ವಿಕ ಸುದ್ದಿಲೋಕ ಬೆಂಗಳೂರು ಪ್ರಸಕ್ತ ವರ್ಷ(2026)ದ ಮೊದಲ ಖಗ್ರಾಸ ಚಂದ್ರಗ್ರಹಣ ಮಾ. 3ರಂದು ಸಂಭವಿ ಸಲಿದೆ. ವಿಶ್ವಾವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಹುಣ್ಣಿಮೆಯ ದಿನವಾದ ಮಂಗಳವಾರ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿಗೋಚರಿಸುತ್ತದೆ. ಪುಬ್ಬಾ ನಕ್ಷತ್ರ, ಸಿಂಹ ರಾಶಿಯಲ್ಲಿಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಹೀಗಾಗಿ ಈ ಗ್ರಹಣವು ಮಘಾ ನಕ್ಷತ್ರ, ಪುಬ್ಬ, ಉತ್ತರ, ಭರಣಿ ಮತ್ತು ಪೂರ್ವಾಷಾಢ ನಕ್ಷತ್ರದವರಿಗೆ ಹಾಗೂ ಸಿಂಹ ರಾಶಿ, ಕನ್ಯಾ, ಮಕರ, ವೃಷಭ ರಾಶಿಯವರೆಗೆ ಸ್ವಲ್ಪ ಅನಿಷ್ಟ ಕಾರಿಯಾಗಲಿದೆ. ಇದಕ್ಕೆ ಪರಿ ಹಾರವೂ ಇದೆ ಎಂದು ದೈವಜ್ಞ ಕೆ.ಎನ್ . ಸೋಮಯಾಜಿ ತಿಳಿಸಿದರು. ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 3.20ಕ್ಕೆ ಸಂಭವಿಸಲಿದೆ. ಗ್ರಹಣದ ಮಧ್ಯಕಾಲ ಸಂಜೆ 5.04ಕ್ಕೆ, ಉನ್ಮಿಲನ ಕಾಲ ಸಂಜೆ 5.33ಕ್ಕೆ. ಮೋಕ್ಷ ಕಾಲವು ಸಂಜೆ 6.47ಕ್ಕೆ ಆಗಲಿದೆ. ಈ ಗ್ರಹಣ ಕಾಲದಲ್ಲಿಊಟೋಪಚಾರ, ನಿದ್ದೆ ನಿಷಿದ್ಧವಾದುದು. ಗ್ರಹಣ ಕಾಲಕ್ಕೆ ಕನಿಷ್ಠ 6 ಗಂಟೆಗಳ ಮುಂಚೆ ಆಹಾರ ಸೇವಿಸಬೇಕು. ಮೋಕ್ಷ ಕಾಲದ ನಂತರ ಸ್ನಾನಾದಿ ಶುಚಿ ರ್ಭೂತರಾಗಿ ದೇವತಾ ಧ್ಯಾನ ದೊಂದಿಗೆ ನಿತ್ಯ ಜೀವನಕ್ಕೆ ಮರಳುವುದು. ದೋಷ ಪರಿಹಾರಕ್ಕೆ ಏನು ದಾನ?: ಗ್ರಹಣ ದೋಷ ಪರಿಹಾರಕ್ಕಾಗಿ ಅಕ್ಕಿ, ಹುರುಳಿ ಮತ್ತು ಬೆಳ್ಳಿ ಲೋಹ ಸಹಿತವಾಗಿ ವಸ್ತ್ರದಾನ ಮಾಡಬೇಕು. ಜತೆಗೆ ಗ್ರಹಣ ಕಾಲದಲ್ಲಿನಾನಾ ದೇವತಾಧ್ಯಾನ, ತರ್ಪಣ, ಜಪ ಮಾಡಬೇಕು. ದಾನಗಳು ಮತ್ತು ದೇವರ ಧ್ಯಾನದಿಂದ ಅನಿಷ್ಟಗಳು ಪರಿಹಾರವಾಗಿ ಶುಭಫಲ ಪ್ರಾಪ್ತಿ ಯಾಗುತ್ತದೆ. ಗ್ರಹಣದ ವೇಳೆ ಆಹಾರ ಸೇವನೆ ಮತ್ತು ಪ್ರಕೃತಿ ಕರೆಗೆ ವಯೋವೃದ್ಧರು, ರೋಗಿಗಳು, ಗರ್ಭಿಣಿ ಯರು, ರಜಸ್ವಲೆ (ಋುತುಮತಿ) ಯಾದವರು ಮತ್ತು ಚಿಕ್ಕ ಮಕ್ಕಳಿಗೆ ವಿನಾಯಿತಿಯಿದೆ ಎಂದು ಸೋಮಯಾಜಿ ನುಡಿದರು. ಬೇಯಿಸಿದ ಆಹಾರಕ್ಕೆ ದರ್ಬೆ ಅನ್ವಯವಲ್ಲ: ತುಪ್ಪ, ಹಾಲು, ಮೊಸರು, ಉಪ್ಪಿನಕಾಯಿ, ಕುಡಿಯುವ ನೀರಿನ ಪಾತ್ರೆ ಮತ್ತು ನೀರಿನ ಟ್ಯಾಂಕ್ ಹಾಗೂ ಇತ್ಯಾದಿಗಳಿಗೆ ದರ್ಬೆಯನ್ನು ಇಡು ವುದರಿಂದ ಗ್ರಹಣದ ಮೈಲಿಗೆ ತಗಲು ವುದಿಲ್ಲ. ಈ ನಿಯಮ ಬೇಯಿಸಿದ ಮತ್ತು ಕರಿದ ಪದಾರ್ಥಗಳಿಗೆ ಅನ್ವಯಿಸುವುದಿಲ್ಲ ಎಂದು ಸೋಮಯಾಜಿ ತಿಳಿಸಿದರು.

