ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ಕಾಯಿದೆ ( ಪಿಟಿಸಿಎಲ್ ) ಅಡಿಯಲ್ಲಿಸರಕಾರದಿಂದ ಮಂಜೂರಾದ ಭೂಮಿಯ ಮೊದಲ ಬಾರಿ ಮಾರಾಟ ಪ್ರಕ್ರಿಯೆಯನ್ನು ಅಸಿಂಧುಗೊಳಿಸಿದ ಬಳಿಕ ನಡೆಯುವ ಎಲ್ಲಾಮಾರಾಟ ಪ್ರಕ್ರಿಯೆ ರದ್ದಾಗಲಿವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾಗಿದ್ದ ಜಮೀನನ್ನು ಹಲವು ಸುತ್ತಿನ ಮಾರಾಟದ ಬಳಿಕ ಖರೀದಿಸಿದ್ದ ಎಸ್ .ಕೆ.ಜಯರಾಮ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಆರ್ .ದೇವದಾಸ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ. ‘ತಮ್ಮಲ್ಲಿಇಲ್ಲದ್ದನ್ನು ಕೊಡಲಾಗುವುದಿಲ್ಲ’ ಎಂಬ ಕಾನೂನು ತತ್ವ ಉಲ್ಲೇಖಿಸಿರುವ ನ್ಯಾಯಪೀಠ, ‘ಧಿ‘ಜಮೀನು 1956ರಲ್ಲಿಮಾರಾಟವಾಗಿರುವುದು ಅನಧಿಕೃತವೆಂದು ಘೋಷಣೆ ಮಾಡಲಾಗಿದೆ. ಅದೇ ಆಧಿಧಾರದಲ್ಲಿನಂತರದ ಎಲ್ಲಮಾರಾಟಗಳು ಶೂನ್ಯವಾಗಲಿವೆ. ಆದ್ದರಿಂದ ಜಮೀನು ಮಂಜೂರುದಾರರಿಂದ ಹಲವು ಮಾರಾಟಗಳ ಬಳಿಕ ಜಯರಾಮ್ 1988ರಲ್ಲಿಖರೀದಿಸಿರುವ ಪ್ರಕ್ರಿಯೆಯೂ ಕಾನೂನಿನ ಪ್ರಕಾರ ರದ್ದಾಗಲಿದೆ,’’ ಎಂದು ಅಧಿಭಿಧಿಪ್ರಾಧಿಯಧಿಪಟ್ಟು, ಅರ್ಜಿಯನ್ನು ವಜಾಗೊಳಿಸಿದೆ.

