ಹಿರಿಯೂರಿನ ಪ್ರವಾಸಿ ಮಂದಿರದಲ್ಲಿಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಭೆ
--- ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಆಗ್ರಹ
ವಿಕ ಸುದ್ದಿಲೋಕ ಹಿರಿಯೂರು
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು, ಸರಕಾರಿ ಶಾಲೆಗಳ ಉಳಿವು ಹಾಗೂ ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ, ರೈತ ಹಾಗೂ ದಲಿತಪರ ಸಂಘಟನೆಗಳ ನೇತೃತ್ವದಲ್ಲಿನಡೆದ ಸಭೆಯಲ್ಲಿಸರಕಾರಕ್ಕೆ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿಬುಧವಾರ ಆಯೋಜಿಸಿದ್ದ ಬಗರ್ ಹುಕುಂ ಸಾಗುವಳಿದಾರರ ಸಭೆಯಲ್ಲಿಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿ, ತಾಲೂಕಿನಲ್ಲಿಸುಮಾರು ನಾಲ್ಕೈದು ದಶಕದಿಂದ ಭೂರಹಿತ ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದು, ಭೂಮಿ, ಮನೆ, ನಿವೇಶನ ಮಂಜೂರಾತಿ ಮಾಡುವಂತೆ ಅನೇಕ ಹೋರಾಟ ನಡೆಸಿದರೂ ಸರಕಾರಗಳು ಮಾತ್ರ ಮಂಜೂರಾತಿ ನೀಡುತ್ತಿಲ್ಲಎಂದು ಆರೋಪಿಸಿದರು.
ಬಗರ್ ಹುಕುಂ ಸಮಿತಿ ಕಾಲಮಿತಿಯೊಳಗೆ ಸಭೆ ನಡೆಸಿರುವುದಿಲ್ಲ. ನಮ್ಮನ್ನಾಳುವ ಸರಕಾರಗಳು ಸಾವಿರಾರು ಎಕರೆ ಭೂ ಪ್ರದೇಶವನ್ನು ಕಾರ್ಪೊರೇಟ್ ಕಂಪನಿಗಳಿಗೆ ನೀಡುತ್ತಿದ್ದಾರೆ. ರೈತರು ಒಂದು, ಎರಡು, ಮೂರು ಎಕರೆಯಷ್ಟು ವ್ಯವಸಾಯ ಮಾಡಿಕೊಂಡು ಬರುತ್ತಿದ್ದರೂ ರೈತರಿಗೆ ಭೂಮಿ ನೀಡುತ್ತಿಲ್ಲ. ಆದ್ದರಿಂದ ಬಗರ್ ಹುಕುಂ ಸಾಗುವಳಿದಾರರು ಸಂಘಟಿತರಾಗಿ, ಒಗ್ಗಟ್ಟಾಗಿ ಹೋರಾಟ ಕೈಗೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ರಾಜ್ಯದಲ್ಲಿನೂರಾರು ವರ್ಷಗಳ ಹಿಂದೆ ಸರಕಾರ ಮತ್ತು ದಾನಿಗಳಿಂದ ಪಡೆದ ಭೂಮಿ ಜಾಗದಲ್ಲಿಸರಕಾರಿ ಶಾಲೆಗಳು ನಡೆಯುತ್ತಿದ್ದು, ಆ ಶಾಲಾ ಆವರಣಗಳು ಈ ದಿನದಲ್ಲಿನೂರಾರು ಕೋಟಿ ಬೆಲೆ ಬಾಳುತ್ತಿದೆ. ಆದರೆ ಮಕ್ಕಳಿಲ್ಲದ ಕಾರಣ ಸರಕಾರಗಳು ಸರಕಾರಿ ಶಾಲೆಗಳನ್ನು ಮುಚ್ಚಲು, ಕಾರ್ಪೊರೇಟ್ ಕಂಪನಿಗಳಿಗೆ ಅಥವಾ ಖಾಸಗಿ ಕಂಪನಿಗಳಿಗೆ ನೀಡಲು ಮುಂದಾಗುತ್ತಿದ್ದಾರೆ. ಸರಕಾರಿ ಶಾಲೆ ಮುಚ್ಚಿದರೆ ಬಡ ಮತ್ತು ಮಾಧ್ಯಮ ವರ್ಗದವರು ಖಾಸಗಿ ಶಾಲೆಯಲ್ಲಿಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಶಕ್ತಿ ಇಲ್ಲ. ಆದ್ದರಿಂದ ಸರಕಾರಿ ಶಾಲೆಗಳನ್ನು ಮುಚ್ಚದಂತೆ ಹೆಚ್ಚಿನ ಅನುದಾನ ನೀಡಿ ಉಳಿಸುವ ಕಾರ್ಯವಾಗಬೇಕು ಎಂದರು.