ಗೌರಿ ಸಕ್ಕರೆ ಕಾರ್ಖಾನೆ : ರೈತರ ಖಾತೆಗೆ ಬಾಕಿ ಹಣ ಜಮೆಬೀದರ್ : ಭಾಲ್ಕಿ ತಾಲೂಕಿನ ಬಾಜೋಳಗಾ ಕ್ರಾಸ್ ನಲ್ಲಿಇರುವ ಓಂಕಾರ ಗ್ರೂಪ್ ನ ಗೌರಿ ಶುಗರ್ ಆ್ಯಂಡ್ ಡಿಸ್ಟಲರೀಸ್ ಪ್ರೈವೇಟ್ ಲಿಮಿಟೆಡ್ (ಘಟಕ ಸಂಖ್ಯೆ 13) 2025-26ನೇ ಹಂಗಾಮಿನಲ್ಲಿಕಬ್ಬು ಪೂರೈಸಿದ ರೈತರ ಖಾತೆಗೆ ಪ್ರತಿ ಟನ್ ನ ರೂ. 100 ಬಾಕಿ ಹಣ ಗುರುವಾರ ಜಮೆ ಮಾಡಿದೆ. ಈ ಮೊದಲು ರೈತರಿಗೆ ಪ್ರತಿ ಟನ್ ಗೆ 2,900 ಸಂದಾಯ ಮಾಡಲಾಗಿತ್ತು. ಇದೀಗ ಪಾವತಿಸಿರುವ ರೂ. 100 ಹಾಗೂ ರಾಜ್ಯ ಸರಕಾದ ರೂ. 50 ಸೇರಿಸಿದರೆ ರೈತರಿಗೆ ಪ್ರತಿ ಟನ್ ಕಬ್ಬಿಗೆ ರೂ. 3,050 ದೊರೆತಿದೆ ಎಂದು ಓಂಕಾರ ಗ್ರೂಪ್ ಅಧ್ಯಕ್ಷ ಬಾಬುರಾವ್ ಬೋತ್ರೆ ಪಾಟೀಲ ಪ್ರಕಟಣೆಯಲ್ಲಿತಿಳಿಸಿದ್ದಾರೆ. ಕಾರ್ಖಾನೆ ನುಡಿದಂತೆ ನಡೆದುಕೊಂಡಿದೆ.ರೈತರ ಹಿತ ರಕ್ಷಣೆಯಲ್ಲಿಸದಾ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಕಬ್ಬು ಪೂರೈಸಿದ ರೈತರಿಗೆ ಉಚಿತ ಸಕ್ಕರೆ ವಿತರಣೆ ಮಾಡಲಿದೆ ಎಂದು ತಿಳಿಸಿದ್ದಾರೆ. ಬೀದರ್ ಜಿಲ್ಲೆಯ ರೈತರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ ಸಹಕರಿಸಬೇಕು ಎಂದು ವಿನಂತಿಸಿದ್ದಾರೆ.