಕೆ ಹೊಂದುಕೊಂಡಂತೆ ಇರುವ ಇಂದಿರಾ ಕ್ಯಾಂಟಿನ್ ಹೊರತಾಗಿ ಬೇಲಿ ಹಾಕಲಾಗುತ್ತಿದೆ. ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಈ ಮೈದಾನ ತಮ್ಮ ಸ್ವತ್ತು ಎಂದು ಪ್ರತಿಪಾದಿಸಿದ್ದು, ಅವರು ಬೇಲಿ ಹಾಕಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ. 2020ರಲ್ಲಿಈ ಮೈದಾನವು ಮೈಸೂರು ರಾಜವಂಶಸ್ಥರಿಗೆ ಸೇರಿದ್ದು ಎಂದು ಕೋರ್ಟ್ ತೀರ್ಪು ನೀಡಿದೆ. ಇಲ್ಲಿಯಾವ ಸರಕಾರಿ ಭೂಮಿ ಇಲ್ಲವೆಂದು ಕೋರ್ಟ್ ತೀರ್ಪಿನಲ್ಲಿಹೇಳಿದೆ. ಆಷಾಢ ಸಮಯದಲ್ಲೂಪ್ರಮೋದಾದೇವಿ ಒಡೆಯರ್ ಅವರ ಅನುಮತಿ ಮೇರೆಗೆ ಜಿಲ್ಲಾಡಳಿತ ಸಾರಿಗೆ ಸೌಲಭ್ಯ ಕಲ್ಪಿಸಲು ಈ ಮೈದಾನವನ್ನು ಬಳಸಿಕೊಳ್ಳುತ್ತ ಬಂದಿದೆ. ಈ ಸಂಬಂಧ ಪ್ರಮೋದಾದೇವಿ ಒಡೆಯರ್ ಮಾತನಾಡಿ, ‘‘2020ರಲ್ಲೇ ಕೋರ್ಟ್ ಈ ಮೈದಾನದ ನಮಗೆ ಸೇರಿದ್ದು ಎಂದು ತೀರ್ಪು ನೀಡಿದೆ. ಅಕ್ರಮ-ಅನೈತಿಕ ಚಟುವಟಿಕೆಗಳಿಗೆ ತಡೆಯೊಡ್ಡುವ ನಿಟ್ಟಿನಲ್ಲಿಮೈದಾನದ ಸುತ್ತಲು ಬೇಲಿ ಹಾಕಲು ಕ್ರಮ ವಹಿಸಿದ್ದೇವೆ. ನಮ್ಮ ಅನುಮತಿ ಮೇರೆಗೆ ಕಾರ್ಯಕ್ರಮಗಳ ಆಯೋಜನೆಗೆ ಹಿಂದಿನಿಂದ ಮೈದಾನ ನೀಡುತ್ತಿದ್ದೇವೆ,’’ ಎಂದು ತಿಳಿಸಿದರು. ‘ಧಿ‘ಕುರುಬಾರಹಳ್ಳಿ ಸಧಿರ್ವೇ ನಂ.72ರಲ್ಲಿ43 ಎಕರೆ, ಆಲನಹಳ್ಳಿ ಸರ್ವೇ ನಂ.41ರಲ್ಲಿ9.39 ಎಕರೆ ಭೂಮಿಯ ಆರ್ ಟಿಸಿ ಪ್ರವಾಸೋದ್ಯಮ ಇಲಾಖೆ ಹೆಸರಿನಲ್ಲಿದೆ. ಸ್ಥಳ ನೋಡಿಲ್ಲದ ಕಾರಣ ಈಗ ಬೇಲಿ ಹಾಕುತ್ತಿರುವ ಜಾಗ ಯಾವುದು? ಯಾರಿಗೆ ಸೇರಿದೆ ಎಂಬ ಬಗ್ಗೆ ನನಗೆ ಸದ್ಯಕ್ಕೆ ಮಾಹಿತಿ ಇಲ್ಲ’ಧಿ’ ಎಂದು ಮೈಸೂರು ತಾಲೂಕು ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ತಿಳಿಸಿದ್ದಾರೆ.