ಆದಿಜಾಂಬವ ನಿಗಮಕ್ಕೆ ಗೋಣೆಮ್ಮನವರ ನಿರ್ದೇಶಕ

Contributed by: ganeshbyd143@gmail.com|Vijaya Karnataka•
durgesh goemmnavar appointed as director of adijambava development corporation
ವಿಕ ಸುದ್ದಿಲೋಕ ಬ್ಯಾಡಗಿ

ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ ಪಟ್ಟಣದ ಗಾಂಧಿನಗರ ನಿವಾಸಿ, ಪುರಸಭೆ ಮಾಜಿ ಸದಸ್ಯ, ಆಶ್ರಯ ಸಮಿತಿ ಸದಸ್ಯ, ಕಾಂಗ್ರೆಸ್ ಮುಖಂಡ ದುರ್ಗೇಶ ಗೋಣೆಮ್ಮನವರ ಅವರನ್ನು ಪಟ್ಟಣದ ಆಶ್ರಯ ಸಮಿತಿ ಕಚೇರಿಯಲ್ಲಿಆಶ್ರಯ ಸಮಿತಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿಮಾತನಾಡಿದ ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಯರೇಶಿಮಿ, ‘‘ಕಾಂಗ್ರೆಸ್ ಪಕ್ಷವು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ, ಅವರಿಗೆ ಸೂಕ್ತ ಸ್ಥಾನಮಾನ, ಜವಾಬ್ದಾರಿ ನೀಡುವ ಮೂಲಕ ಗೌರವಿಸುತ್ತಿದೆ. 30 ವರ್ಷಗಳಿಂದ ದುರ್ಗೇಶ ಗೋಣೆಮ್ಮನವರ ಕಾಂಗ್ರೆಸ್ ಸಂಘಟನೆ ಸೇರಿದಂತೆ ವಿವಿಧ ಸಾಮಾಜಿಕ, ರಾಜಕೀಯ ಚಟುವಟಿಕೆಗಳಲ್ಲಿನಿರಂತರವಾಗಿ ತೊಡಗಿಸಿಕೊಂಡು ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಅವರ ದೀರ್ಘಕಾಲದ ಸೇವೆ ಗುರುತಿಸಿ ಸರಕಾರ ನಿಗಮ ಮಂಡಳಿಯ ನಿರ್ದೇಶಕ ಸ್ಥಾನ ನೀಡಿರುವುದು ಸಂತಸದ ಸಂಗತಿ’’ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ದುರ್ಗೇಶ ಗೋಣೆಮ್ಮನವರ, ‘‘ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಾನು ರಾಜಕೀಯ ಜೀವನ ಆರಂಭಿಸಿದ್ದೆ. ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ತಕ್ಕ ಗೌರವ ದೊರೆಯುತ್ತಿರುವುದು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ’’ ಎಂದರು. ಆಶ್ರಯ ಸಮಿತಿ ಸದಸ್ಯರಾದ ಮಜೀದ ಮುಲ್ಲಾ, ಗಿರೀಶ ಇಂಡಿಮಠ, ಹನುಮಂತ ಬೊಮ್ಮಲಾಪುರ, ಖಾದರ ಸಾಬ ದೊಡ್ಡಮನಿ, ರಫೀಕ ಮುದುಗಲ್ , ಮಂಜೂರ ಹಕೀಮ್ , ಜೈಭೀಮ ರಾರಾವಿ, ಶ್ರೀನಿವಾಸ ಕುರಕುಂದಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪೋಟೊ-12ಬಿವೈಡಿ1

ರಾಜ್ಯ ಆದಿ ಜಾಂಬವ ಅಭಿವೃದ್ಧಿ ನಿಗಮ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಕಾಂಗ್ರೆಸ್ ಮುಖಂಡ ದುರ್ಗೇಶ ಗೋಣೆಮ್ಮನವರ ಅವರನ್ನು ಬ್ಯಾಡಗಿಯಲ್ಲಿಸನ್ಮಾನಿಸಲಾಯಿತು.