ಸೈಬರ್ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ3 ಪ್ರಕರಣ ದಾಖಲಾಗಿದ್ದು, ಒಟ್ಟು 4,91,782 ವಂಚನೆ ಮಾಡಲಾಗಿದೆ.ಪ್ರಕರಣ 1: ಪಿರ್ಯಾದಿದಾರರು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿಉಳಿತಾಯ ಖಾತೆ ಹೊಂದಿದ್ದರು. ನ.10ರಂದು ಪಿರ್ಯಾದಿದಾರರ ಖಾತೆಯಲ್ಲಿ4 ವರ್ಗಾವಣೆಗಳಲ್ಲಿಒಟ್ಟು 2,61,282 ರೂ. ಕಡಿತವಾಗಿರುತ್ತದೆ. ಪಿರ್ಯಾದಿದಾರರು ಮೊಬೈಲ್ ನಲ್ಲಿಎಪಿಕೆ ಫೈಲ್ ಡೌನ್ ಲೋಡ್ ಮಾಡಿರುವುದು ವಂಚಕರಿಗೆ ಅನುಕೂಲವಾಗಿದೆ.
ಪ್ರಕರಣ 2: ಪಿರ್ಯಾದಿದಾರರು ನ.7ರಂದು ತನ್ನ ಮೊಬೈಲ್ ಫೋನ್ ನಲ್ಲಿವಿಗರ್ ಮಾಜೊಂಗ್ ಹೆಸರಿನ ಗೇಮಿಂಗ್ ಆ್ಯಪ್ ನಲ್ಲಿಗೇಮ್ ಆಡುತ್ತಿರುವಾಗ ಸದ್ರಿ ಸೈಟ್ ನಲ್ಲಿಬ್ಯಾಂಕೊಂದರ ಲೋಗೋ ಇರುವ ಲೈಫ್ ಸರ್ಟಿಫಿಕೆಟ್ ಜಾಹೀರಾತು ಬಂದಿದೆ. ಇದನ್ನು ಕ್ಲಿಕ್ ಮಾಡಿ ಅದರಲ್ಲಿಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿದಾಗ ಎರರ್ ತೋರಿಸಿದೆ. ಈ ಸಂದರ್ಭ ಮೊಬೈಲ್ ಕರೆಯೊಂದು ಬಂದಿದ್ದು, ಆತ ಕಳುಹಿಸುವ ಎಪಿಕೆ ಫೈಲ್ ಡೌನ್ ಲೋಡ್ ಮಾಡಿ ವಿವರ ಭರ್ತಿ ಮಾಡಿ ವಾಟ್ಸ್ ಆ್ಯಪ್ ಕಳುಹಿಸುವಂತೆ ಹೇಳಿದ್ದಾನೆ. ಅದರಂತೆ ಪಿರ್ಯಾದಿದಾರರು ಎಲ್ಲವಿವರವನ್ನು ಭರ್ತಿ ಮಾಡಿ ಕಳುಹಿಸಿದ ಬಳಿಕ ಅವರ ಖಾತೆಯಿಂದ 1.20 ಲಕ್ಷ ರೂ. ಹಣ ವರ್ಗಾವಣೆಯಾಗಿದೆ.
ಪ್ರಕರಣ 3: ಪಿರ್ಯಾದಿದಾರರು ನ.9ರಂದು ಮೊಬೈಲ್ ನೋಡುತ್ತಿರುವಾಗ ಲೋನ್ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ ತನ್ನ ಹೆಸರು, ವಿಳಾಸ, ಪಾನ್ ಕಾರ್ಡ್ ನಮೂದಿಸಿರುತ್ತಾರೆ. ನಂತರ ಸಂಜೆ 4.30ರ ವೇಳೆಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಫೈನಾನ್ಸ್ ಸಂಸ್ಥೆಯ ಹೆಸರು ಹೇಳಿದ್ದಾನೆ. 5 ಲಕ್ಷ ರೂ. ಲೋನ್ ಮಂಜೂರು ಮಾಡಿದ್ದು, ಅದರ ಇನ್ಶೂರೆನ್ಸ್ ಮೊತ್ತ 5999 ರೂ. ಕಟ್ಟಬೇಕೆಂದು ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರು ಅದಕ್ಕೆ ಒಪ್ಪಿ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿರುತ್ತಾರೆ. ನಂತರ ಪುನಃ ಪೋನ್ ಕರೆ ಮಾಡಿ ಲೋನ್ ಟ್ಯಾಕ್ಸ್ ಸೇರಿದಂತೆ ಹಂತ ಹಂತವಾಗಿ ಒಟ್ಟು 1,10,500 ರೂ. ಹಣವನ್ನು ವರ್ಗಾವಣೆ ಮಾಡಿರುತ್ತಾರೆ.
ಸೈಬರ್ ವಂಚಕರ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.