ಅಬಕಾರಿ ವರ್ಗಾವಣೆಗೆ ಕೌನ್ಸೆಲಿಂಗ್ ಮದ್ದು

Contributed byGirish J.R|Vijaya Karnataka

ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆಗೆ ಕಡಿವಾಣ ಹಾಕಲು ಸರಕಾರ ಕೌನ್ಸೆಲಿಂಗ್ ಪದ್ಧತಿ ಜಾರಿಗೆ ತರುತ್ತಿದೆ. 'ಬಿ' ವೃಂದದ ಅಧಿಕಾರಿಗಳ ವರ್ಗಾವಣೆಯಲ್ಲೂ ರಾಜಕೀಯ ಹಸ್ತಕ್ಷೇಪ ಮತ್ತು ಭ್ರಷ್ಟಾಚಾರ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಹಿಂದಿನಿಂದಲೂ ಆಯಕಟ್ಟಿನ ಹುದ್ದೆಗಳು ಹರಾಜಾಗುತ್ತಿದ್ದವು. ಈಗ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸಲು ಸೇವಾ ನಿಯಮಗಳ ತಿದ್ದುಪಡಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗರಿಷ್ಠ 2 ವರ್ಷ ಪೂರೈಸಿದವರ ವರ್ಗಾವಣೆಗೂ ಆದ್ಯತೆ ನೀಡಲಾಗುತ್ತದೆ.

counseling method in liquor transfer a new step against corruption

ಜೆ.ಆರ್ .ಗಿರೀಶ್ ಬೆಂಗಳೂರು ಜಜ್ಟಿಜಿsh.್ಜ್ಟಃಠಿಜಿಞಛಿsಟ್ಛಜ್ಞಿdಜಿa.್ಚಟಞ ಅಬಕಾರಿ ಇಲಾಖೆಯಲ್ಲಿನ ವರ್ಗಾವಣೆ ದಂಧೆಗೆ ಸರಕಾರವು ಕೌನ್ಸೆಲಿಂಗ್ ನ ಮದ್ದು ಅರೆಯಲು ಮುಂದಾಗಿದೆ. ಇಲಾಖೆಯ ‘ಬಿ’ ವೃಂದದ ಅಧಿಕಾರಿಗಳ ವರ್ಗಾವಣೆ ಯಲ್ಲಿರಾಜಕೀಯ ಹಸ್ತಕ್ಷೇಪ ಹಾಗೂ ಭ್ರಷ್ಟಾಚಾರ ತಡೆಗಾಗಿ ಸರಕಾರವು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸಲು ನಿರ್ಧರಿಸಿದೆ. ಅಬಕಾರಿ ಇಲಾಖೆಯಲ್ಲಿಸಾಕಷ್ಟು ಕಮಾಯಿ ಇರುವ ಆಯಕಟ್ಟಿನ ಹುದ್ದೆಗಳು ಟೆಂಡರ್ ಲೆಕ್ಕಾಚಾರದಲ್ಲಿಹರಾಜಾಗುವ ಪರಿಪಾಠ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈ ಹುದ್ದೆಗಳಲ್ಲಿರಾಜಕೀಯ ಪ್ರಭಾವಿ ಹಾಗೂ ಹಣವಂತ ಅಧಿಕಾರಿಗಳೇ ದೀರ್ಘಾವಧಿಯಿಂದ ಠಿಕಾಣಿ ಹೂಡಿದ್ದಾರೆ. ಅನಾಯಾಸವಾಗಿ ಎಕ್ಸಿಕ್ಯೂಟೀವ್ (ಕಾರ್ಯ ನಿರ್ವಾಹಕ) ಹುದ್ದೆಗಳನ್ನು ಅಲಂಕರಿಸಿಧಿರುವ ಇಧಿವರು, ನಾನ್ ಎಕ್ಸಿಕ್ಯೂಟೀವ್ (ಕಾರ್ಯ ನಿರ್ವಾಹಕೇತರ) ಹುದ್ದೆಗಳತ್ತ ತಿರುಗಿಯೂ ನೋಡುತ್ತಿಲ್ಲ. ಸರಕಾರಿ ಶಾಲಾ ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರನ್ನು ಹಲವು ವರ್ಷಗಳಿಂದ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲಿಅಬಕಾರಿ ಇಲಾಖೆಯ ‘ಸಿ’ ವೃಂದದ ಸಿಬ್ಬಂದಿಯ ವರ್ಗಾವಣೆಗೆ ಹಿಂದಿನ ವರ್ಷ ಕೌನ್ಸೆಲಿಂಗ್ ಪದ್ಧತಿ ಪರಿಚಯಿಸಿತ್ತು. ಬಳಿಕ ಒಂದೇ ವರ್ಷದಲ್ಲಿ148 ಅಬಕಾರಿ ಇನ್ ಸ್ಪೆಕ್ಟರ್ ಗಳು, 114 ಸಬ್ ಇನ್ ಸ್ಪೆಕ್ಟರ್ ಗಳು, 7 ಹೆಡ್ ಕಾನ್ ಸ್ಟೆಬಲ್ ಗಳು ಹಾಗೂ 415 ಕಾನ್ ಸ್ಟೆಬಲ್ ಗಳೂ ಸೇರಿದಂತೆ ‘ಸಿ’ ವೃಂದದ 684 ಸಿಬ್ಬಂದಿಯನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಈಗ ಅಬಕಾರಿ ಅಧೀಕ್ಷಕರು, ಉಪ ಅಧೀಕ್ಷಕರೂ ಸೇರಿದಂತೆ ‘ಬಿ’ ವೃಂದದ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನಡೆಸುವ ನಿಟ್ಟಿನಲ್ಲಿಸೇವಾ ನಿಯಮಗಳ ತಿದ್ದುಪಡಿಗಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗರಿಷ್ಠ 2 ವರ್ಷ ಪೂರೈಸಿದವರ ಎತ್ತಂಗಡಿ: ಇಲಾಖೆಯಲ್ಲಿಸುಮಾರು 6 ಸಾವಿರ ಮಂಜೂರಾದ ಹುದ್ದೆಗಳಿವೆ. ಈ ಪೈಕಿ 83 ಅಧೀಕ್ಷಕರು ಮತ್ತು 111 ಉಪ ಅಧೀಕ್ಷಕರ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನಡೆಸುವ ಪ್ರಸ್ತಾವವಿದೆ. ಇಲಾಖೆ ಹುದ್ದೆಗಳನ್ನು ಎಕ್ಸಿಕ್ಯೂಟೀವ್ ಮತ್ತು ನಾನ್ ಎಕ್ಸಿಕ್ಯೂಟೀವ್ ಎಂದು ವಿಂಗಡಿಸಲಾಗಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿಗರಿಷ್ಠ 2 ವರ್ಷ ಕಾರ್ಯ ನಿರ್ವಹಿಸಿದ ಅಧೀಕ್ಷಕರು, ಉಪ ಅಧೀಕ್ಷಕರನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸುವುದೂ ಸೇರಿದಂತೆ ಹಲವು ಅಂಶಗಳು ಪ್ರಸ್ತಾವನೆಯಲ್ಲಿವೆ. ವರ್ಗಾವಣೆಗೆ ಮಾನದಂಡ: ಇಲಾಖೆಯ ‘ಬಿ’ ವೃಂದದ ಅಧಿಕಾರಿಗಳು ನಿಯೋಜನೆ ಗೊಂಡ ಹುದ್ದೆಯಲ್ಲಿಪೂರೈಸಬೇಕಾದ ಗರಿಷ್ಠ ಸೇವಾವಧಿಯನ್ನು ವರ್ಗಾವಣೆ ಮಾರ್ಗಸೂಚಿಯಲ್ಲಿನಿಗದಿಪಡಿಸಲಾಗಿದೆ. ದಂಪತಿ ಪ್ರಕರಣ, ಆರೋಗ್ಯ ಸಮಸ್ಯೆ, ಸೇವಾ ಜ್ಯೇಷ್ಠತೆ, ಸೇವಾ ನಿವೃತ್ತಿ ಅವಧಿ, ಕೋರಿಕೆ ಸೇರಿದಂತೆ ಹಲವು ಅಂಶಗಳನ್ನು ವರ್ಗಾವಣೆಗೆ ಮಾನದಂಡವಾಗಿ ಪರಿಗಣಿಸಲು ನಿರ್ಧರಿಸಲಾಗಿದೆ. ಇಲಾಖೆಯ ಒಟ್ಟಾರೆ ಸಿಬ್ಬಂದಿಯಲ್ಲಿಶೇ. 6ರಷ್ಟನ್ನು ಮೀರದಂತೆ ವರ್ಗಾವಣೆ ಮಾಡಲಾಗುತ್ತದೆ. ‘‘ರಾಜ್ಯದ ಬೊಕ್ಕಸ ತುಂಬಿಸುವ ಪ್ರಮುಖ ಇಲಾಖೆಯಾದ ಅಬಕಾರಿ ಇಲಾಖೆಯಲ್ಲಿದಕ್ಷತೆ, ಕಾರ್ಯಕ್ಷಮತೆ ಹೆಚ್ಚಿಸಲು, ಆಡಳಿತಕ್ಕೆ ಚುರುಕು ಮುಟ್ಟಿಸಲು ಸಿಬ್ಬಂದಿಯ ವರ್ಗಾವಣೆ ಪ್ರಕ್ರಿಯೆಯಲ್ಲಿಹಿಂದಿನ ವರ್ಷವೇ ಕೌನ್ಸೆಲಿಂಗ್ ವ್ಯವಸ್ಥೆ ಪರಿಚಯಿಸಲಾಗಿದೆ. ಈಗ ‘ಬಿ’ ವೃಂದದ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನಡೆಸಲು ಸರಕಾರ ತೀರ್ಮಾನಿಸಿದೆ. ಇದರಿಂದ ಭ್ರಷ್ಟಾಚಾರ ನಿರ್ಮೂಲನೆಯಾಗಿ ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ಅನುಕೂಲವಾಗಲಿದೆ. ಜತೆಗೆ, ಸಿಬ್ಬಂದಿಯ ಕಾರ್ಯದಕ್ಷತೆ ಹೆಚ್ಚಲಿದೆ,’’ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.