ವಾಷಿಂಗ್ಟನ್ : ಅಮೆರಿಕದ ಸರಕಾರಿ ಸಂಸ್ಥೆಗಳು ಕೃತಕ ಬುದ್ಧಿಮತ್ತೆ (ಎಐ) ಕಂಪನಿ ಆಂಥ್ರೊಪಿಕ್ ತಂತ್ರಜ್ಞಾನ ಬಳಧಿಸುಧಿವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟ್ಟಪ್ಪಣೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ, ಓಪನ್ ಎಐ ಜತೆ ಸರಕಾರ ಒಪ್ಪಂದ ಮಾಡಿಕೊಂಡಿದೆ. ‘‘ನಮಗೆ ಆಂಥ್ರೊಪಿಕ್ ನ ತಂತ್ರಜ್ಞಾನ ಅಗತ್ಯವಿಲ್ಲ. ಇನ್ನು ಮುಂದೆ ನಾವು ಅದರೊಂದಿಗೆ ಯಾವ ವ್ಯವಹಾರಧಿವನ್ನೂ ಮಾಡುವುದಿಲ್ಲ,’’ ಎಂದು ಟ್ರಂಪ್ ಘೋಷಿಸಿದ್ದಾರೆ. ಮುಂದಿನ 6 ತಿಂಗಳಲ್ಲಿಎಲ್ಲಸರಕಾರಿ ಕೆಲಸಗಳಲ್ಲಿಆಂಥ್ರೊಪಿಕ್ ತಂತ್ರಜ್ಞಾನದ ಬಳಕೆಯನ್ನು ಹಂತಹಂತವಾಗಿ ತೆಗೆದು ಹಾಕಲಾಗುವುದು ಎಂದೂ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಮೆರಿಕ ಆಡಳಿತ ಮತ್ತು ಮಿಲಿಟರಿಯಲ್ಲಿಆಂಥ್ರೊಪಿಕ್ ಬಳಕೆಯಲ್ಲಿದೆ. ಸರಕಾರದ ಏಜೆನ್ಸಿಗಳ ಗೌಪ್ಯ ಕೆಲಸಗಳಿಗೆ ನೆರವಾಗಲು ಸುಧಾರಿತ ಎಐ ಅನ್ನು ಒದಗಿಸುತ್ತಿದೆ. ಸಾಮೂಹಿಕ ನಿಗಾ ಮತ್ತು ಮನುಷ್ಯರ ಹೆಚ್ಚು ಹಸ್ತಕ್ಷೇಪವಿಲ್ಲದೆ ಗುರುತಿಸಲಾದ ನೆಲೆಗಳ ಮೇಲೆ ವಿಶೇಷ ಯುದ್ಧಾಸ್ತ್ರಗಳ ಮೂಲಕ ದಾಳಿ ನಡೆಸುವುದಕ್ಕೆ ಸಂಬಂಧಿಸಿ ಕ್ಲೌಡ್ ನಂತಹ ಎಐ ಸಾಧನಗಳನ್ನು ಬಳಸುಧಿವುದಕ್ಕೆ ಆಂಥ್ರೊಪಿಕ್ ಕಳವಳ ವ್ಯಕ್ತಪಡಿಸಿತ್ತು. ಈ ನಿಲುವು ಟ್ರಂಪ್ ಗೆ ಒಪ್ಪಿತವಾಗಲಿಲ್ಲ. ಹೀಗಾಗಿ ನಿಷೇಧಿಸಿದ್ದಾರೆ. ‘‘ನಮ್ಮ ತಂತ್ರಜ್ಞಾನ ಬಳಸಬಾರದು ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ. ಆದರೆ ಈ ಕುರಿತು ಶ್ವೇತಭವನ ಅಥವಾ ಪೆಂಟಗನ್ ನಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ,’’ ಎಂದಿರುವ ಆಂಥ್ರೊಪಿಕ್ , ‘‘ಎಷ್ಟೇ ಬೆದರಿಕೆ ಬಂದರೂ ನಮ್ಮ ನೀತಿಗಳಲ್ಲಿಬದಲಾವಣೆ ಇಲ್ಲ. ಕಣ್ಗಾವಲು ಮತ್ತು ಮಿಲಿಟರಿ ವ್ಯವಹಾರಗಳಲ್ಲಿಎಐನ ಅನಿಯಮಿತ ಬಳಕೆಗೆ ಸಂಬಂಧಿಸಿದ ನೈತಿಕ ಮಾನದಂಡಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ,’’ ಎಂದು ಸ್ಪಷ್ಟಪಡಿಸಿದೆ. ಓಪನ್ ಎಐ ಒಪ್ಪಂದ: ಆಂಥ್ರೊಫಿಕ್ ನಿಷೇಧವನ್ನು ಟ್ರಂಪ್ ಘೋಷಿಸುತ್ತಿದ್ದಂತೆಯೇ, ಅಮೆರಿಕ ರಕ್ಷಣಾ ಇಲಾಖೆ ಜತೆಗಿನ ಒಪ್ಪಂದವನ್ನು ಓಪನ್ ಎಐ ಬಹಿರಂಗಪಡಿಸಿತು. ‘‘ ಶುಕ್ರವಾರ ನಾವು ಅಮೆರಿಕ ರಕ್ಷಣಾ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆಯ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ಎಐ ಮಾದರಿಗಳು ಎರಡೂ ಕಡೆಯವರು ಒಪ್ಪಿದ ಮಿತಿಯೊಳಗೆ ಕಾರ್ಯಧಿನಿರ್ವಧಿಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ನಾವು ತಾಂತ್ರಿಕ ಚೌಕಟ್ಟುಗಳನ್ನು ಪರಿಚಯಿಸುತ್ತೇವೆ,’’ ಎಂದು ಓಪನ್ ಎಐ ಸಿಇಒ ಆಲ್ಟ್ ಮನ್ ಹೇಳಿದರು.

