4.52 ಕೋಟಿ ರೂ. ವೆಚ್ಚದಲ್ಲಿಚೆಕ್ ಡ್ಯಾಂನಿರ್ಮಾಣಕ್ಕೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಭೂಮಿಪೂಜೆ
---ಚೆಕ್ ಡ್ಯಾಮ್ ನಿರ್ಮಾಣದಿಂದ ಅಂತರ್ಜಲ ವೃದ್ಧಿ
ವಿಕ ಸುದ್ದಿಲೋಕ ಚಿತ್ರದುರ್ಗ
ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿಹೆಚ್ಚಿನ ಸಂಖ್ಯೆಯಲ್ಲಿಚೆಕ್ ಡ್ಯಾಂಗಳನ್ನು ನಿರ್ಮಿಸುವ ಮೂಲಕ ಮಳೆನೀರಿನ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ತಿಳಿಸಿದರು.
ತಾಲೂಕಿನ ಜೋಡಿ ಚಿಕ್ಕೇನಹಳ್ಳಿ ಗ್ರಾಮದ ಹಳ್ಳಕ್ಕೆ ಸುಮಾರು 240 ಲಕ್ಷ ವೆಚ್ಚದಲ್ಲಿಚೆಕ್ ಡ್ಯಾಂ ಮತ್ತು ಕ್ಯಾಸ್ಟೇ ನಿರ್ಮಾಣ ಮತ್ತು ದೇಪುರದ ಹಟ್ಟಿ ಗ್ರಾಮದ ಹಳ್ಳಕ್ಕೆ 212 ಲಕ್ಷ ವೆಚ್ಚದಲ್ಲಿಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಚೆಕ್ ಡ್ಯಾಂ ನಿರ್ಮಾಣದಿಂದ ಸುತ್ತಮುತ್ತಲಿನ ರೈತರ ಕೊಳವೆಬಾವಿ, ತೆರೆದ ಬಾವಿಗಳಲ್ಲಿನೀರಿನ ಮರುಪೂರಣಕ್ಕೆ ಅನುಕೂಲವಾಗುತ್ತದೆ. ವಿಶೇಷವಾಗಿ ಮಳೆ ಆಶ್ರಿತ ಕೃಷಿ ಮಾಡುವ ರೈತರಿಗೆ ಇಂತಹ ಕಾಮಗಾರಿಗಳು ಹೆಚ್ಚಿನ ಪ್ರಯೋಜನ ನೀಡಲಿವೆ. ಬೇಸಿಗೆಯ ಸಂದರ್ಭದಲ್ಲಿಎದುರಾಗುವ ನೀರಿನ ಸಮಸ್ಯೆಯನ್ನು ಕಡಿಮೆ ಮಾಡುವುದಕ್ಕೂ ಚೆಕ್ ಡ್ಯಾಂಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿನೀರಿನ ಸಂರಕ್ಷಣೆ ಪ್ರಮುಖ ಪಾತ್ರ ವಹಿಸುತ್ತದೆ. ಕೇವಲ ಹೊಸ ಕೆರೆಗಳನ್ನು ನಿರ್ಮಿಸುವುದಷ್ಟೇ ಅಲ್ಲದೆ, ಈಗಿರುವ ಕೆರೆ, ಕಟ್ಟೆ, ಹಳ್ಳ ಹಾಗೂ ಜಲಮೂಲಗಳನ್ನು ಸಂರಕ್ಷಿಸುವುದು ಕೂಡ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಳೆನೀರು ಎಲ್ಲಿಬೀಳುತ್ತದೆಯೋ ಅಲ್ಲಿಯೇ ಸಾಧ್ಯವಾದಷ್ಟು ಸಂಗ್ರಹಿಸಿ ಭೂಮಿಗೆ ಇಂಗಿಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ. ಕಳಪೆ ಕಾಮಗಾರಿ ಮಾಡುವ ವಿಚಾರ ಗಮನಕ್ಕೆ ಬಂದಲ್ಲಿತಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಸಣ್ಣ ನೀರಾವರಿ ಇಲಾಖೆ ಎಇಇ ಭೀಮರಾಜ್ ಮಾತನಾಡಿ, ಜಲಸಂರಕ್ಷಣಾ ಕಾಮಗಾರಿಗಳು ಕೇವಲ ಒಂದು ಗ್ರಾಮದ ಅಭಿವೃದ್ಧಿಗೆ ಸೀಮಿತವಾಗದೆ ಸುತ್ತಮುತ್ತಲಿನ ಪ್ರದೇಶಗಳಿಗೂ ಪ್ರಯೋಜನ ನೀಡುತ್ತವೆ. ಚೆಕ್ ಡ್ಯಾಮ್ ಗಳ ನಿರ್ಮಾಣದ ಜೊತೆಗೆ ಈಗಾಗಲೇ ನಿರ್ಮಿಸಿರುವ ಜಲಸಂರಕ್ಷಣಾ ಕಾಮಗಾರಿಗಳ ನಿರ್ವಹಣೆಗೂ ಆದ್ಯತೆ ನೀಡಬೇಕು. ರೈತರು ಹಾಗೂ ಗ್ರಾಮಸ್ಥರು ಜಲಮೂಲಗಳ ಸಂರಕ್ಷಣೆಯಲ್ಲಿಸಹಕರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿತಹಸೀಲ್ದಾರ್ ಫಾತಿಮಾ, ತಾಪಂ ಇಓ ಜಯಸಿಂಹ, ಎಇ ಸುಹಿಲ್ ರಹೀಮ್ , ಜಿಲ್ಲಾಗ್ಯಾರಂಟಿ ಸಮಿತಿ ಸದಸ್ಯ ಸಂತೋಷ್ , ಮುಖಂಡರಾದ ಹನೀಸ್ , ಖುದ್ದೂಸ್ , ವಿಜಯ್ ಕುಮಾರ್ , ನಾಗರಾಜ್ , ಮಂಜುನಾಥ್ , ತಿಪ್ಪೇಶ್ , ರಂಗಸ್ವಾಮಿಹಾಗೂ ಇತರರು ಇದ್ದರು.
---
12ಸಿಟಿಡಿ40/ ತಾಲೂಕಿನ ಜೋಡಿ ಚಿಕ್ಕೇನಹಳ್ಳಿ ಮತ್ತು ದೇವಪುರದಹಟ್ಟಿ ಗ್ರಾಮಗಳಲ್ಲಿನ ಹಳ್ಳಗಳಿಗೆ ಗುರುವಾರ ಸುಮಾರು 4.52 ಕೋಟಿ ರೂ. ವೆಚ್ಚದಲ್ಲಿಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೂಮಿಪೂಜೆ ನೆರವೇರಿಸಿದರು.