ಹಿರೇಮುನವಳ್ಳಿ ಗ್ರಾಮದ ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ನೂತನ ಕಟ್ಟಡದ ಅಡಿಗಲ್ಲುಸಮಾರಂಭವನ್ನು ಶಾಸಕ ವಿಠ್ಠಲ ಹಲಗೇಕರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಈ ಕಟ್ಟಡ ಕಾಮಗಾರಿಗೆ ಶಾಸಕರ ಅನುದಾನದಿಂದ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಪಿಡಿಒ ವಿರೇಶ ಸಜ್ಜನ್ ಪ್ರಾಸ್ತಾವಿಕ ಮಾತನಾಡಿ,‘‘ಗ್ರಾಮದ ಪ್ರತಿಷ್ಠಿತ ಮನೆತನದ ಹಾಗೂ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಮೋಹನ ಸಂಬರಗಿ ಅವರು ಗ್ರಾಪಂ ಕಟ್ಟಡ ನಿರ್ಮಾಣಕ್ಕೆ 11 ಗುಂಟೆ ಜಾಗ ದಾನವಾಗಿ ನೀಡಿದ್ದಾರೆ,’’ ಎಂದು ತಿಳಿಸಿದರು.