ಮಂಜೇಶ್ವರ: ವಿದೇಶದಲ್ಲಿತಲೆಮರೆಸಿಕೊಂಡಿರುವ ಕೊಲೆ ಆರೋಪಿ ಜತೆ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸಹಿತ ಕೇರಳದ ಇಬ್ಬರು ಶಾಸಕರು ಆತ್ಮೀಯತೆಯಿಂದ ಬೆರೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ದುಬೈನಲ್ಲಿನಡೆದ ಜುವೆಲ್ಲರಿ ಉದ್ಘಾಟನಾ ಸಮಾರಂಭದಲ್ಲಿಯುಡಿಎಫ್ ನಾಯಕರು ಕೊಲೆ ಆರೋಪಿ ಅಹ್ಮದ್ ರಾಯಿಸ್ ಜತೆಗೆ ಫೋಟೋ ತೆಗೆದಿದ್ದು, ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಮಂಜೇಶ್ವರದ ಪೈವಳಿಕೆಯಲ್ಲಿ ನಡೆದಿದ್ದ ಅಬೂಬಕರ್ ಸಿದ್ದಿಕ್ ಕೊಲೆ ಪ್ರಕರಣದಲ್ಲಿ ಪೈವಳಿಕೆ ನಿವಾಸಿ ಅಹ್ಮದ್ ರಾಯೀಸ್ ಆರೋಪಿಯಾಗಿದ್ದ. ಕೃತ್ಯದ ಬಳಿಕ ಆರೋಪಿ ಪೊಲೀಸರಿಗೆ ಸಿಗದೇ ವಿದೇಶಕ್ಕೆ ಪರಾರಿಯಾಗಿದ್ದ. ಈ ಸಂಬಂಧ ರಾಜ್ಯ ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಯಾಗಿ ಶೋಧ ಕಾರ್ಯ ಮುಂದುವರಿಸಿದ್ದರು. ಇದೀಗ ಆರೋಪಿ ಜತೆ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ , ಸಂದೀಪ್ ವಾರಿಯರ್ ಹಾಗೂ ಮಾಜಿ ಶಾಸಕ, ಕಾಸರಗೋಡು ಜಿಲ್ಲಾಮುಸ್ಲಿಂ ಲೀಗ್ ಅಧ್ಯಕ್ಷ ಎನ್ .ಎ. ನೆಲ್ಲಿಕುನ್ನು ಫೋಟೋ ವೈರಲ್ ಆಗಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.ಪ್ರಕರಣದ ಹಿನ್ನೆಲೆ: 2022ರ ಜೂನ್ 26ರಂದು ದುಬೈಗೆ ಡಾಲರ್ ಸಾಗಾಟಕ್ಕೆ ಸಂಬಂಧಿಸಿದ ವಿವಾದದಲ್ಲಿಅಬೂಬಕ್ಕರ್ ಸಿದ್ದಿಕ್ ನನ್ನು ಅಪಹರಿಸಿ ಕೊಲೆಗೈಯಲಾಗಿತ್ತು. ಈ ಪ್ರಕರಣದಲ್ಲಿ ಅಹ್ಮದ್ ರಾಯೀಸ್ 13ನೇ ಆರೋಪಿಯಾಗಿದ್ದಾನೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ತನಿಖಾ ತಂಡ ಲುಕ್ ಔಟ್ ನೋಟಿಸ್ ಜಾರಿಗೊಳಿಸಿತ್ತು.
ತನಿಖೆಗೆ ಬಿಜೆಪಿ ಆಗ್ರಹ
ಆರೋಪಿ ರಾಯಿಸ್ ಜತೆ ಮಂಜೇಶ್ವರ ಶಾಸಕರಿಗೆ ಇರುವ ಸಂಬಂಧ ಏನು ಎಂಬುದನ್ನು ಶಾಸಕರು ಸ್ಪಷ್ಟಪಡಿಸಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಆದರ್ಶ ಬಿ.ಎಂ.ಆಗ್ರಹಿಸಿದ್ದಾರೆ. ಪೈವಳಿಕೆಯಲ್ಲಿ ನಡೆದ ಸಿದ್ದಿಕ್ ಕೊಲೆ ಆರೋಪಿಗಳ ಬಂಧನಕ್ಕೆ ನಡೆದ ಪ್ರತಿಭಟನೆಗಳ ಒತ್ತಡದಿಂದ ಮಂಜೇಶ್ವರ ಶಾಸಕರು ಆರೋಪಿಗಳನ್ನು ಬಂಧಿಸಬೇಕೆಂದು ಅಂದು ವಿಧಾನಸಭೆಯಲ್ಲಿಒತ್ತಾಯಿಸಿದ್ದರು. ಹಾಗಿದ್ದರೆ ಅಂದು ಶಾಸಕರು ನಾಟಕ ಮಾಡಿದ್ದೆ ಎಂದು ಬಿಜೆಪಿ ಪ್ರಶ್ನಿಸಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿದೆ.
11ಎಂಜೆಅಶ್ರಫ್ - ಆರೋಪಿ ಜೊತೆ ಮಂಜೇಶ್ವರ ಶಾಸಕರ ಫೋಟೋ ವೈರಲ್