ಬೀದರ್ : ಹೈಕಶಿ ಸಂಸ್ಥೆಯ ನಗರದ ಬಿವಿ ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಬಿವಿಬಿ ಪದವಿ ಮಹಾವಿದ್ಯಾಲಯದಲ್ಲಿಭಾನುವಾರ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಡಳಿತ ಮಂಡಳಿ ಸದಸ್ಯರು ಹಾಗೂ ಬಿವಿಬಿ ಮಹಾವಿದ್ಯಾಲಯದ ಆವರಣದ ಶಾಲಾ ಕಾಲೇಜುಗಳ ಸಂಚಾಲಕ ಡಾ. ರಜನೀಶ್ ಎಸ್ . ವಾಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವೇದಿಕೆಯಲ್ಲಿಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೀಪಾ ರಾಗ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಕನಕಟ್ಟೆ, ಸೈನಿಕ ಶಾಲೆಯ ಹಾಗೂ ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಲತಾ ಸ್ವಾಮಿ, ಶ್ರೀ ಶರಣ ಬಸವೇಶ್ವರ ಅಭ್ಯಾಸಾರ್ಥ ಪ್ರೌಢ ಶಾಲೆಯ ಮುಖ್ಯ ಗುರು ಶೀಲಾ ಉಪಸ್ಥಿತರಿದ್ದರು. ಡಾ. ಶಿವಲೀಲಾ ವೀರಯ್ಯಾ ನಿರೂಪಿಸಿದರು. ಹೈಕಶಿ ಸಂಸ್ಥೆಯ ಅಂಗ ಸಂಸ್ಥೆಯ ಬೋಧಕ, ಬೋಧಿಕೇತರ ಸಿಬ್ಬಂದಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಎನ್ ಸಿಸಿ, ಎನ್ ಎಸ್ ಎಸ್ ವಿದ್ಯಾರ್ಥಿಗಳು ಹಾಜರಿದ್ದರು.ಭಾಗ್ಯಲಕ್ಷಿತ್ರ್ಮ ಬಾಂಡ್ ; ಪರಿಪಕ್ವ ಮೊತ್ತ ಪಾವತಿಯ ಸೌಲಭ್ಯಕ್ಕೆ ಅವಕಾಶ
ಬೀದರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಭಾಗ್ಯಲಕ್ಷ್ಮೇ ಯೋಜನೆಯಡಿ ಪರಿಪಕ್ವ ಮೊತ್ತದ ಪಾವತಿಯ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಪಡೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಭಾಗ್ಯಲಕ್ಷ್ಮೇ ಯೋಜನೆಯಡಿ 2006-07, 2007-08 ಮತ್ತು 2008-09ರ ಅವಧಿಯಲ್ಲಿಜನಿಸಿ ನೋಂದಣಿಯಾಗಿರುವ ಹೆಣ್ಣು ಮಕ್ಕಳ ಹೆಸರಿನಲ್ಲಿ10,000 ರೂ. ಠೇವಣಿ ಮೊತ್ತವನ್ನು ಪಾಲುದಾರ ಹಣಕಾಸು ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದಲ್ಲಿಹೂಡಲಾಗಿದ್ದು, ಈ ಯೋಜನೆಯ ಮಾರ್ಗಸೂಚಿಯನ್ವಯ ಈ ದಿನಾಂಕದ ನಂತರ ಜನಿಸಿ, ಯೋಜನೆಯಡಿ ನೋಂದಣಿಯಾಗಿ, 18 ವರ್ಷ ಪೂರ್ಣಗೊಂಡಿರುವ ಬಿಪಿಎಲ್ ಕುಟುಂಬದ ಮೊದಲ 2ಹೆಣ್ಣು ಮಕ್ಕಳಿಗೆ ಆರ್ಥಿಕ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಈಗಾಗಲೇ ಜಿಲ್ಲೆಯ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿಈ ಯೋಜನೆಯ ಕಾರ್ಯ ಚಾಲ್ತಿಯಲ್ಲಿದೆ. ಭಾಗ್ಯಲಕ್ಷ್ಮೀ ಬಾಂಡ್ ಸೌಲಭ್ಯವನ್ನು ಪಡೆದಿರುವ ಫಲಾನುಭವಿಗಳಿಗೆ ಈ ಯೋಜನೆಯ ಪರಿಪಕ್ವ ಮೊತ್ತದ ಸೌಲಭ್ಯವನ್ನು ಪಡೆಯಲು ಆಯಾ ತಾಲೂಕಿನ ಅರ್ಹ ಫಲಾನುಭವಿಗಳು ಕೂಡಲೇ ತಮ್ಮ ಅಂಗನವಾಡಿ ಕೇಂದ್ರಕ್ಕೆ, ವಲಯದ ಮೇಲ್ವಿಚಾರಕಿಯರಿಗೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಯೋಜನೆಯಡಿ ಪರಿಪಕ್ವ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಭಾಗ್ಯಲಕ್ಷ್ಮೇ ಬಾಂಡ್ , ಫಲಾನುಭವಿಯ ಜನನ ಪ್ರಮಾಣ ಪತ್ರ, ಪಡಿತರ ಚೀಟಿ, ಶಾಲಾ ದಾಖಲಾತಿ, ಬ್ಯಾಂಕ್ ಪಾಸ್ ಬುಕ್ , ಇತರೆ ದಾಖಲಾತಿಗಳು ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಅಲಿಯಂಬರ್ : ರಾಜ್ಯೋತ್ಸವ ಆಚರಣೆ
ಬೀದರ್ : ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿಕರ್ನಾಟಕ ರಾಜ್ಯೋತ್ಸವವನ್ನು ಭಾನುವಾರ ಆಚರಿಸಲಾಯಿತು. ಸಾಮಾಜಿಕ ಹೋರಾಟಗಾರ ಸಂಗಮೇಶ ಬಾವಿದೊಡ್ಡಿ ಮಾತನಾಡಿ, ಕನ್ನಡ ನಾಡು-ನುಡಿಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ನಾಡಿನ ಅಭಿವೃದ್ಧಿಗೆ ಕಂಕಣ ಬದ್ಧರಾಗಬೇಕು ಎಂದು ಹೇಳಿದರು. ಪ್ರಮುಖರಾದ ವೆಂಕಟ ಓಡೆಯರ್ , ಸೂರ್ಯಕಾಂತ ಮೋರೆ, ಅನಿಲಕುಮಾರ ಒಡೆಯರ್ , ರಾಮಣ್ಣ ಅಲ್ಲೂರೆ, ಗಣೇಶ ಬಾವಿದೊಡ್ಡಿ, ಚಿನ್ನಮ್ಮ ನಿಡೋದೆ, ಸಂಗೀತಾ ದೊಡ್ಡಮನಿ, ಸಂಗಮ್ಮ ಮೇತ್ರೆ, ಚಂದ್ರಮ್ಮ ಅಲ್ಲೂರೆ, ಶಾಂತಮ್ಮ ಸಾಧುರೆ, ಸುರೇಖಾ ತಡಪಳ್ಳಿ, ಸಪ್ನಾ ಹೆಡಗಾಪುರೆ, ಭಾಗಮ್ಮ ಕ್ಯಾದೆ, ಜಯಮ್ಮ ಬಾವಿದೊಡ್ಡಿ, ಮೀನಮ್ಮ, ಪೂಜಾ, ನಿರ್ಮಲಾ, ಲಲಿತಾಬಾಯಿ ಮೋರೆ ಇದ್ದರು.
ಗಂಗೋತ್ರಿ ಶಾಲೆಯಲ್ಲಿರಾಜ್ಯೋತ್ಸವ ಸಂಭ್ರಮ
ಬೀದರ್ : ಇಲ್ಲಿಯ ಗಂಗೋತ್ರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ71ನೇ ಕರ್ನಾಟಕ ರಾಜ್ಯೋತ್ಸವವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಕರ್ನಾಟಕದ ಮಹಾಪುರುಷರ ವೇಷ-ಭೂಷಣ ಧರಿಸಿದ್ದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ಮೆಚ್ಚುಗೆ ಗಳಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಸಿದ್ಧರಾಮಯ್ಯ ಹಿರೇಮಠ ಹಾಗೂ ಮುಖ್ಯಶಿಕ್ಷಕ ಸನ್ಮುಖಯ್ಯ ಹಿರೇಮಠ ಅವರು, ಕರ್ನಾಟಕದ ಇತಿಹಾಸ, ಸಾಹಿತ್ಯ, ಕಲೆ, ಸಾಂಸ್ಕೃತಿಕ ಸಿರಿವಂತಿಕೆ ಇತ್ಯಾದಿಗಳ ಕುರಿತು ಮಾತನಾಡಿದರು. ಪ್ರಮುಖರಾದ ಕಿಶೋರ್ ಬೀದರ್ ಕರ್ , ಉಷಾ ಮಾಳಗೆ, ಮಂಜುಳಾ, ಶಶಿಕಲಾ, ಅರ್ಪಣಾ ಹಿರೇಮಠ, ಶ್ರೀದೇವಿ ಬಿರಾದಾರ, ಸುನೀತಾ ಬುಳ್ಳಾ ಮತ್ತಿತರರು ಇದ್ದರು. ಕವಿತಾ ಎಸ್ . ಪರಶೆಟ್ಟಿ ಸ್ವಾಗತಿಸಿದರು. ನಾಗಮಣಿ ಗುಮ್ಮಾ ನಿರೂಪಿಸಿದರು. ಶಾಂತಾ ಹೂಗಾರ ವಂದಿಸಿದರು.
ವಿವಿಧ ಅಭಿವೃದ್ಧಿ ನಿಗಮಗಳಿಂದ ಅರ್ಜಿ ಆಹ್ವಾನ
ಬೀದರ್ : 2026-27ನೇ ಸಾಲಿನ ಡಾ. ಬಿ.ಆರ್ .ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ವಿವಿಧ ನಿಗಮಗಳ ವತಿಯಿಂದ ಅರ್ಹ ಪರಿಶಿಷ್ಟ ಜಾತಿಯ ಜನರಿಂದ ಸ್ವಯಂ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾವ್ಯವಸ್ಥಾಪಕರು ತಿಳಿಸಿದ್ದಾರೆ. ಡಾ.ಬಿ.ಆರ್ .ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು 2026-27ನೇ ಸಾಲಿಗೆ ಆನ್ ಲೈನ್ ಮೂಲಕ sಛಿvasಜ್ಞಿdh್ಠ.ka್ಟ್ಞaಠಿaka.ಜಟv.ಜ್ಞಿ ವೆಬ್ ಸೈಟ್ ನಲ್ಲಿಅರ್ಜಿ ಆಹ್ವಾನಿಸಿದೆ. ವಿವಿಧ ಯೋಜನೆಗಳಡಿ ಆನ್ ಲೈನ್ s್ಠvಜಿdha.ka್ಟ್ಞaಠಿaka.ಜಟv.ನಲ್ಲಿನ.30ರೊಳಗೆ ಅರ್ಜಿ ಸಲ್ಲಿಸಬೇಕು. ಕಲ್ಯಾಣ ಮಿತ್ರ ಸಹಾಯವಾಣಿ ಸಂಖ್ಯೆ 9482300400. ಎಲ್ಲನಿಗಮಗಳ ಅರ್ಜಿಗಳನ್ನು ಆನ್ ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಯಾವುದೇ ಆಫ್ ಲೈನ್ ಅರ್ಜಿಗಳಿಗೆ ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾವ್ಯವಸ್ಥಾಪಕರ ಕಚೇರಿ, ಸಿದ್ದಶ್ರೀ ಕಾಂಪ್ಲೆಕ್ಸ್ , ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ, ನೌಬಾದ್ , ಬೀದರ್ -585402, ದೂರವಾಣಿ ಸಂಖ್ಯೆ 08482-232191ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.