ವಿದ್ಯುತ್ ದರ ಪರಿಷ್ಕರಣೆ ಪ್ರಸ್ತಾವನೆ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರ ಪರಿಷ್ಕರಣೆ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ, ಆದರೆ ಆಯೋಗ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಸಭಾನಾಯಕ ಎನ್ .ಎಸ್ .ಬೋಸರಾಜು ಸೋಮವಾರ ಮೇಲ್ಮನೆಗೆ ತಿಳಿಸಿದರು. ಪ್ರಶೋತ್ತರ ವೇಳೆಯಲ್ಲಿಶಾಸಕ ಸಿ.ಎನ್ . ಮಂಜೇಗೌಡ ಪ್ರಶ್ನೆಗೆ ಇಂಧನ ಸಚಿವರ ಪರ ಉತ್ತರಿಸಿ, ‘ಧಿ‘ಏ.1ರಿಂದ ಯಾವುದೇ ದರ ಹೆಚ್ಚಳವಿರುವುದಿಲ್ಲ. ವಿದ್ಯುತ್ ಸರಬರಾಜು ಕಂಪನಿಗಳು ಆದಾಯ ಕೊರತೆ ಒಳಗೊಂಡಂತೆ ಮುಂದಿನ ಹಣಕಾಸು ವರ್ಷ ಆರಂಭದ 120 ದಿನಗಳ ಮೊದಲು ಅರ್ಜಿ ಸಲ್ಲಿಸಲು ಅವಕಾಶವಿದೆ. ಕೆಇಆರ್ ಸಿಯು 2025ರ ಮಾ.27ರಂದು 2025-26 ನೇ ಸಾಲಿನಿಂದ 2027-28 ಸಾಲಿನವರೆಗೂ ಬಹುವಾರ್ಷಿಕ ದರ ಪರಿಷ್ಕರಣೆ ಆದೇಶ ಹೊರಡಿಸಿದೆ,’ಧಿ’ ಎಂದರು. ಬೆಸ್ಕಾಂಗೆ 2802 ಕೋಟಿ ರೂ. ನಷ್ಟ: ‘ಧಿ‘ವಿದ್ಯುತ್ ಸರಬರಾಜು ಕಂಪನಿಗಳು 2024-25ನೇ ಸಾಲಿನ ವಾರ್ಷಿಕ ನಿರ್ವಹಣಾ ಪರಿಶೀಲನಾ ಅರ್ಜಿಯನ್ನು ಕಳೆದ ನ.29 ರಂದು ಆಯೋಗಕ್ಕೆ ಸಲ್ಲಿಸಿವೆ. ಬೆಂಗಳೂರು ವಿದ್ಯುತ್ ಕಂಪನಿಯು 2802 ಕೋಟಿ ರೂ. ಸೇರಿ ಎಲ್ಲಾವಿದ್ಯುತ್ ಸರಬರಾಜು ಕಂಪನಿಗಳು 4,516 ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ಗೃಹಬಳಕೆ ಯೋಜನೆಯಿಂದ 1.65 ಕೋಟಿ ರೂ. ಬಿಲ್ ಅನ್ನು ಸರಕಾರ ಪಾವತಿಸಿದ್ದು, 2023ರ ಆಗಸ್ಟ್ ನಿಂದ ಪ್ರಸಕ್ತ ಮಾರ್ಚ್ವರೆಗೆ 25,076 ಕೋಟಿ ರೂ. ಭರಿಸಲಾಗಿದೆ. ಇದು ಜನಸಾಮಾನ್ಯರ ಹೊರೆ ತಗ್ಗಿಸಿದೆ,’ಧಿ’ ಎಂದರು. ದೈಹಿಕ ಶಿಕ್ಷಕರ ನೇಮಕಕ್ಕೆ ಆದ್ಯತೆ ರಾಜ್ಯದಲ್ಲಿ15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಯ ವೇಳೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೂ ಆದ್ಯತೆ ನೀಡಲಾಗುವುದು ಎಂದು ಪ್ರಶ್ನೋತ್ತರ ವೇಳೆಯಲ್ಲಿಬಿಜೆಪಿ ಸದಸ್ಯ ಚಿದಾನಂದಗೌಡ ಪ್ರಶ್ನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಪರಿಷತ್ತಿನಲ್ಲಿತಿಳಿಸಿದರು. ‘ಧಿ‘ರಾಜ್ಯದಲ್ಲಿಪ್ರಾಥಮಿಕ ಶಾಲೆಗಳಲ್ಲಿ3361, ಪ್ರೌಢಶಾಲೆಯಲ್ಲಿ1841 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಮುಂಬರುವ ಹಂತದಲ್ಲಿ15 ಸಾವಿರ ಶಿಕ್ಷಕರ ನೇಮಕದ ವೇಳೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಲಾಗುವುದು, ದೈಹಿಕ ಶಿಕ್ಷಣ ಅವಧಿಯಲ್ಲಿನೈತಿಕ ಶಿಕ್ಷಣ ಬೋಧಿಸುತ್ತಿಲ್ಲ, ಅದಕ್ಕೆ ಬೇರೆ ಪಿರಿಯಡ್ ನಿಗದಿಗೊಳಿಸಲು ನಿರ್ದೇಶನ ನೀಡಲಾಗಿದೆ,’’ ಎಂದರು. ಪೆರಿಫೆರಲ್ ಕ್ಯಾನ್ಸರ್ ಕಟ್ಟಡ ಪೂರ್ಣ ತುಮಕೂರು ಮತ್ತು ಮೈಸೂರಿನಲ್ಲಿಪೆರಿಫೆರಲ್ ಕ್ಯಾನ್ಸರ್ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡಿದ್ದು ಹುದ್ದೆಗಳ ನೇಮಕ, ವೈದ್ಯಕೀಯ ಉಪಕರಣಗಳ ಖರೀದಿ ಹಾಗೂ ಅಳವಡಿಕೆ ಕಾರ್ಯ ಪೂರ್ಣಗೊಂಡ ಬಳಿಕ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶೋತ್ತರ ವೇಳೆಯಲ್ಲಿಡಾ.ಆರತಿಕೃಷ್ಣ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು. ‘ಧಿ‘ಕ್ಯಾನ್ಸರ್ ರೋಗಿಗಳಿಗೆ ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರು ಭಾಗದ ಕ್ಯಾನ್ಸರ್ ರೋಗಿಗಳಿಗೆ ಮೈಸೂರು ಜಿಲ್ಲಾಸ್ಪತ್ರೆಯ ಆವರಣದಲ್ಲಿಕಿಮೋಥೆರಪಿ ಚಿಕಿತ್ಸೆ ನೀಡಲು ಡೇ ಕೇರ್ ವ್ಯವಸ್ಥೆ ಕಿದ್ವಾಯಿ ಸಂಸ್ಥೆಯಿಂದ ಒದಗಿಸಲಾಗಿದೆ,’ಧಿ’ ಎಂದರು. 12 ಸಾವಿರ ಕೆರೆಗಳ ಒತ್ತುವರಿ ತೆರವು ರಾಜ್ಯದಲ್ಲಿ15,525 ಕೆರೆಗಳ ಅಚ್ಚುಕಟ್ಟು ಪ್ರದೇಶ ಒತ್ತುವರಿಯಾಗಿದ್ದು, ಆ ಪೈಕಿ 12 ಸಾವಿರ ತೆರವುಗೊಳಿಸಲಾಗಿದೆ ಎಂದು ಸಧಿಚಿವ ಎನ್ .ಎಸ್ .ಬೋಸರಾಜು ಹೇಳಿದರು. ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಧಿಸಿ, ಧಿ‘ಧಿ‘ಸಿಎಂ ಅಧ್ಯಕ್ಷರಾಗಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆಗಳನ್ನು ಹಲವು ಬಾರಿ ನಡೆಸಲಾಗಿದೆ. ಸಿಎಂ ಸೂಚನೆಯಂತೆ ರಾಜ್ಯದಲ್ಲಿ41,749 ಕೆರೆಗಳು ಇರುವುದನ್ನು ಗುರುತಿಸಿದೆ. ಆ ಪೈಕಿ 40,320 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ,’ಧಿ’ ಎಂದರು. ಇದಕ್ಕೂ ಮುನ್ನ ಸದಸ್ಯೆ ಹೇಮಲತಾನಾಯಕ್ , ಕೊಪ್ಪಳದ ಹುಲಿಕೆರೆಯ ಒತ್ತುವರಿ ವಿಚಾರವನ್ನು ಪ್ರಸ್ತಾಪಿಸಿದರು. ಅದಕ್ಕೆ ಉತ್ತರಿಸಿದ ಸಚಿವ ರಹೀಂ ಖಾನ್ , ‘ಕೆರೆ ಒತ್ತುವರಿ ತೆರವುಗೊಳಿಸಲು ಕಾರ್ಯ ನಡೆದಿದೆ’ ಎಂದು ಹೇಳಿದರು.

