ಶ್ವಾನ ಪ್ರೇಮದ ಎಮೋಷನಲ್ ಡ್ರಾಮಾ
ಇಂಟ್ರೊ
ಶ್ವಾನಕ್ಕೂ ಭಾವನೆಗಳಿವೆ, ಮನುಷ್ಯರಿಗಿಂತ ಹೆಚ್ಚು ನಾಯಿಗಳೇ ಭಾವನಾತ್ಮಕವಾಗಿ ಕನೆಕ್ಟ್ ಆಗಿರುತ್ತವೆ ಎಂದು ಹೇಳಿರುವ ‘ ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಬಗ್ಗೆ ನಿರ್ದೇಶಕ ವಿಶ್ವಾಸ್ ಕೃಷ್ಣ ಮಾತನಾಡಿದ್ದಾರೆ.
ಕಿರಣ್ ಚಂದ್ರ
ಸ್ಯಾಂಡಲ್ ವುಡ್ ನಲ್ಲಿಶ್ವಾನ ಪ್ರೀತಿ ಕುರಿತ ಸಾಕಷ್ಟು ಸಿನಿಮಾಗಳು ಬಂದಿವೆ. ಈಗ ‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರ ಕೂಡ ಇದೇ ಜಾನರ್ ನದ್ದಾಗಿದ್ದರೂ ಒಂದು ವಿಭಿನ್ನ ಪ್ರಯತ್ನವನ್ನು ಇದರಲ್ಲಿಮಾಡಲಾಗಿದೆ. ಈ ಸಿನಿಮಾದಲ್ಲಿಪ್ರಕೃತಿ ಎಂಬ ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಇದೇ ಮೊದಲ ಬಾರಿಗೆ ವಿಶೇಷ ಚೇತನ ಮಗುವಾಗಿ ನಟಿಸಿದ್ದಾರೆ. ಲೀಡ್ ಪಾತ್ರಗಳಲ್ಲಿಮಾಧವ್ ಮತ್ತು ಸ್ವಪ್ನ ನಟಿಸಿದ್ದಾರೆ. ವಿಲನ್ ಆಗಿ ವರುಣ್ ಹಾಗೂ ಇನ್ನೊಂದು ಪ್ರಮುಖ ಪಾತ್ರದಲ್ಲಿಶಶಿಧರ್ ಭಟ್ ನಟಿಸಿದ್ದಾರೆ. ಪೆಟ್ ಲವ್ ಸಿನಿಮಾವಾದರೂ ಇದರಲ್ಲೇನೋ ವಿಶೇಷವಿದೆ ಮತ್ತು ಅದು ಕಾಡುವ ಭಾವನೆಗಳಿಂದ ಕೂಡಿದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.
‘ಈ ಸಿನಿಮಾದಲ್ಲಿಒಬ್ಬ ವಿಶೇಷ ಚೇತನ ಹುಡುಗಿಗೆ ಆಕಸ್ಮಿಕವಾಗಿ ಒಂದು ನಾಯಿ ಸಿಗುತ್ತದೆ. ಅವೆರಡು ನಿಷ್ಕಲ್ಮಶ ಜೀವಗಳ ನಡುವೆ ಸುಂದರ ಸಂಬಂಧವೊಂದು ಬೆಳೆಯುತ್ತದೆ. ಶ್ವಾನಗಳಿಗೂ ಮನಸ್ಸಿದೆ, ಅವುಗಳ ಭಾವನೆ ಮನುಷ್ಯರ ಭಾವನೆಗಳಿಗಿಂತ ಹೆಚ್ಚು ಗಾಢವಾಗಿರುತ್ತದೆ ಎನ್ನುವುದನ್ನು ಇದರಲ್ಲಿತೋರಿಸಲಾಗಿದೆ. ಅವರಿಬ್ಬರ ನಡುವೆ ಆಗತಾನೇ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯೊಬ್ಬನ ಆಗಮನವಾಗುತ್ತದೆ. ಆ ನಾಯಿಗೂ, ಆ ವ್ಯಕ್ತಿಗೂ ಏನೂ ಸಂಬಂಧ? ಆತನ ಎಂಟ್ರಿಯಿಂದ ಹುಡುಗಿ ಹಾಗೂ ನಾಯಿಯ ಬದುಕಿನಲ್ಲಿಏನೆಲ್ಲಾಬದಲಾವಣೆಯಾಗುತ್ತದೆ ಎನ್ನುವುದೇ ‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾದ ಕಥೆ. ಇತರೆಲ್ಲಾಪೆಟ್ ಲವ್ ಸಿನಿಮಾದಲ್ಲಿಶ್ವಾನ ಪ್ರೀತಿ ಹಾಗೂ ಅದರ ನಿಯತ್ತಿನ ಪರಿಚಯ ಮಾಡಿಸಿರುವಂತೇ ಇದರಲ್ಲಿಯೂ ಇದೆ. ಆದರೆ ಇದು ಮಾತನಾಡದೇ ನಾಯಿ ತನ್ನ ಭಾವನೆಗಳನ್ನು ತೋರಿಸುವ ಎಮೋಷನಲ್ ಡ್ರಾಮಾ’ ಎಂದು ಹೇಳಿದ್ದಾರೆ ನಿರ್ದೇಶಕ ವಿಶ್ವಾಸ್ ಕೃಷ್ಣ.
ಬಾಕ್ಸ್
ಶೂಟಿಂಗ್ ಹಿಂದೆ ಎಮೋಷನಲ… ಕಥೆ
ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿನಟಿಸಿರುವ ನಾಯಿಯೇ ‘ಯಾವ ಮೋಹನ ಮುರಳಿ ಕರೆಯಿತು’ದಲ್ಲಿಯೂ ನಟಿಸಿದೆ. ಇದರ ಎಮೋಷನಲ… ಕಥೆಯನ್ನು ವಿವರಿಸಿರುವ ನಿರ್ದೇಶಕರು, ‘ಎರಡು ವರ್ಷಗಳ ಹಿಂದೆ ಈ ಸಿನಿಮಾ ಶೂಟಿಂಗ್ ಆರಂಭಿಸಿದಾಗ ಆ ನಾಯಿ ಜೊತೆಗೆ 22 ದಿನಗಳ ಚಿತ್ರೀಕರಣ ಮಾಡಲಾಗಿತ್ತು. ಆದರೆ ಒಂದು ಅಪಘಾತದಲ್ಲಿಆ ಶ್ವಾನ ಸಾವಿಗೀಡಾದ ಕಾರಣ ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಆ ನಾಯಿಗೆ ಒಂದು ಮರಿ ಇತ್ತು. ಅದು ದೊಡ್ಡದಾಗುವವರೆಗೂ ನಾವು ಕಾದೆವು. ಬಳಿಕ ಆ ನಾಯಿ ಮರಿಯನ್ನೇ ಬಳಸಿ ಈ ಸಿನಿಮಾದ ಉಳಿದ ಭಾಗ ಹಾಗೂ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿದೆವು. ಮೊದಲ ನಾಯಿಗೆ ಉತ್ತಮ ತರಬೇತಿ ನೀಡಲಾಗಿತ್ತು. ಅದರ ಮರಿಗೆ ಅಷ್ಟೊಂದು ತರಬೇತಿ ನೀಡಿರದಿದ್ದರೂ ಈ ಚಿತ್ರದಲ್ಲಿಚೆನ್ನಾಗಿ ಅಭಿನಯಿಸಿದೆ’ ಎಂದಿದ್ದಾರೆ.
ಕೋಟ್
‘ಯಾವ ಮೋಹನ ಮುರಳಿ ಕರೆಯಿತು’ ಫೀಲ್ ಗುಡ್ ಮತ್ತು ಕುಟುಂಬದ ಜತೆಗೆ ಕುಳಿತು ನೋಡಬಹುದಾದ ಸಿನಿಮಾ. ಚಿತ್ರಮಂದಿರದಿಂದ ಹೊರಬರುವಾಗ ಎಲ್ಲಾಪ್ರೇಕ್ಷಕರಿಗೂ ಇದರ ಕಥೆ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತದೆ. ಇದು ಶ್ವಾನ ಪ್ರೇಮಿಗಳ ಭಾವುಕ ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತದೆ.
-ವಿಶ್ವಾಸ್ ಕೃಷ್ಣ | ನಿರ್ದೇಶಕ

