ಜೆಎಸ್ ಎಸ್ -ಎಸ್ ಟಿಯು ಅಂತರ ಸಂಸ್ಥೆಗಳ ಕ್ರಿಕೆಟ್ ಟೂರ್ನಿಗೆ ಚಾಲನೆ

Contributed by: Beeresha M|Vijaya Karnataka•
inauguration of jss sts university cricket tournament
ವಿಕ ಸುದ್ದಿಲೋಕ ಮೈಸೂರು ನಗರದ ಜೆಎಸ್ ಎಸ್ -ಎಸ್ ಟಿಯುನಲ್ಲಿಪುರುಷರಿಗಾಗಿ ಆಯೋಜಿಸಿರುವ 4ನೇ ಆವೃತ್ತಿಯ ಅಂತರ ಸಂಸ್ಥೆಗಳ ಕ್ರಿಕೆಟ್ ಪಂದ್ಯಾವಳಿಗೆ ಗುರುವಾರ ಚಾಲನೆ ದೊರೆಯಿತು. ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಎಸ್ ಜೆಸಿಇ ಸಹಯೋಗದಲ್ಲಿಆಯೋಜಿಸಿರುವ ಮೂರು ದಿನಗಳ ಪಂದ್ಯಾವಳಿಗೆ ಜೆಎಸ್ ಎಸ್ -ಎಸ್ ಟಿಯು ಕುಲಪತಿ ಡಾ.ಎ.ಎನ್ . ಸಂತೋಷ್ ಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಎಸ್ ಎಎಇ ಮತ್ತು ವಿಜ್ಞಾನ ವಿಭಾಗದ ಡೀನ್ ಡಾ. ಎಂ.ಎನ್ . ನಾಗೇಂದ್ರ ಪ್ರಸಾದ್ , ವಿಶ್ವವಿದ್ಯಾಲಯದಲ್ಲಿನಾನಾ ಕ್ರೀಡಾಕೂಟಗಳನ್ನು ಆಯೋಜಿಸಲು ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಪಂದ್ಯಾವಳಿಯಲ್ಲಿಭಾಗವಹಿಸಿರುವ ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಅವರು, ‘‘ಗೆಲುವು-ಸೋಲು ಕ್ರೀಡೆಯ ಸಹಜ ಭಾಗ. ಆದರೆ, ಕ್ರೀಡೆಯಲ್ಲಿಪಾಲ್ಗೊಳ್ಳುವಿಕೆ ಮತ್ತು ಕ್ರೀಡಾಸ್ಫೂರ್ತಿ ಅತ್ಯಂತ ಮುಖ್ಯ,’’ ಎಂದು ತಿಳಿಸಿದರು. ‘‘ನಾನಾ ಜೆಎಸ್ ಎಸ್ ಸಂಸ್ಥೆಗಳ ವಿದ್ಯಾರ್ಥಿಗಳಲ್ಲಿಕ್ರೀಡಾಸ್ಫೂರ್ತಿ, ತಂಡಭಾವನೆ, ಶಿಸ್ತು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಟೂರ್ನಿ ಆಯೋಜಿಸಲಾಗಿದೆ. ಕ್ರೀಡೆ ಕೇವಲ ಮನರಂಜನೆಯ ಸಾಧನವಲ್ಲ, ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನೂ ಕಾಪಾಡುವ ಶಕ್ತಿ ಕ್ರೀಡೆಗಿದೆ. ಕ್ರೀಡೆಯಿಂದ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ, ತಾಳ್ಮೆ ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ,’’ ಎಂದರು. ‘‘ಗೆಲುವು ನಮ್ಮಲ್ಲಿಸಂತೋಷವನ್ನು ತುಂಬಿದರೆ, ಸೋಲು ಜೀವನದಲ್ಲಿಸವಾಲುಗಳನ್ನು ಎದುರಿಸುವ ಪಾಠ ಕಲಿಸುತ್ತದೆ. ತಂಡವಾಗಿ ಆಡುವ ಕ್ರೀಡೆಗಳು ಒಗ್ಗಟ್ಟು, ಸಹಕಾರ ಮತ್ತು ಪರಸ್ಪರ ಗೌರವದ ಮಹತ್ವವನ್ನು ತಿಳಿಸುತ್ತವೆ. ಇಂದಿನ ಮೊಬೈಲ್ ಮತ್ತು ಕಂಪ್ಯೂಟರ್ ಯುಗದಲ್ಲಿಮಕ್ಕಳು ಆಟದ ಮೈದಾನದಿಂದ ದೂರವಾಗುತ್ತಿದ್ದಾರೆ. ಇದು ಆತಂಕದ ಸಂಗತಿ. ಓದಿನಷ್ಟೇ ಕ್ರೀಡೆಗೂ ಆದ್ಯತೆ ನೀಡಬೇಕು. ಆದ್ದರಿಂದ ಪ್ರತಿಯೊಬ್ಬರೂ ನಿತ್ಯ ಸ್ವಲ್ಪ ಸಮಯವನ್ನಾದರೂ ಕ್ರೀಡೆಗೆ ಮೀಸಲಿಡೋಣ. ಕ್ರೀಡಾಸ್ಫೂರ್ತಿಯನ್ನು ಬೆಳೆಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ,’’ ಎಂದರು. ‘‘ಕ್ರಿಕೆಟ್ ಪ್ರತಿಯೊಬ್ಬರ ಜೀವನದಲ್ಲೂವಿಶೇಷ ಸ್ಥಾನ ಪಡೆದಿರುವ ಜನಪ್ರಿಯ ಕ್ರೀಡೆಯಾಗಿದೆ. ಬಹುತೇಕ ಎಲ್ಲರೂ ಒಂದಲ್ಲಒಂದು ಸಂದರ್ಭದಲ್ಲಿಕ್ರಿಕೆಟ್ ಆಡಿದ ಅನುಭವ ಹೊಂದಿರುತ್ತಾರೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿಅನಗತ್ಯವಾಗಿ ಸಮಯ ಕಳೆಯುವುದನ್ನು ಕಡಿಮೆ ಮಾಡಿ, ತಮ್ಮ ಸಮಯ ಮತ್ತು ಶಕ್ತಿಯನ್ನು ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ವಿನಿಯೋಗಿಸಬೇಕು,’’ ಎಂದು ಸಲಹೆ ನೀಡಿದರು. ಪಂದ್ಯಾವಳಿಯಲ್ಲಿಪಾಲ್ಗೊಳ್ಳುತ್ತಿರುವ ಎಲ್ಲತಂಡಗಳಿಗೂ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿಎಸ್ ಜೆಸಿಇ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಎಂ.ಎಸ್ . ಸುನಿಲ್ ಕುಮಾರ್ , ಜೆಎಸ್ ಎಸ್ -ಎಸ್ ಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ. ರೇವಣ್ಣ ಉಪಸ್ಥಿತರಿದ್ದರು.