ವಿಕ ಸುದ್ದಿಲೋಕ ಶಹಾಪುರ ತಾಲೂಕಿನ ಮಹಲ್ ರೋಜಾ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣವನ್ನು ಹಿಂಪಡೆಯಬೇಕು ಎಂದು ಬಿಜೆಪಿ ನಾಯಕಿ ಲಲಿತಾ ಅನಪುರ ಆಗ್ರಹಿಸಿದರು. ತಾಲೂಕಿನ ಮಹಲ್ ರೋಜಾ ಗ್ರಾಮದಲ್ಲಿಮಲ್ಲಿಕಾರ್ಜುನ ಮುತ್ಯಾ ಮಠದಲ್ಲಿಶುಕ್ರವಾರ ಹಲವಾರು ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಸಭೆ ಸೇರಿ ಭಕ್ತರು ಹಾಗೂ ಕೋಲಿ ಕಬ್ಬಲಿಗ ಸಮಾಜದ ಮುಖಂಡರ ಸಭೆಯಲ್ಲಿಮಾತನಾಡಿದರು. ನಮ್ಮ ಅಪ್ಪಾಜಿಯ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಅವರ ಹೆಸರನ್ನು ಹಾಳು ಮಾಡಲು ವಿಡಿಯೊವನ್ನು ತಿರುಚಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಕಾನೂನು ಹೋರಾಟ ಸೇರಿ ಮಹತ್ವದ ನಿರ್ಣಯಗಳನ್ನು ಮಾಡಲಾಗಿದೆ. ಇದೇ ವೇಳೆ ಕೇಸ್ ವಾಪಸ್ ತೆಗೆದುಕೊಳ್ಳಲು ಯಾದಗಿರಿ ಜಿಲ್ಲಾಡಳಿತಕ್ಕೆ ಎರಡು ದಿನಗಳ ಗಡುವು ನೀಡಲಾಗಿದೆ ಎಂದು ಸಭೆಯಲ್ಲಿನ ಮಾಹಿತಿ ಸುದ್ದಿಗಾರರಿಗೆ ಹಂಚಿಕೊಂಡರು. ತಾಲೂಕಿನ ಕೋಲಿ ಕಬ್ಬಲಿಗ ಸಮಾಜದ ಮುಖಂಡ ಮಹಾದೇಪ್ಪ ಸಾಲಿಮನಿ ಮಾತನಾಡಿ, ಅನವಶ್ಯಕವಾಗಿ ಗೊಂದಲ ಉಂಟು ಮಾಡಿ ಅಕ್ಕ ತಂಗಿಯ ಸಂಬಂಧದಲ್ಲಿಹುಳಿ ಹಿಂಡಿ ನಮ್ಮ ಸಮಾಜವನ್ನು
ಕೆಡಿಸುವ ಕೆಲಸ ನಡೆದಿದೆ. ಎಲ್ಲಜನಾಂಗದ ಭಕ್ತರು ಇದ್ದೇವೆ. ಜನರು ದಂಗೆ ಏಳುವ ಮೊದಲು ಎಚ್ಚರಗೊಳ್ಳಬೇಕು.
ಧರ್ಮ ಕಾರ್ಯ ಮಾಡುವ ಮುತ್ಯಾ ಅವರಿಗೆ ವ್ಯವಸ್ಥಿತವಾಗಿ ಕೆಳಮಟ್ಟದವರನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಈ ಸಭೆಯಲ್ಲಿಕಾಂಗ್ರೆಸ್ ಮತ್ತು
ಬಿಜೆಪಿ ಮುಖಂಡರು ಸೇರಿ ನೂರಾರು ಸಂಖ್ಯೆಯಲ್ಲಿಪಾಲ್ಗೊಂಡಿದ್ದರು. ಈ ವೇಳೆ ಮುತ್ಯಾ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ ಭಕ್ತರು, ಪ್ರಕರಣದ
ಹಾದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

