ತಾಲೂಕಿನಲ್ಲಿ12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪಿ ಇಸ್ಮಾಯಿಲ್ ಸಾಬ್ ಹುಲಗೂರಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಗುರುವಾರ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಮುಂಡಗೋಡ ಬಂದ್ ಪಟ್ಟಣದಲ್ಲಿಸಂಪೂರ್ಣ ಯಶಸ್ವಿಯಾಯಿತು.
ಬೆಳಿಗ್ಗೆಯಿಂದಲೇ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ಮುಚ್ಚಿ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದರು. ಇದರಿಂದ ಪಟ್ಟಣವು ಬಹತೇಕ ಸ್ತಬ್ಧವಾಗಿತ್ತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿಹಿಂದೂಪರ ಸಂಘಟನೆಯ ಕಾರ ್ಯಕರ್ತರು, ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು, ಕಾರ ್ಯಕರ್ತರು, ನಿವೃತ್ತ ಯೋಧರು, ವಿವಿಧ ಸಂಘಟನೆಯ ಸದಸ್ಯರು, ನ್ಯಾಯವಾದಿಗಳು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿಸಾರ್ವಜನಿಕರು ಪ್ರತಿಭಟನೆಯಲ್ಲಿಭಾಗಿಯಾದರು.
ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿದೌರ್ಜನ್ಯ ಎಸಗಿದ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಲೆಬೇಕು ಎಂಬ ಆಕ್ರೋಶದ ಕೂಗು ಕೇಳಿಬಂದಿತು. ಶಿವಾಜಿ ಸರ್ಕಲ್ ನಲ್ಲಿಕೆಲ ಕಾಲ ರಸ್ತೆ ಸಂಚಾರ ತೆಡೆ ನಡೆಸಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿಪ್ರತಿಭಟನಾ ಮೆರವಣಿಗೆ ನಡೆಸಿ ಸಮಾಜದಲ್ಲಿಇಂತಹ ಘಟನೆಗಳು ಮತ್ತೆ ನಡೆಯದಂತೆ ಜಾಗೃತರಾಗೋಣ ಎಂದು ಸಂದೇಶ ನೀಡಲಾಯಿತು.
ಮನವಿ ಸಲ್ಲಿಕೆ:ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿಗೆ ನ್ಯಾಯ ಒದಗಿಸುವುದು ಹಾಗೂ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಶಿರಸಿ ಸಹಾಯಕ ಆಯುಕ್ತ ಚಂದ್ರಶೇಖರ ಆರ್ .ಜಿ, ಎಸ್ .ಪಿ. ದೀಪನ್ ಎಂ.ಎನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬೀಗಿ ಬಂದೋಬಸ್ ್ತ: ಬಂದ್ ಹಾಗೂ ಪ್ರತಿಭಟನೆ ಹಿನ್ನಲೆಯಲ್ಲಿಎಸ್ ಪಿ ದೀಪನ್ ಎಂ.ಎನ್ ನೇತೃತ್ವದಲ್ಲಿಬಿಗಿ ಬಂದೋಬಸ್ ್ತ ಏರ್ಪಡಿಸಲಾಗಿತ್ತು. ಪಟ್ಟಣದ ಪ್ರಮುಖ ಸ್ಥಳಗಳಲ್ಲಿಎಲ್ಲೆಂದರಲ್ಲಿಪೊಲೀಸ್ ಭದ್ರತೆ ಒದಗಿಸಿರುವುದು ಕಂಡುಬಂದಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಡಿಎಸ್ ಪಿ ಗೀತಾ ಪಾಟೀಲ, ಸಿಪಿಐ ರಮೇಶ ಹಾನಾಪುರ ಭದ್ರತಾ ವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ ಕೈಗೊಂಡರು.
ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ, ಶಾಸಕ ಶಿವರಾಮ ಹೆಬ್ಬಾರ್ , ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಾಜಿ ಶಾಸಕ ವಿ.ಎಸ್ .ಪಾಟೀಲ, ಬಿಜೆಪಿ ಮಂಡಲಾಧ್ಯಕ್ಷ ಮಂಜುನಾಥ ಪಾಟೀಲ, ಉದ್ಯಮಿ ಬಾಲು ನಾಯ್ಕ, ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಸಹ ಕಾರ್ಯದರ್ಶಿ ವಿನಾಯಕ ತಲಗೇರಿ, ಹಿಂದೂ ಸಂಘಟನೆಯ ಪ್ರಮುಖರಾದ ಪ್ರಮುಖರಾದ ಅಮೀತ್ ಶೇಟ್ , ಹರೀಶ ಕರ್ಕಿ, ಶ್ರೀಕಾಂತ ಜಿ, ಶಂಕರ ಲಮಾಣಿ, ಪ್ರಕಾಶ ಬಡಿಗೇರ, ತಂಗಮ್ ಚಿನ್ನನ್ , ಮಂಜುನಾಥ ಎಚ್ .ಪಿ, ವಿಶ್ವನಾಥ ನಾಯರ, ಸುರೇಶ ಕಲ್ಲೊಳ್ಳಿ, ಮಂಜುನಾಥ ಶೇಟ್ ಸೇರಿದಂತೆ ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು.
12ಎಮ್ ಎನ್ ಡಿ1
ಮುಂಡಗೋಡ ದೌರ್ಜನ್ಯ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರತಿಭಟನೆ ನಡೆಸಲಾಯಿತು.