* ಪಕ್ಷದ ಕಾರ್ಯಕರ್ತರಿಗೆ ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ಕಿವಿಮಾತುವಿಕ ಸುದ್ದಿಲೋಕ ಹಿರೀಸಾವೆ
ಜಿಲ್ಲಾಪಂಚಾಯಿತಿ ಚುನಾವಣೆ ಸಮೀಪಿಸುತ್ತಿದ್ದು, ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಹೇಳಿದರು.
ಹೋಬಳಿಯ ಕಬ್ಬಳಿ ಗ್ರಾಮದಲ್ಲಿಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ‘‘ಪ್ರತಿಷ್ಠಿತ ನುಗ್ಗೇಹಳ್ಳಿ ಜಿಪಂ ಕ್ಷೇತ್ರವು ಎಸ್ ಟಿ ಮೀಸಲಾಗಿದ್ದು ಜೆ.ಕೆ.ಮಂಜುನಾಥ್ ಅವರನ್ನು ಗುರುತಿಸಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ’’ ಎಂದರು.
‘‘ ತಾಲೂಕಿನ ಉಳಿದ ಜಿಪಂ ಕ್ಷೇತ್ರಗಳಿಗೆ ಆಯಾ ವ್ಯಾಪ್ತಿಯ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಗೆಲ್ಲಿಸಿಕೊಳ್ಳುವ ಕರ್ತವ್ಯ ನಮ್ಮದಾಗಿದೆ. ಯಾರು ವಿಚಲಿತಗೊಳ್ಳುವುದು ಬೇಡ, ಈ ಬಾರಿ ಎಲ್ಲಾಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಕಾಣಲಿದ್ದಾರೆ’’ ಎಂದು ತಿಳಿಸಿದರು.
‘‘ರಾಜ್ಯದಲ್ಲಿಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ನಂತರ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಸಾರಥ್ಯದಲ್ಲಿಕೈಗೊಂಡಿರುವ ಜನಪರವಾದ ಗ್ಯಾರಂಟಿ ಹಾಗೂ ಇತರೆ ಯೋಜನೆಗಳು ಯಶಸ್ವಿಯಾಗಿವೆ. ರಾಜ್ಯ ಸರಕಾರದ ಕಾರ್ಯಕ್ರಮಗಳು ಎಲ್ಲಾಚುನಾವಣೆಗಳಲ್ಲಿಯೂ ದಿಕ್ಸೂಚಿಯಾಗಲಿವೆ’’ ಎಂದು ಕಾರ್ಯಕರ್ತರಿಗೆ ಭರವಸೆ ತುಂಬಿದರು.
‘‘ನಾನು ವಿಧಾನ ಪರಿಷತ್ ಸದಸ್ಯನಾಗಿದ್ದ ವೇಳೆಯಲ್ಲಿಎಲ್ಲಾಗ್ರಾಮಗಳಿಗೂ ಹೈಮಾಸ್ಟ್ ದೀಪಗಳು, ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಭವನ ಹಾಗೂ ದೇಗುಲಗಳ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಾಕಷ್ಟು ಅನುದಾನಗಳನ್ನು ನೀಡಲಾಗಿದೆ’’ ಎಂದು ತಿಳಿಸಿದರು.
‘‘ಕಳೆದ ಬಾರಿಯ ವಿಧಾನಸಭಾ ಚುನಾವಣೆ ಫಲಿತಾಂಶ ನಿಮಗೆಲ್ಲತಿಳಿದಿದೆ. ಈಗಲೂ ಜನಗಳ ಮಧ್ಯೆ ನಿಂತು ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಮಾಡುತ್ತೇನೆ. ನನಗೆ ಸೋಲು ಗೆಲುವು ಮುಖ್ಯವಲ್ಲ. ಜನಸಾಮಾನ್ಯರಿಗೆ ಕೆಲಸ ಮಾಡಬೇಕು ಎಂಬುದೇ ನನ್ನ ಗುರಿಯಾಗಿದೆ’’ ಎಂದು ತಿಳಿಸಿದರು.
ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎನ್ .ಟಿ. ಬೊಮ್ಮೇಗೌಡ, ಬಿ.ಎನ್ .ಮಂಜುನಾಥ್ , ಹಾಸನ ಜಿಲ್ಲಾಕಾಂಗ್ರೆಸ್ ಕಾರ್ಯದರ್ಶಿ ಕಿರಣ್ , ದಿಡಗ ಗ್ರಾಪಂ ಮಾಜಿ ಅಧ್ಯಕ್ಷ ಎನ್ .ಆರ್ . ರತ್ನರಾಜ್ , ಮಾಜಿ ಸದಸ್ಯ ನಾಗರಾಜ್ , ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.