ವಿದ್ಯಾ ನವೀನ್ ಕಾಲಂ

Contributed byshubha.hegde@timesgroup.com|Vijaya Karnataka

ಹಬ್ಬದ ಸಂದರ್ಭದಲ್ಲಿ ಕಣ್ಣಿನ ಅಲಂಕಾರಕ್ಕೆ ಕಾಡಿಗೆಯ ಬಳಕೆ ಮುಖ್ಯ. ಕೆಳಗಿನ ವಾಟರ್‌ಲೈನ್‌ಗೆ ಕಾಡಿಗೆ ಹಚ್ಚುವುದರಿಂದ ಕಣ್ಣುಗಳು ಆಕರ್ಷಕವಾಗಿ ಕಾಣುತ್ತವೆ. ವಾಟರ್‌ಪ್ರೂಫ್‌ ಕಾಜಲ್‌ ಬಳಸುವುದು ಉತ್ತಮ. ಕಣ್ಣಿನ ಒಳಭಾಗಕ್ಕೆ ನಿಧಾನವಾಗಿ, ಮೃದುವಾಗಿ ಕಾಡಿಗೆ ಹಚ್ಚಿ. ಇದರಿಂದ ಕಣ್ಣುಗಳು ದೊಡ್ಡದಾಗಿ, ಮಿನುಗುವಂತೆ ಕಾಣುತ್ತವೆ. ಈ ಲುಕ್‌ ಸಂಜೆ ಕಾರ್ಯಕ್ರಮಗಳಿಗೆ ಸೂಕ್ತ.

makeup tips for festive eye looks

ಹಬ್ಬದ ಲುಕ್ ಗೆ ಕಾಡಿಗೆಯ ಅಂದ

ವಿದ್ಯಾ ನವೀನ್

ಹಬ್ಬದ ಮೇಕಪ್ ನಲ್ಲಿಕಣ್ಣಿನ ಅಲಂಕಾರ ಮುಖ್ಯ. ಅದರಲ್ಲೂಕಾಡಿಗೆಯೇ ಇಡೀ ಮೇಕಪ್ ಲುಕ್ ಅನ್ನು ಇಮ್ಮಡಿಸುವಂಥದ್ದು. ಕಣ್ಣಿನ ಕೆಳಭಾಗದ ಕಾಡಿಗೆ ಇಡೀ ಮುಖದ ಅಂದವನ್ನು ಹೆಚ್ಚಿಸುತ್ತದೆ. ಹೀಗಾಗಿ ಕೆಳಗಿನ ವಾಟರ್ ಲೈನ್ ಗೆ ಕಾಡಿಗೆಯನ್ನು ಸಮರ್ಪಕವಾಗಿ ಹಚ್ಚಿದರೆ ಕಣ್ಣುಗಳು ಹೆಚ್ಚು ಸ್ಪಷ್ಟ ಮತ್ತು ಆಕರ್ಷಕವಾಗಿ ಕಾಣುತ್ತವೆ.

ಇದಕ್ಕಾಗಿ ವಾಟರ್ ಪ್ರೂಫ್ ಕಾಜಲ್ ಬಳಸುವುದು ಉತ್ತಮ. ಕಣ್ಣಿನ ಒಳಭಾಗವನ್ನು ನಿಧಾನವಾಗಿ ಕೆಳಕ್ಕೆ ಇಳಿಸಿ ಕಾಜಲ್ ಅನ್ನು ಮೃದುವಾಗಿ ಒಳಗಿನ ರೇಖೆಯ ಮೇಲೆ ಹಚ್ಚಿ. ಹೆಚ್ಚು ಒತ್ತಡ ಕೊಡಬೇಡಿ. ಏಕೆಂದರೆ ಆ ಭಾಗ ತುಂಬಾ ನಾಜೂಕಾಗಿರುತ್ತದೆ. ಒಮ್ಮೆಲೇ ಹೆಚ್ಚು ಹಚ್ಚಬೇಡಿ. ನಿಧಾನವಾಗಿ ಹಚ್ಚಿದರೆ ಸಮವಾಗಿ ಬರುತ್ತದೆ. ಕಣ್ಣುಗಳು ದೊಡ್ಡದಾಗಿ ಮತ್ತು ಮಿನುಗುವಂತೆ ಕಾಣುತ್ತವೆ. ಸರಿಯಾಗಿ ಹಚ್ಚಿದರೆ ಕಾಜಲ್ ಹೆಚ್ಚು ಸಮಯ ಉಳಿಯುತ್ತದೆ. ಈ ಲುಕ್ ವಿಶೇಷವಾಗಿ ಸಂಜೆ ಕಾರ್ಯಕ್ರಮಗಳು ಮತ್ತು ಹಬ್ಬಗಳಿಗೆ ಸೂಕ್ತ.