(ವಿಕ ಎಐ ಲೋಕ)

Contributed byKeerthi Kolgar|Vijaya Karnataka

Modern thoughts move faster than ever before. Traditional writing methods are too slow for today's pace. AI voice-to-text converters now capture ideas instantly. These tools translate spoken words into text accurately, even with diverse languages and accents. This technology allows for the rapid documentation of our thoughts and creations.

vik ai lok voice to text ai power enables writing kannada epic

ವ್ಯಾಸ ಮಹರ್ಷಿಗಳಿಗೆ ಮಹಾಭಾರತದ ಕಲ್ಪನೆಯು ಮನದೊಳಗೆ ನುಸುಳಿದಾಗ ನಡುಕ ಹುಟ್ಟಿದ್ದು ತನ್ನ ಕಲ್ಪನೆಯ ಝರಿಯನ್ನು ಅಕ್ಷರದ ರೂಪದಲ್ಲಿಸೆರೆ ಹಿಡಿಯುವುದು ಹೇಗೆ ಎಂದು. ಆಗ ಅವರ ಸಮಸ್ಯೆಯನ್ನು ನಿವಾರಿಸಿದ್ದು ವಿಘ್ನನಾಶಕ ವಿN್ನೕಶ್ವರ! ಅವನು ಮನಸ್ಸಿನ ವೇಗದಲ್ಲಿಬರೆದ ಎಂದು ಹೇಳಲಾಗುತ್ತದೆ. ಇಂದು ನಮ್ಮ ವಿಚಾರಗಳು ಓಡುವ ವೇಗ ಮೊದಲಿಗಿಂತ ಹೆಚ್ಚಾಗಿದೆ. ಕಾಗದದ ಮೇಲೆ ಗೀಚಿ, ಟೈಪ್ ಮಾಡಿ, ಮುದ್ರಿಸುವ ಸಂಯಮಕ್ಕೀಗ ಸಮಯವೇ ಇಲ್ಲ. ವಿಚಾರ ಮಾಡಿದ್ದು ಬೆಳಕಿನ ಪರದೆಯ ಮೇಲೆ ಬರಬೇಕು ಎನ್ನುವ ಬಯಕೆ. ಅದಕ್ಕೆ ಸಾಥ್ ಕೊಡುತ್ತಿದೆ ಎಐ ಆಧಾರಿತವಾಗಿ ವಿನ್ಯಾಸಗೊಂಡ ವಾಯ್ಸ… ಟು ಟೆಕ್ಸ್ಟ್ ಕನ್ವರ್ಟರ್ . ನಾವು ಬಳಸುವ ಯಾವುದೇ ಕೀಲಿ ಮಣೆಯಿರಲಿ, ಅದರಲ್ಲೊಂದು ಧ್ವನಿವರ್ಧಕದ ಚಿನ್ಹೆಯಿರುತ್ತದೆ. ಅದನ್ನು ಒತ್ತಿ ಮಾತ ನಾಡಿದರೆ ನಾವು ಹೇಳಿದ್ದೆಲ್ಲಾ ಅಕ್ಷರದ ರೂಪದಲ್ಲಿಮುದ್ರಿತವಾಗುತ್ತದೆ. ಎಐ ಸಾಮರ್ಥ್ಯವನ್ನು ಗಮನಿಸಿ! ನಮ್ಮಲ್ಲಿಸಾವಿರಾರು ಭಾಷೆಗಳಿವೆ, ಪ್ರತಿಯೊಬ್ಬರ ಉಚ್ಚಾರವೂ ವಿಭಿನ್ನ. ಆದರೂ ಅದು ಸರಿಯಾಗಿ ಗ್ರಹಿಸಬಲ್ಲದು. ಈ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ನಾವು ನಮ್ಮ ಆತ್ಮದ ಮಹಾಕಾವ್ಯವನ್ನೇ ಬರೆದಿಡಬಹುದು! -ವಿಕ್ರಂ ಜೋಶಿ ಎಐ ವಿಧಿಶ್ಲೇಧಿಷಧಿಕಧಿರು