ದ್ರೌಪದಿ ಗಣಿಗಾರ ಬೈಲಹೊಂಗಲ: ನಗರದ ಗೋಂಧಳಿ ಗಲ್ಲಿನಿವಾಸಿ ದ್ರೌಪದಿ ಬರಮಾಜಿ ಗಣಿಗಾರ (62) ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಃಆಗೂ ಬಳಗವಿದೆ. ರಾಜು ಬಡ್ಲಿ ಬೈಲಹೊಂಗಲ: ನಗರದ ಸೋಮವಾರ ಪೇಟೆ ನಿವಾಸಿ ರಾಜು ಮಾರುತಿ ಬಡ್ಲಿ(52) ನಿಧನರಾದರು. ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಳಗವಿದೆ. ಬಸವರಾಜ ಶಿಂತ್ರಿ ಬೈಲಹೊಂಗಲ: ಬಡ್ಲಿಗ್ರಾಮದ ನಿವಾಸಿ ಬಸವರಾಜ ಮೂಗಪ್ಪ ಶಿಂತ್ರಿ (58) ನಿಧನರಾದರು. ಮೃತರಿಗೆ ಪತ್ನಿ ಹಾಗೂ ಪುತ್ರ ಸೇರಿದಂತೆ ಅಪಾರ ಬಳಗವಿದೆ. ಮಹಾದೇವ ಹುಣಶೀಕಟ್ಟಿ ಬೈಲಹೊಂಗಲ: ಸ್ಥಳೀಯ ಮೃತ್ಯುಂಜಯ ನಗರ ನಿವಾಸಿ ಮಹಾದೇವ ಗೂಳಪ್ಪ ಹುಣಶೀಕಟ್ಟಿ (65) ಸೋಮವಾರ ನಿಧನರಾದರು. ಮೃತರಿಗೆ ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಳಗವಿದೆ. ಸಂತಾಪ: ಮೂರು ಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ ಹಾಗೂ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಶಿವಪ್ಪ ತಳವಾರ ಬೈಲಹೊಂಗಲ: ಹಿಟ್ಟಣಗಿ ಗ್ರಾಮದ ನಿವಾಸಿ ಶಿವಪ್ಪ ಇಟಪ್ಪ ತಳವಾರ (70) ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಸೇರಿದಂತೆ ಅಪಾರ ಬಳಗವಿದೆ. ಬಾಪುಸಾಹೇಬ್ ಶಿಂಧೆ ಕಾಗವಾಡ: ಉಗಾರ ಸಕ್ಕರೆ ಕಾರ್ಖಾನೆಯ ನಿವೃತ್ತ ಅಧಿಕಾರಿ ಬಾಪುಸಾಹೇಬ್ ಅಬಾಸಾಹೇಬ್ ಶಿಂಧೆ(75) ಸೋಮವಾರ ನಿಧನರಾದರು. ಮೃತರು ಮಾಜಿ ಸಚಿವ ಶ್ರೀಮಂತ ಪಾಟೀಲ ಅವರ ಆಪ್ತ ಸಹಾಯಕ ವಿನಾಯಕ ಶಿಂಧೆ ಅವರ ತಂದೆಯವರಾಗಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗ ಇದೆ. ರುದ್ರವ್ವ ಪಾಟೀಲ ಮುರಗೋಡ: ಸ್ಥಳೀಯ ಕಸಬಾ ಗಲ್ಲಿನಿವಾಸಿ ರುದ್ರವ್ವ (ರೂಪಾ) ಗೌಡಪ್ಪ ಪಾಟೀಲ (47) ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಳಗವಿದೆ.

