ಬಂಡಿತ್ತಡ್ಕ ದಕ್ಷಿಣ ಕನ್ನಡ ಜಿಲ್ಲಾಹಿರಿಯ ಪ್ರಾಥಮಿಕ ಶಾಲೆಯಲ್ಲಿ 71ನೇ ರಾಜ್ಯೋತ್ಸವ ಸಂದರ್ಭ ಮಕ್ಕಳಿಂದ ರಚಿತ ಕನ್ನಡದ ಕಂಪು ಪಾಕ್ಷಿಕ ಭಿತ್ತಿಪತ್ರಿP ಬಿಡುಗಡೆಗೊಳಿಸಲಾಯಿತು.ಮುಖ್ಯ ಅತಿಥಿ, ಗಾಯಕ ದಿನೇಶ್ ಕನ್ಯಾನ , ಕನ್ಯಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಕೆ. ಶಾಹುಲ್ ಹಮೀದ್ ಶುಭ ಹಾರೈಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್ ಡಿಎಂಸಿ )ಅಧ್ಯಕ್ಷೆ ಕಮರುನ್ನೀಸಾ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಕೃಷ್ಣಕುಮಾರ್ ಕಮ್ಮಜೆ, ಕಾರ್ಯದರ್ಶಿ ಪ್ರಕಾಶ್ , ಹಿರಿಯ ವಿದ್ಯಾರ್ಥಿ ಅಝೀಜ್ , ಕನ್ಯಾನ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಬುಶ್ರಿಯಾ ಹಾಗೂ ಪೋಷಕರು ಉಪಸ್ಥಿತರಿದ್ದರು.
ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಧ್ವಜಾರೋಹಣ ನಡೆಯಿತು.
ಶಾಲೆಯ ಪೋಷಕ ಹಾಗೂ ಹಿರಿಯ ವಿದ್ಯಾರ್ಥಿ ಶಶಿಧರ್ ಕೆ . ಬಂಡಿತ್ತಡ್ಕ ಅವರ ಕಲಾರಂಗದ ಸೇವೆಗೆ ಈ ಬಾರಿಯ ಜಿಲ್ಲಾಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿದ ಹಿನ್ನೆಲೆಯಲ್ಲಿಅಭಿನಂದಿಸಲಾಯಿತು.
ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಹಾಗೂ ಕಿರುಪ್ರಹಸನ ಹಾಗೂ ದಿನೇಶ್ ಕನ್ಯಾನ ಅವರಿಂದ ಕನ್ನಡ ಗೀತಗಾಯನ ನಡೆಯಿತು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಭಾರ ಮುಖ್ಯಶಿಕ್ಷಕಿ ಸೆಕೀನಾ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಶಾರದಾ ವಂದಿಸಿದರು. ಅತಿಥಿ ಶಿಕ್ಷಕಿ ವನಿತಾ ಕಾರ್ಯಕ್ರಮ ನಿರೂಪಿಸಿದರು.
1111,ವಿಟಿಎಲ್ ಬಂಡಿತ್ತಡ್ಕ ಶಾಲೆ
ಕನ್ನಡದ ಕಂಪು ಪಾಕ್ಷಿಕ ಬಿತ್ತಿಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.