ಮಕ್ಕಳಿಗೆ ವೈಚಾರಿಕ ಪ್ರಜ್ಞೆ ಮೂಡಿಸಿವಿಕ ಸುದ್ದಿಲೋಕ ಹರಪನಹಳ್ಳಿ
‘‘ಮಾಜಿ ಉಪರಾಷ್ಟ್ರಪತಿ, ಶಿಕ್ಷಣ ತಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಿಗೆ ಹಾಕಿಕೊಟ್ಟ ಮಾರ್ಗ ಅನುಸರಿಸಿ ಶಿಕ್ಷಕರು ಮಕ್ಕಳಿಗೆ ವೈಚಾರಿಕ ಹಾಗೂ ವೈಜ್ಞಾನಿಕ ವಿಚಾರ ತಿಳಿಸಬೇಕು,’’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ .ಲೇಪಾಕ್ಷಪ್ಪ ಹೇಳಿದರು.
ತಾಲೂಕಿನ ರಾಮಘಟ್ಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ನಡೆದ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭದ ಸನ್ಮಾನ ಸಮಾರಂಭದಲ್ಲಿಮಾತನಾಡಿದರು.
‘‘ಶಿಕ್ಷಕರಿಗೆ ಪ್ರಾಮಾಣಿಕತೆ, ನಿಷ್ಠೆ, ವಿಶ್ವಾಸ, ಸಮಯ, ಶಿಸ್ತುಪಾಲನೆ, ಸೌಹಾರ್ದತೆ ಮುಖ್ಯವಾಗಿ ಬೇಕು. ವಿಶೇಷ ಬೋಧನ ಕೌಶಲ್ಯ ಹೊಂದಿದ್ದ ನಿವೃತ್ತ ಶಿಕ್ಷಕ ಹಾಲೇಶ್ ಅವರು ತಮ್ಮ ಸೇವೆಯ ಮೂಲಕ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿದ್ದರು. ಅವರ ವಿಶ್ರಾಂತ ಜೀವನ ಉತ್ತಮವಾಗಿರಲಿ,’’ ಎಂದರು.
‘‘ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಹಾಲೇಶ್ , ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕ ವೃತ್ತಿಗಿದೆ. 27 ವರ್ಷಗಳ ಸುದೀರ್ಘ ಸೇವೆ ಆತ್ಮ ತೃಪ್ತಿ ತಂದಿದೆ. ಸರಕಾರಿ ಶಿಕ್ಷಕ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡದಿದ್ದೇನೆ. ಆದರೆ, ಉಳಿದ ದಿನಗಳನ್ನು ಬೋಧನೆಯಲ್ಲಿಯೇ ಕಳೆಯುವೆ. ಇಲ್ಲಿಮಕ್ಕಳ ಬೌದ್ದಿಕ ವಿಕಾಸ ಬಹಳ ಮುಖ್ಯವಾಗಿದೆ’’ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಭಜಂತ್ರಿ, ಮುಖ್ಯ ಶಿಕ್ಷಕ ಟಿ.ನಾಗರಾಜ್ , ವಲಯ ಸಂಪನ್ಮೂಲ ವ್ಯಕ್ತಿ ಕೋವಿ ಮಂಜುನಾಥ್ , ನಿಜಲಿಂಗಪ್ಪ, ಶಿಕ್ಷಕಿ ರೇಣುಕಾಬಾಯಿ, ವಸಂತ ಕುಮಾರ್ , ಸಿದ್ದಪ್ಪ, ವಿಜಯ ಲಕ್ಷ್ಮಿ ಇತರರು ಇದ್ದರು.
01,ಹೆಚ್ .ಆರ್ .ಪಿ.05: ಹರಪನಹಳ್ಳಿ ತಾಲೂಕಿನ ರಾಮಘಟ್ಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಶನಿವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿಕ್ಷೇತ್ರ ಶಿಕ್ಷಣಾಧಿಕಾರಿ ಎಚ್ .ಲೇಪಾಕ್ಷಪ್ಪ ಮಾತನಾಡಿದರು.