15ರಿಂದ ಗೋವನಿತಾಶ್ರಯ ಟ್ರಸ್ಟ್ ರಜತ ಸಂಭ್ರಮ

Contributed by: vijaya.poojary@timesofindia.com|Vijaya Karnataka•
govanithashraya trust celebrates 25 years silver jubilee events
ಚಂಡಿಕಾಯಾಗ, ಗೋವಿಗಾಗಿ ಹೊರೆಕಾಣಿಕೆ | ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮ

ವಿಕ ಸುದ್ದಿಲೋಕ ಮಂಗಳೂರು
ವಿಶ್ವಹಿಂದೂ ಪರಿಷತ್ ಪ್ರಕಲ್ಪವಾಗಿ ಶುಭಾರಂಭಗೊಂಡ ಪಜೀರು ಬೀಜಗುರಿಯಲ್ಲಿರುವ ಗೋವನಿತಾಶ್ರಯ ಟ್ರಸ್ಟ್ ನ ರಜತ ಮಹೋತ್ಸವ ಕಾರ್ಯಕ್ರಮ ನ.15 ಮತ್ತು ನ.16ರಂದು ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ನಡೆಯಲಿದೆ.

ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಗೋವಿನ ಅಕ್ರಮ ಸಾಕಾಣಿಕೆ, ಗೋವಧೆ ದಂಧೆಯ ನಿಯಂತ್ರಣಕ್ಕೆ 25 ವರ್ಷಗಳ ಹಿಂದೆ 1 ಜಾನುವಾರುವಿನಿಂದ ಆರಂಭವಾದ ಗೋಶಾಲೆಯಲ್ಲಿಪ್ರಸ್ತುತ 550ಕ್ಕೂ ಅಧಿಕ ಜಾನುವಾರುಗಳಿವೆ. ರಜತಮಹೋತ್ಸವ ಅಂಗವಾಗಿ ನ.15ರಂದು ಮಧ್ಯಾಹ್ನ 2.30ಕ್ಕೆ ಕದ್ರಿ ಶ್ರೀ ಕ್ಷೇತ್ರದಿಂದ ಗೋವಿಗಾಗಿ ಹೊರೆಕಾಣಿಕೆ ಅರ್ಪಣೆಯ ಕಾರ್ಯಕ್ರಮ ನಡೆಯಲಿದೆ. ಸಂಜೆ 4ರಿಂದ ಭಜನಾ ಸಂಕೀರ್ತನೆ, ಪಜೀರು ಗೋಶಾಲೆಯಲ್ಲಿಗೋಭಕ್ತ ಹೊರೆಕಾಣಿಕೆ ಜಾಥಾದ ಅಭೂತಪೂರ್ವ ಸಂಗಮ ನಡೆಯಲಿದೆ. 5ಕ್ಕೆ ಸಾಮೂಹಿಕ ಗೋಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಚಂಡಿಕಾಯಾಗ, ಸಮಾರೋಪ: ನ.16ರಂದು ಬೆಳಗ್ಗೆ 8ರಿಂದ ಚಂಡಿಕಾಯಾಗ, ಮಧ್ಯಾಹ್ನ 12ಗಂಟೆಗೆ ಪೂರ್ಣಾಹುತಿ ನಂತರ ಅನ್ನಸಂತರ್ಪಣೆ, 3ರಿಂದ ಗೋವಿನ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಸಂಜೆ 5ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ 7ರಿಂದ ಶಾರದಾ ಸಮೂಹ ವಿದ್ಯಾಸಂಸ್ಥೆಗಳಿಂದ ಶಾರದಾ ಕಲಾ ಸೌರಭ ನಡೆಯಲಿರುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿಟ್ರಸ್ಟ್ ನ ಕಾರ್ಯದರ್ಶಿ ಮನೋಹರ ಸುವರ್ಣ, ಕೋಶಾಧಿಕಾರಿ ಶರಣ್ ಪಂಪ್ ವೆಲ್ , ಟ್ರಸ್ಟಿಗಳಾದ ಡಾ.ಪಿ. ಅನಂತಕೃಷ್ಣ ಭಟ್ , ಶಿವಾನಂದ ಮೆಂಡನ್ , ಗೋಪಾಲ ಕುತ್ತಾರ್ , ಶಿವಪ್ರಸಾದ್ ಕೊಣಾಜೆ, ಪ್ರಮುಖರಾದ ಹೆಚ್ .ಕೆ. ಪುರುಷೋತ್ತಮ್ , ಶರವು ಗಣೇಶ್ ಭಟ್ ಉಪಸ್ಥಿತರಿದ್ದರು.

(ಬಾಕ್ಸ್ )

ಸರಕಾರದಿಂದ ಅನುದಾನ ಕೊರತೆ

ಪ್ರಸ್ತುತ ಕಾಲಘಟ್ಟದಲ್ಲಿಗೋಶಾಲೆಗಳನ್ನು ನಿರ್ವಹಣೆ ಮಾಡುವುದು ತ್ರಾಸದಾಯಕ ಕೆಲಸವಾಗಿದೆ. ನಾವು ದಾನಿಗಳ ಸಹಕಾರದಿಂದ ನಿರ್ವಹಣೆ ಮಾಡುತ್ತಿದ್ದೇವೆ. ಹಿಂದಿನ ರಾಜ್ಯ ಸರಕಾರವಿರುವಾಗ ಪುಣ್ಯಕೋಟಿ ಸೇರಿದಂತೆ ಬೇರೆ ಬೇರೆ ಅನುದಾನ ಮೂಲಕ ವರ್ಷಕ್ಕೆ 25 ಲಕ್ಷ ರೂ. ಅನುದಾನ ಬರುತ್ತಿತ್ತು. ಆದರೆ ಕಳೆದ 2 ವರ್ಷಗಳಿಂದ ತಲಾ 2ಲಕ್ಷ ರೂ. ಅನುದಾನ ಬಂದಿದೆ. ಈ ವರ್ಷ ಇನ್ನೂ ಅನುದಾನ ಬಂದಿಲ್ಲಎಂದು ಪುರಾಣಿಕ್ ಹೇಳಿದರು.

ರಾಜ್ಯ ಸರಕಾರವು ಗೋಶಾಲೆ ಗಳ ನಿರ್ಮಿಸುವುದು, ಗೋಶಾಲೆ ನಿರ್ವಹಣೆಗೆ ಅನುದಾನ ನೀಡುವುದು ಜವಾಬ್ದಾರಿಯಾಗಿದೆ. ಆದರೆ ರಾಜ್ಯ ಸರಕಾರ ಅದನ್ನು ಮರೆತಂತಿದೆ ಎಂದರು.