ಘ್ಕಿphಟಠಿಟ ್ಛಜ್ಝಿಛಿ ್ಞaಞಛಿಧಿ
sh್ಠಚಿha ಡಿಟ್ಟk /್ಞಛ್ಡಿಠಿ ಡಿಛಿಛಿk sಠಿಟ್ಟಜಿಛಿs / paಜಛಿ 2/ಆhaಜya Na್ಞ್ಜ್ಠ್ಞdasಡಿaಞy
ಹಬ್ಬದ ಉಡುಗೆಗೆ ಮೆರುಗು ನೀಡುವ ಆಭರಣ
ಇಂಟ್ರೊ: ಹೊಸ ವರ್ಷದ ಸಡಗರದಲ್ಲಿನವೀನ ಬಗೆಯ ಆಭರಣ ಲೋಕ ಅನಾವರಣಗೊಂಡಿದೆ.
ಸ್ಲಗ್ : ಹಬ್ಬದ ಒಡವೆ
ಭಾಗ್ಯ ನಂಜುಂಡಸ್ವಾಮಿ
ಯುಗಾದಿ ಹಾಗೂ ಬೇಸಿಗೆ ಕಾಲದ ಮದುವೆ ಸೀಸನ್ ಗೆ ಅನುಗುಣವಾಗಿ ವಿಭಿನ್ನ ಬಗೆಯ ಆಭರಣಗಳು ಮಾರುಕಟ್ಟೆಗೆ ಬಂದಿವೆ. ಕಡಿಮೆ ತೂಕದ ಹಾಗೂ ಆ್ಯಂಟಿಕ್ ಲುಕ್ ನೀಡುವ ಆಭರಣಗಳು ಬೇಡಿಕೆ ಹೆಚ್ಚಿಸಿಕೊಂಡಿದ್ದು, ಹಬ್ಬದ ಸಡಗರದಲ್ಲಿಒಡವೆಗಳ ಹೊಳಪು ಮೇಳೈಸುತ್ತಿದೆ. ಹಬ್ಬದ ದಿನ ಧರಿಸುವ ಆಕರ್ಷಕ ಉಡುಗೆಯೊಂದಿಗೆ ಆಭರಣವನ್ನು ಮ್ಯಾಚ್ ಮಾಡಿ.
ಕತ್ತಿನ ಸೌಂದರ್ಯಕ್ಕೆ ಹೊಸ ಕಳೆ
ಕುತ್ತಿಗೆಗೆ ಅಂಟಿಕೊಂಡಂತೆ ಇರುವ ಚೋಕರ್ ನೆಕ್ಲೇಸ್ ಗಳು ಇತ್ತೀಚಿನ ಬಹುದೊಡ್ಡ ಟ್ರೆಂಡ್ . ಬಂಗಾರದ ಪಾಲಿಶ್ ಅಥವಾ ರತ್ನಗಳ ಕೆತ್ತನೆಯಿಂದ ಇವು ಸೊಬಗು ನೀಡುತ್ತವೆ. ಸಾಂಪ್ರದಾಯಿಕ ಸೀರೆಗಳೊಂದಿಗೆ ಇವುಗಳನ್ನು ಧರಿಸಿದಾಗ ಮಹಿಳೆಯರಿಗೆ ಭವ್ಯ ನೋಟ ದೊರೆಯುತ್ತದೆ.
ಆಧುನಿಕತೆಯ ಸ್ಪರ್ಶ
ವಿಭಿನ್ನ ಉದ್ದದ ಹಲವಾರು ಸರಪಳಿಗಳು ಸೇರಿ ಸಿದ್ಧವಾಗುವ ಲೇಯರ್ಡ್ ನೆಕ್ಲೇಸ್ ಗಳು ಆಕರ್ಷಕ ಪದರಗಳನ್ನು ಸೃಷ್ಟಿಸುತ್ತವೆ. ಸರಳ ಉಡುಪಿನೊಂದಿಗೂ ಇವು ಶ್ರೀಮಂತಿಕೆಯನ್ನು ತರುತ್ತವೆ. ಸಾಂಪ್ರದಾಯಿಕತೆಯ ನಡುವೆ ಆಧುನಿಕ ಶೈಲಿಯನ್ನು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆ. ಸರಳ ಸರಪಳಿಗಳಿಂದ ಹಿಡಿದು ನಾಜೂಕಾದ ಕಲಾತ್ಮಕ ಕೆತ್ತನೆಯ ಹಾರಗಳವರೆಗೆ ಇವು ಎಂದಿಗೂ ಫ್ಯಾಷನ್ ನಿಂದ ಹೊರಗುಳಿಯದ ಆಭರಣಗಳು. ಬಂಗಾರದ ಪಾಲಿಶ್ ಹೊಂದಿರುವ ಇಂತಹ ನೆಕ್ಲೇಸ್ ಗಳನ್ನು ಪೆಂಡೆಂಟ್ ಗಳೊಂದಿಗೆ ಧರಿಸುವ ಮೂಲಕ ವೈಯಕ್ತಿಕ ಶೈಲಿಯನ್ನು ಎತ್ತಿ ತೋರಿಸಬಹುದು.
ಬಾಕ್ಸ್
ಸೀರೆಗೆ ತಕ್ಕಂತೆ ಆಭರಣಗಳ ಆಯ್ಕೆ ಹೇಗೆ?
ಯಾವ ಸೀರೆಗೆ ಎಂತಹ ಆಭರಣ ಧರಿಸಬೇಕು ಎಂಬ ಜಾಣ್ಮೆ ನಿಮ್ಮ ನೋಟವನ್ನು ಬದಲಿಸಬಲ್ಲದು. ಪ್ರಿಂಟೆಡ್ ಸೀರೆಗಳಿಗೆ ವಿನ್ಯಾಸಗಳು ಹೆಚ್ಚಿರುವುದರಿಂದ ಸರಳ ಮತ್ತು ನಾಜೂಕಾದ ಆಭರಣಗಳನ್ನು ಧರಿಸುವುದು ಸೂಕ್ತ. ಬನಾರಸಿ ಸೀರೆಗಳು ಅದ್ಧೂರಿ ವಿನ್ಯಾಸವಿರುವುದರಿಂದ ಈ ಸೀರೆಗಳಿಗೆ ಗಮನ ಸೆಳೆಯುವ ದೊಡ್ಡ ಆಭರಣಗಳು ಒಪ್ಪುತ್ತವೆ. ಕಾಂಜೀವರಂ ಸೀರೆಗಳಿಗೆ ಸಾಂಪ್ರದಾಯಿಕ ಬಂಗಾರದ ಆಭರಣಗಳೇ ಅತ್ಯುತ್ತಮ. ಇದು ಸಂಪ್ರದಾಯ ಮತ್ತು ಭವ್ಯತೆಯ ಪರಿಪೂರ್ಣ ಸಮ್ಮಿಲನ.
ಮಾಡರ್ನ್ ಜುವೆಲ್ಲರಿಯನ್ನು ಟ್ರಡಿಷನಲ್ ಔಟ್ ಫಿಟ್ ನೊಂದಿಗೆ ಸುಂದರವಾಗಿ ಧರಿಸಬಹುದು. ಇತ್ತೀಚಿನ ದಿನಗಳಲ್ಲಿಸಂಪ್ರದಾಯ ಮತ್ತು ಆಧುನಿಕ ಶೈಲಿ ಒಂದಾಗಿರುವ ಫ್ಯಾಷನ್ ಹೆಚ್ಚು ಜನಪ್ರಿಯವಾಗುತ್ತಿದೆ. ಸಾಂಪ್ರದಾಯಿಕ ಸೀರೆ ಅಥವಾ ಲೆಹೆಂಗಾಕ್ಕೆ ಸರಳವಾದ ನೆಕ್ಲೇಸ್ , ಚೋಕರ್ ಅಥವಾ ಲೇಯರ್ಡ್ ಸರಪಳಿಗಳನ್ನು ಧರಿಸಿದರೆ ಉಡುಪಿಗೆ ಹೊಸ ಶೈಲಿ ಮತ್ತು ವಿಭಿನ್ನತೆ ದೊರೆಯುತ್ತದೆ. ಇದರಿಂದ ಸಾಂಪ್ರದಾಯಿಕ ಉಡುಪಿನ ಸೊಬಗು ಉಳಿಯುವುದರ ಜೊತೆಗೆ ಆಧುನಿಕತೆಯ ಸ್ಪರ್ಶವೂ ಕಾಣಿಸುತ್ತದೆ.

