ನಾನಾ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನಿರ್ದೇಶಕರು, ಸದಸ್ಯರ ನೇಮಕಜಿಲ್ಲೆಯ 11 ಕೈ ಕಾರ್ಯಕರ್ತರಿಗೆ ಸ್ಥಾನ,ಮಾನ
ವಿಕ ಸುದ್ದಿಲೋಕ ಬೀದರ್
ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ ರಾಜ್ಯ ಸರಕಾರ (ಕಾಂಗ್ರೆಸ್ ಪಕ್ಷವು) ತನ್ನ ಕಾರ್ಯಕರ್ತರಿಗೆ ರಾಜ್ಯದ ನಾನಾ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನಿರ್ದೇಶಕರು, ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಜಿಲ್ಲೆಯ ಒಟ್ಟು 11 ಜನ ಕಾಂಗ್ರೆಸ್ ಕಾರ್ಯಕರ್ತರಿಗೂ ವಿವಿಧ ನಿಗಮ ಮಂಡಳಿ ಸದಸ್ಯರು ಮತ್ತು ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಮೈಸೂರು ಲ್ಯಾಂಫ್ಸ್ ವರ್ಕ್ಸ್ ಲಿಮಿಟೆಡ್ ಗೆ ಅಮರ್ಜಿತ್ ಜಾಧವ್ ಬೀದರ್ , ಬೆಂಗಳೂರಿನ ಕರ್ನಾಟಕ ವಿದ್ಯುತ್ ಕಾರ್ಖಾನೆ(ಕವಿಕಾ)ಗೆ ಫಹೀಮ್ ಪಟೇಲ್ ಹುಮನಾಬಾದ್ , ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಕೇಶಪ್ಪ ಬಿರಾದಾರ್ ತಡೋಳಾ ಹಾಗೂ ಬಸವರಾಜ ಬಂಡೆಪ್ಪ ಬುಯ್ಯ, ತಾಂಡಾ/ ಬಂಜಾರಾ ಅಭಿವೃದ್ಧಿ ನಿಗಮಕ್ಕೆ ನೀಲಕಂಠ ರಾಠೋಡ್ ಬಸವಕಲ್ಯಾಣ, ಕರ್ನಾಟಕ ಸೋಫ್ಸ್ ಅಂಡ್ ಡಿಟರ್ಜಂಟ್ಸ್ ಲಿಮಿಟೆಡ್ ಗೆ ಅನಿಲಕುಮಾರ ಬೆಲ್ದಾರ್ ಬೀದರ್ , ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಶಿವಕುಮಾರ ಬೆಳಕೇರಿ ಹುಮನಾಬಾದ್ . ನೀರಾವರಿ ಯೋಜನಾ ವಲಯ ಕಾಡಾಗೆ ಬಾಬು ಈಸಪ್ಪ ನವದಗೇರಿ ಬೀದರ್ , ಪವರ್ ಕಂಪೆನಿ ಆಫ್ ಕರ್ನಾಟಕ ಲಿಮಿಟೆಡ್ ಗೆ ವಿನೋದಕುಮಾರ ಅಪ್ಪೆ ಬೀದರ್ , ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಚಂದ್ರಕಾಂತ ಹಿಪ್ಪಳಗಾಂವ್ ನವದಗೇರಿ ಬೀದರ್ , ಹಟ್ಟಿ ಗೋಲ್ಡ್ ಮೈನ್ಸ್ ಕಂಪೆನಿ ಲಿಮಿಟೆಡ್ ಗೆ ಸುರೇಶ್ ಘಾಂಗ್ರೆ ಹುಮನಾಬಾದ್ ಅವರುಗಳನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಜಿಲ್ಲೆಯಿಂದ ಆಯ್ಕೆಯಾದ 11 ಜನರಲ್ಲಿದಲಿತ ಸಮುದಾಯಕ್ಕೆ ಹೆಚ್ಚಿನ ಪಾಲು ನೀಡಲಾಗಿದೆ. ದಲಿತ ಸಮುದಾಯದ ಒಟ್ಟು 6 ಜನ ಕಾರ್ಯಕರ್ತರು, ಲಿಂಗಾಯತ ಸಮುದಾಯದ 2, ಮರಾಠಾ ಸಮುದಾಯದ 1, ಮುಸ್ಲಿಂ ಸಮುದಾಯದ 1 ಹಾಗೂ ಕುರುಬ ಸಮುದಾಯದ 1 ರನ್ನು ವಿವಿಧ ನಿಗಮ, ಮಂಡಳಿ, ಪ್ರಾಧಿಕಾರದ ನಿರ್ದೇಶಕರು, ಸದಸ್ಯರನ್ನಾಗಿ ನೇಮಕ ಮಾಡುವ ಮೂಲಕ, ಪ್ರಮುಖ ಸಮುದಾಯಗಳಿಗೆ ಸಮಾಧಾನಿಸುವ ಕೆಲಸ ನಡೆದಿದೆ.
ಆದರೂ, ಹಲವು ಸಮುದಾಯಗಳಿಗೆ ಪಟ್ಟಿಯಲ್ಲಿನ್ಯಾಯ ಸಿಗದಿರುವುದರಿಂದ ಸಾಮಾಜಿಕ ಜಾಲ ತಾಣಗಳಲ್ಲಿಆಕ್ರೋಶ ವ್ಯಕ್ತವಾಗಿದೆ. ಜಾಲ ತಾಣಗಳಲ್ಲಿಗಂಭೀರವಾದ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಶೀಘ್ರವೇ ಜಿಪಂ, ತಾಪಂ ಚುನಾವಣೆಗಳು ನಡೆಯಲಿದ್ದು, ಚುನಾವಣೆಗಳ ಮೇಲೆ ಈ ಚರ್ಚೆಗಳ ಯಾವ ಪರಿಣಾಮ ಬೀರುತ್ತದೋ ನೋಡಬೇಕಿದೆ.