ಶಿಧಿಕ್ಷಧಿಣಧಿದಲ್ಲಿಬಧಿದಧಿಲಾಧಿವಧಿಣೆಗೆ ಜಾತಿ ವ್ಯವಸ್ಥೆ ಅಧಿಡ್ಡಿ

Contributed bydjtrupti@gmail.com|Vijaya Karnataka

Chief Minister Siddaramaiah highlighted teachers' role in shaping the nation's future. He noted that the caste system has impeded educational advancements. The government plans to implement the OPS and address teacher demands. Significant CSR funds will be allocated for rural government school infrastructure. Teacher recruitment and addressing transfer issues are priorities. Community involvement in school development is being encouraged.

siddaramaiah teachers have the power to transform society caste system blocks educational change csr funds pledged for rural school development

ವಿಕ ಸುದ್ದಿಲೋಕ ಬೆಂಗಳೂರು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಅರಮನೆ ಮೈದಾನದಲ್ಲಿಶನಿವಾರ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅಧಿವರು ಉದ್ಘಾಟಿಸಿ ಮಾತನಾಡಿದರು. ‘‘ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವವರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.12 ರಿಂದ 15ರಷ್ಟಿದ್ದ ಶಿಕ್ಷಣದ ಪ್ರಮಾಣ ಪ್ರಸ್ತುತ ಶೇ.74ರಷ್ಟಿದೆ. ವ್ಯವಸ್ಥೆಯ ಪರಿಣಾಮವಾಗಿ ಜಾತಿ ವ್ಯವಸ್ಥೆ ಸಮಾಜದಲ್ಲಿಭದ್ರವಾಗಿ ನೆಲೆಯೂರಿರುವುದರಿಂದ ಶಿಕ್ಷಣದಲ್ಲಿನಿರೀಕ್ಷಿಸಿದಷ್ಟು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ,’’ ಎಂದರು. ‘‘ಸಂವಿಧಾನವು ಒಬ್ಬ ವ್ಯಕ್ತಿ ಜವಾಬ್ದಾರಿಯುತವಾಗಿ ವಿಕಾಸವಾಗಲು ವೈಜ್ಞಾನಿಕ, ವೈಚಾರಿಕ ಶಿಕ್ಷಣ ದೊರೆಯಬೇಕೆಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ಸಾಮಾಜಿಕ ವ್ಯವಸ್ಥೆಯು ಜಾತಿ, ಮೌಢ್ಯ, ಕಂದಾಚಾರಗಳಿಂದ ಕೂಡಿದ್ದು, ಇವುಗಳನ್ನು ದೂರ ಮಾಡುವ ಶಿಕ್ಷಣ ಪಡೆಯುವುದು ಅತ್ಯಂತ ಅಗತ್ಯ,’’ ಎಂದು ಅಭಿಪ್ರಾಯಪಟ್ಟರು. ‘‘ಒಪಿಎಸ್ ಜಾರಿ ಬಗ್ಗೆ ಸಂಪುಟ ಸಭೆಯಲ್ಲಿಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಶಿಕ್ಷಕರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಶಿಕ್ಷಕರಿಗೆ ವೇತನ ಬಡ್ತಿ ನೀಡಲು ಪ್ರಯತ್ನಿಸಲಾಗುವುದು,’’ ಎಂದು ಸಿಎಂ ಭರವಸೆ ನೀಡಿದರು. ಶಾಲೆಗಳ ಅಭಿವೃದ್ಧಿಗೆ 10 ಕೋಟಿ ರೂ.

‘ಧಿ‘ಗ್ರಾಮೀಣ ಪ್ರದೇಶಗಳಲ್ಲಿಉತ್ತಮ ಶಿಕ್ಷಣ ಕಲ್ಪಿಸಲು ಸಿಎಸ್ ಆರ್ ಅಡಿ ಶಾಲೆಗಳನ್ನು ಆರಂಭಿಸಲು ನೀತಿ ರೂಪಿಸಿದ್ದೇವೆ. 8 ರಿಂದ 10 ಸಾವಿರ ಕೋಟಿ ರೂ. ಸಿಎಸ್ ಆರ್ ನಿಧಿಯನ್ನು ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲು ತೀರ್ಮಾನಿಸಿದ್ದೇವೆ,’ಧಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ,‘‘ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಸರಕಾರಿ ಶಾಲೆಗಳನ್ನು ಬಲಪಡಿಸುವುದು ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದು ಸರಕಾರದ ಪ್ರಮುಖ ಗುರಿಯಾಗಿದೆ. ಎರಡು ವರ್ಷಗಳಲ್ಲಿ14,499 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಶಿಕ್ಷಕರು ಎದುರಿಸುತ್ತಿದ್ದ ವರ್ಗಾವಣೆ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಶಿಕ್ಷಕ ಸ್ನೇಹಿ ಆಡಳಿತಕ್ಕೆ ಒತ್ತು ನೀಡಲಾಗಿದೆ,’’ ಎಂದರು. ‘‘ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ 46,000 ಸರಕಾರಿ ಶಾಲೆಗಳಲ್ಲಿಏಕಕಾಲಕ್ಕೆ ಪೋಷಕರ ಸಭೆಯನ್ನು ನಡೆಸುವ ಮೂಲಕ ಶಾಲಾ ಅಭಿವೃದ್ಧಿಯಲ್ಲಿಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸಲಾಗಿದೆ. ಈ ಬಾರಿ ಸರಕಾರಿ ಶಾಲೆಗಳಲ್ಲಿದಾಖಲಾತಿಯನ್ನು ಶೇ. 20ರಷ್ಟು ಹೆಚ್ಚಿಸುವ ಗುರಿಯನ್ನು ಶಿಕ್ಷಕರು ಹೊಂದಬೇಕು,’’ ಎಂದು ಕರೆ ನೀಡಿದರು. ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ, ಎಐಪಿಟಿಎಫ್ ರಾಷ್ಟಾ್ರಧ್ಯಕ್ಷ ಬಸವರಾಜ ಗುರಿಕಾರ, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಉಪಸ್ಥಿತರಿದ್ದರು.