* ಪಿಂಕ್ ಮಾರ್ಗದ ತಾವರೆಕೆರೆ ನಿಲ್ದಾಣದಲ್ಲಿಉದ್ಘಾಟನಾ ಕಾರ್ಯಕ್ರಮ | ಸ್ಟೇಷನ್ ಸುತ್ತ ಕಟ್ಟೆಚ್ಚರ
ವಿಕ ಸುದ್ದಿಲೋಕ ಬೆಂಗಳೂರುಪ್ರಧಾನಿ ನರೇಂದ್ರಮೋದಿ ಆಗಮನದ ಹಿನ್ನೆಲೆಯಲ್ಲಿದಕ್ಷಿಣ ವಿಭಾಗ ಸೇರಿದಂತೆ ನಗರಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ನೇತೃತ್ವದಲ್ಲಿಇಬ್ಬರು ಜಂಟಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ತಾವರೆಕರೆ ಮೆಟ್ರೊ ನಿಲ್ದಾಣ ಸುತ್ತಮುತ್ತಲ ಪ್ರದೇಶಗಳಲ್ಲಿಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಪ್ರಧಾನಿ ಭೇಟಿ ನೀಡುವ ಪ್ರತಿ ಸ್ಥಳದಲ್ಲಿ‘ನೋ ಫ್ಲೈಯಿಂಗ್ ’ ಜೋನ್ ಪ್ರದೇಶ ಎಂದು ಘೋಷಿಸಲಾಗಿದೆ. ಬಾಂಬ್ ಸ್ಕಾ$್ವಡ್ , ಶ್ವಾನದಳಗಳಿಂದ ತಪಾಸಣೆ ನಡೆಸಲಾಗಿದೆ. ಕೇಂದ್ರ ರಕ್ಷಣಾ ಸಂಸ್ಥೆಗಳ ಜತೆ ಚರ್ಚಿಸಿ ಹಲವು ಗೌಪ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಂಚಾರ ಮಾರ್ಗ ಬದಲಾವಣೆ :
ಮತ್ತೊಂದೆಡೆ, ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿಆಡುಗೋಡಿ, ಜಯನಗರ, ಜೆ.ಪಿ.ನಗರ, ತಲಘಟ್ಟಪುರ ಹಾಗೂ ಹುಳಿಮಾವು ಸಂಚಾರ ಠಾಣಾ ವ್ಯಾಪ್ತಿಯ ಹಲವು ರಸ್ತೆಗಳಲ್ಲಿವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಬದಲಿಗೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ವಾಹನ ಸವಾರರಿಗೆ ಸೂಚಿಸಲಾಗಿದೆ. ಪ್ರಧಾನಿ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ತೆರಳುವ ತನಕ ವಾಹನ ಸಂಚಾರದ ತಾತ್ಕಾಲಿಕ ನಿರ್ಬಂಧ ಇರಲಿದೆ. ಈ ಸಮಯದಲ್ಲಿವಾಹನ ಸವಾರರು ಬದಲಿ ಮಾರ್ಗಗಳನ್ನು ಬಳಸಬೇಕು ಎಂದು ಪೊಲೀಸರು ಸಲಹೆ ಮಾಡಿದ್ದಾರೆ.
ಸಂಚಾರ ನಿರ್ಬಂಧ :
ಬನ್ನೇರುಘಟ್ಟ ರಸ್ತೆಯಲ್ಲಿಆನೆಪಾಳ್ಯ ಜಂಕ್ಷನ್ ನಿಂದ ಡೇರಿ ಸರ್ಕಲ್ ಮೂಲಕ ಜಯದೇವ ಆಸ್ಪತ್ರೆ ಕಡೆಗೆ ಹೋಗುವ ಎಲ್ಲಾವಾಹನಗಳ ಸಂಚಾರವನ್ನು ಮೈಕೋ ಬಂಡೆ ಜಂಕ್ಷನ್ ಮತ್ತು ಡೇರಿ ಸರ್ಕಲ್ ಅಂಡರ್ ಪಾಸ್ ಬಳಿ ಕಾರ್ಯಕ್ರಮ ನಡೆಯುವ ವೇಳೆಯಲ್ಲಿತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.
ಜಯನಗರದ ಮಾರೇನಹಳ್ಳಿ ಮುಖ್ಯ ರಸ್ತೆಯ 28ನೇ ಮುಖ್ಯ ರಸ್ತೆ ಕಡೆಯಿಂದ ಜಯದೇವ ಆಸ್ಪತ್ರೆ ಜಂಕ್ಷನ್ , ಈಸ್ಟ್ ಎಂಡ್ ಮುಖ್ಯ ರಸ್ತೆಯ ಈಸ್ಟ್ ಎಂಡ್ ಜಂಕ್ಷನ್ ನಿಂದ ಸ್ವಾಗತ್ ಜಂಕ್ಷನ್ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ ಸಂಚರಿಸುವ ವಾಹನಗಳ ಸಂಚಾರಕ್ಕೆ ನಿರ್ಬಂಧವಿರಲಿದೆ.
ಜೆ.ಪಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊರವರ್ತುಲ ರಸ್ತೆಯ 15ನೇ ಕ್ರಾಸ್ , 24ನೇ ಮುಖ್ಯರಸ್ತೆಯ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ಜೆ.ಡಿ. ಮರ ಜಂಕ್ಷನ್ ; ಆರ್ .ವಿ ಡೆಂಟಲ್ ಜಂಕ್ಷನ್ ನಿಂದ ಬನ್ನೇರುಘಟ್ಟ ಮುಖ್ಯರಸ್ತೆವರೆಗೆ ( 9ನೇ ಅಡ್ಡ ರಸ್ತೆ), ಬಿ.ಪಿ.ಎಲ್ ಅರಕೆರೆ ಮುಖ್ಯರಸ್ತೆ, ಬನ್ನೇರುಘಟ್ಟ ಮುಖ್ಯರಸ್ತೆಯವರೆಗೆ ನಿರ್ಬಂಧ ಇರಲಿದೆ.
ಗೊಟ್ಟಿಗೆರೆ ಕೆರೆ ಹತ್ತಿರ ಮತ್ತು ಕರ್ಣಾಟಕ ಬ್ಯಾಂಕ್ ಸಮೀಪದ ಬನ್ನೇರುಘಟ್ಟ ರಸ್ತೆ ಕಡೆಗೆ, ಲೊಯೋಲಾ ಶಾಲೆಯ ಮುಂಭಾಗದ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹುಳಿಮಾವು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ಮುಖ್ಯ ರಸ್ತೆಯಿಂದ ಅರಕೆರೆ / ಬಿಳೇಕಹಳ್ಳಿ / ಮೈಕೋ ಲೇಔಟ್ / ಡೇರಿ ಸರ್ಕಲ್ ಹಾಗೂ ನಗರದ ಕಡೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಡೇರಿ ಸರ್ಕಲ್ ಜಂಕ್ಷನ್ ನಿಂದ ಅರಕೆರೆ ಜಂಕ್ಷನ್ ವರೆಗೆ ಬನ್ನೇರುಘಟ್ಟ ರಸ್ತೆಯಲ್ಲಿಯೂ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ನಿರ್ಬಂಧವಿರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನ ನಿಲುಗಡೆ ನಿಷೇಧ :
8ನೇ ಮುಖ್ಯರಸ್ತೆ, ಜೆ.ಪಿ ನಗರ 2ನೇ ಹಂತ, 15ನೇ ಕ್ಲಾಸ್ ರಸ್ತೆಯ ದಾಲ್ಮಿಯಾ ಜಂಕ್ಷನ್ ನಿಂದ ಬನ್ನೇರುಘಟ್ಟ ಮುಖ್ಯ ರಸ್ತೆಯವರೆಗೆ, ಮಾರೇನಹಳ್ಳಿ ಮುಖ್ಯ ರಸ್ತೆ, ತಿಲಕನಗರ, ಈಸ್ಟ್ ಎಂಡ್ ಮುಖ್ಯ ರಸ್ತೆ, ತಿಲಕ್ ನಗರ ಸ್ವಾಗತ್ ಮುಖ್ಯ ರಸ್ತೆ, 28ನೇ ಮುಖ್ಯರಸ್ತೆಯಲ್ಲಿವಾಹನಗಳ ನಿಲುಗಡೆ ನಿಷೇಧ ವಿಧಿಸಲಾಗಿದೆ.
ಬಾಕ್ಸ್ :
ನೋ ಫ್ಲೈಯಿಂಗ್ ಜೋನ್ ಘೋಷಣೆ
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ತಾವರೆಕೆರೆ ಪಿಂಕ್ ಮೆಟ್ರೊ ನಿಲ್ದಾಣ ಉದ್ಘಾಟಿಸಲಿದ್ದಾರೆ. ಹೀಗಾಗಿ, ಭದ್ರತೆ ಸಲುವಾಗಿ ಈ ಪ್ರದೇಶದ 1 ಕಿ.ಮೀ. ವ್ಯಾಪ್ತಿಯನ್ನು ನೋ ಫ್ಲೈಯಿಂಗ್ ಜೋನ್ ಎಂದು ಘೋಷಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
‘‘ತಾವರೆಕೆರೆ ಮೆಟ್ರೊ ನಿಲ್ದಾಣ ಹಾಗೂ ಐಎಂಎಂಬಿ ಮೆಟ್ರೊ ನಿಲ್ದಾಣ ಸುತ್ತಮುತ್ತಲಿನ 1 ಕಿ.ಮೀ.ವ್ಯಾಪ್ತಿವರೆಗೆ ಶುಕ್ರವಾರ ಬೆಳಗ್ಗೆ 7ರಿಂದ 4ರವರೆಗೆ ತಾತ್ಕಾಲಿಕವಾಗಿ ಡ್ರೋನ್ , ಹೆಲಿಕಾಪ್ಟರ್ ಸೇರಿದಂತೆ ವಿಮಾನಗಳನ್ನು ನಿರ್ದಿಷ್ಟ ವಾಯುಪ್ರದೇಶದಲ್ಲಿಹಾರಾಟ ನಡೆಸದಂತೆ ನಿರ್ಬಂಧಿಸಲಾಗಿದೆ,’’ ಎಂದು ಆಯುಕ್ತರು ಆದೇಶದಲ್ಲಿತಿಳಿಸಿದ್ದಾರೆ.
**
ಫೊಟೊ :
ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿಪಿಂಕ್ ಮೆಟ್ರೊ ಮಾರ್ಗದ ಪಿಲ್ಲರ್ ಹಾಗೂ ನಿಲ್ದಾಣಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.