ಬಂಗಾರ ನಾಪತ್ತೆ: ವ್ಯಕ್ತಿ ಆತ್ಮಹತ್ಯೆ ಭಟ್ಕಳ: ಮ®

Contributed by: vishnubkl2018@gmail.com|Vijaya Karnataka•
gold theft shocking suicide of individual in bhatkal
ಭಟ್ಕಳ: ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ವೆಂಕಟಾಪುರದಲ್ಲಿನಡೆದಿದೆ.

ಮೃತರನ್ನು ಯಲ್ಲಾಪುರ ತಾಲೂಕಿನ ಹರಣಗದ್ದೆ ಮೂಲದ ಪ್ರಸ್ತುತ ತಾಲೂಕಿನ ಕಾಯ್ಕಿಣಿ ಗ್ರಾಮದ ಅಗ್ಗೋಳೆ ಬಸ್ತಿಯಲ್ಲಿವಾಸವಾಗಿದ್ದ ದಿನೇಶ ಮೋಹನ ಮಡಿವಾಳ (42) ಎಂದು ಗುರುತಿಸಲಾಗಿದೆ. ಸಿಪಿಐ ವೆಂಕಟೇಶ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಮಂಗಳವಾರ ಶೋಧ ಕಾರ್ಯ ನಡೆಸಿದ್ದರು. ಬುಧವಾರ ಬೆಳಗಿನ ಜಾವ ಶಿರಾಲಿ ಗ್ರಾಮದ ಮೊಗೇರಕೇರಿ ಸಮೀಪದ ವೆಂಕಟಾಪುರ ನದಿ ತೀರದಲ್ಲಿದಿನೇಶ ಅವರ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮೃತರ ಸಹೋದರ ದೀಪಕ ಮೋಹನ ಮಡಿವಾಳ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸಿದ್ದಾರೆ. ಮನೆಯ ಕಪಾಟಿನಲ್ಲಿಟ್ಟಿದ್ದ ಸುಮಾರು 12 ತೊಲೆ ಬಂಗಾರದ ಆಭರಣಗಳು ನಾಪತ್ತೆಯಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿತಿಳಿಸಲಾಗಿದೆ.