ಶಕ್ತಿಗಣಪತಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ

Contributed by: nagarajmadguni@gmail.com|Vijaya Karnataka•
13th annual kartikotsava at shakti ganapati temple yellapur
ಯಲ್ಲಾಪುರ : ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದ 13 ನೇ ವರ್ಷದ ಕಾರ್ತಿಕೋತ್ಸವ ನ.13ರಿಂದ 27ರವರೆಗೆ 15 ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಅನಂತ ಗಾಂವ್ಕಾರ ಕಂಚಿಪಾಲ್ ಹೇಳಿದರು.

ಅವರು ಬುಧವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಪತ್ರಿಕಾಗೋಷ್ಠಿಯಲ್ಲಿಈ ಕುರಿತು ವಿವರಣೆ ನೀಡಿದರು.
‘‘ಕಾರ್ತಿಕೋತ್ಸವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ ಉದ್ಘಾಟಿಸಲಿದ್ದಾರೆ. ಉತ್ಸವದಲ್ಲಿಮಕ್ಕಳ ಮನರಂಜನೆಯ ಕಾರ್ಯಕ್ರಮ, ಕುಮಟಾ ತಂಡದಿಂದ ಪಂಚವಾದ್ಯ, ಸಂಗೀತ ಕಾರ್ಯಕ್ರಮ, ಗಾನವೈಭವ,ಭಜನೆ, ತಾಳಮದ್ದಳೆ, ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ನ.24 ರಿಂದ 27ರವರೆಗೆ ಜ್ಞಾನಯಜ್ಞ ಹಿರಣ್ಯ ವೆಂಕಟೇಶ ಭಟ್ಟ ಅವರಿಂದ ಪ್ರವಚನ ನಡೆಯಲಿದೆ’’ ಎಂದರು.

ಪ್ರಮುಖರಾದ ಸಿ.ಎಸ್ ಹೆಗಡೆ, ಸುಬ್ರಾಯ ಭಟ್ಟ ಹಂಡ್ರಮನೆ, ಸುಬ್ರಹ್ಮಣ್ಯ ಗಾಂವ್ಕಾರ ಉಪಸ್ಥಿತರಿದ್ದರು.

11ವೈಎಲಪಿ2

ಯಲ್ಲಾಪುರದ ಶಕ್ತಿ ಗಣಪತಿ ದೇವಸ್ಥಾನದ 13ನೇ ವರ್ಷದ ಕಾರ್ತಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಗಣ್ಯರು ಬಿಡುಗಡೆಗೊಳಿಸಿದರು.